ಮುಖ್ಯ ಸುದ್ದಿ
ಕಿಚ್ಚನ ಜೊತೆ ಕಾರಲ್ಲಿ ಕುಳಿತ ಡಾಲಿಗೆ ಅಚ್ಚರಿ
CHITRADURGA NEWS | 23 DECEMBER 2024
ಚಿತ್ರದುರ್ಗ: ನಟ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಇವೆಂಟ್ ಕಾರಣಕ್ಕೆ ಕನ್ನಡ ಚಿತ್ರರಂಗದ ಸಾಕಷ್ಟು ನಟರು ಚಿತ್ರದುರ್ಗಕ್ಕೆ ಆಗಮಿಸಿದ್ದರು.
ಸಂಜೆಯೇ ಚಿತ್ರದುರ್ಗಕ್ಕೆ ಆಗಮಿಸಿದ ನಟ ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬ ಜೊತೆಗೆ ಸಿನಿಮಾದ ಇತರೆ ನಟರು ಹೆದ್ದಾರಿಯಲ್ಲೇ ಇರುವ ಹೋಟೆಲ್ ಐಶ್ವರ್ಯಾ ನವೀನ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಇದನ್ನೂ ಓದಿ: ವಾಣಿವಿಲಾಸ ಸಾಗರದಲ್ಲಿ 29.74 ಟಿಎಂಸಿ ನೀರು ಜಮಾವಣೆ
ಆನಂತರ ಒಬ್ಬೊಬ್ಬರಾಗಿ ಜಯದೇವ ಕ್ರೀಡಾಂಗಣಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕೊನೆಗೆ ನಟರಾದ ಕಿಚ್ಚ ಸುದೀಪ್ ಹಾಗೂ ಡಾಲಿ ಧನಂಜಯ ಒಟ್ಟಿಗೆ ರಾತ್ರಿ 9 ಗಂಟೆ ವೇಳೆಗೆ ನವೀನ್ ಹೋಟೆಲ್‍ನಿಂದ ಹೊರಟರು.
ಈ ವೇಳೆ ಹೋಟೆಲ್ ಕಾಂಪೌಂಡ್ ಬಳಿ ಜಮಾಯಿಸಿದ್ದ ಅಭಿಮಾನಿಗಳನ್ನು ನಿಭಾಯಿಸಲು ಪೊಲೀಸರು ಹರಸಾಹಸ ಮಾಡಿದರು. ಬ್ಯಾರಿಕೇಟ್ ಕೂಡಾ ಕೆಳಗೆ ಬಿದ್ದಿತ್ತು.
ಇದನ್ನೂ ಓದಿ: ದುರ್ಗದ ಪ್ರೀತಿಗೆ ಶರಣಾದ ಕಿಚ್ಚ ಸುದೀಪ್ | ಕುಟುಂಬ ಸಮೇತ ಕೋಟೆನಾಡಿಗೆ ಆಗಮನ
ರಸ್ತೆಯುದ್ದಕ್ಕೂ ಕಿಚ್ಚ ಸುದೀಪ್ ಭಾವಚಿತ್ರ ಹೊಂದಿದ ಬ್ಯಾನರ್, ಭಾವುಟ, ಪೋಟೊ ಹಿಡಿದು ಅಭಿಮಾನ ಪ್ರದರ್ಶಿಸಿದರು. ಇನ್ನೂ ಕೆಲವರು ರಸ್ತೆಯಲ್ಲಿ ಕಾರಿನ ಮೇಲೆ ಹೂಮಳೆಯನ್ನೇ ಸುರಿಸಿದರು.
ಇದನ್ನೆಲ್ಲಾ ಕಂಡ ಡಾಲಿ ಧನಂಜಯ್ ಅಚ್ಚರಿಗೊಂಡು, ಎಷ್ಟೊಂದು ಅಭಿಮಾನ ಸರ್, ನಿಜಕ್ಕೂ ಅಚ್ಚರಿಯಾಗುತ್ತದೆ ಎಂದು ಸುದೀಪ್ ಬಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಭೋವಿ ಗುರುಪೀಠಕ್ಕೆ ನಟ ಡಾಲಿ ಧನಂಜಯ ಭೇಟಿ | ಶ್ರೀಗಳಿಗೆ ಮದುವೆಗೆ ಆಹ್ವಾನ
ಇದಕ್ಕೆ ಕಿಚ್ಚ ಸುದೀಪ್, ಅಭಿಮಾನಿಗಳ ಪ್ರೀತಿಗೆ ನಮ್ಮಿಂದ ಏನು ಕೊಡಲು ಆಗುವುದಿಲ್ಲ. ಶರಣಾಗಬೇಕು ಅಷ್ಟೇ ಎಂದಿದ್ದಾರೆ. ದುರ್ಗದಲ್ಲಿ ಕಿಚ್ಚ ಸುದೀಪ್ ಅವರಿಗೆ ಇರುವ ಅಭಿಮಾನಿಗಳನ್ನು ಕಂಡು ನಿಬ್ಬೆರೆಗಾದೆ ಎಂದು ವೇದಿಕೆಯಲ್ಲಿ ಡಾಲಿ ಅಭಿಪ್ರಾಯ ಹಂಚಿಕೊಂಡರು.
ಇದಕ್ಕೆ ಪೂರಕವಾಗಿ, ನಟ ಸುದೀಪ್ ಮಾತನಾಡುವಾಗ, ಇನ್ನೊಮ್ಮೆ ಚಿತ್ರದುರ್ಗಕ್ಕೆ ಬರುತ್ತೇನೆ ಎಂದು ಹೇಳಿ ಹೋಗಿದ್ದೆ. ಈ ಬಾರಿ ಕುಟುಂಬ ಸಮೇತ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಕುಂಚಿಟಿಗ ಮಠಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ | ಶ್ರೀ ಶಾಂತವೀರ ಸ್ವಾಮೀಜಿ ಅವರಿಂದ ಸನ್ಮಾನ
ಸುದೀಪ್ ಅವರ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ, ಅಕ್ಕನ ಮಗ ಸಂಚಿತ್ ಕೂಡಾ ಆಗಮಿಸಿದ್ದರು. ಜೊತೆಗೆ ಕನ್ನಡ ಚಿತ್ರರಂಗದ ಸಾಕಷ್ಟು ನಾಯಕರು, ನಿರ್ದೇಶಕರು, ತಂತ್ರಜ್ಞರು ಆಗಮಿಸಿದ್ದರು.