ಮುಖ್ಯ ಸುದ್ದಿ
ಜನಸಾಗರದಲ್ಲಿ ರಾಜಗಾಂಭೀರ್ಯದಲ್ಲಿ ಸಾಗಿದ ನಾಯಕನಹಟ್ಟಿ ತೇರು | ಅದ್ದೂರಿ ರಥೋತ್ಸವಕ್ಕೆ ಅಸಂಖ್ಯ ಭಕ್ತರು
CHITRADURGA NEWS | 16 MARCH 2025
ಚಿತ್ರದುರ್ಗ: ಮಡಿದಷ್ಟು ನೀಡು ಭಿಕ್ಷೆ ಎಂಬ ತತ್ವದ ರೂವಾರಿ, ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ವಿಜೃಂಭಣೆಯಿಂದ ಸಾಗಿತು.
ಸಂಜೆ 4.05 ಸುಮಾರಿಗೆ ಚಿತ್ತಾ ನಕ್ಷತ್ರದಲ್ಲಿ ದೊಡ್ಡ ರಥೋತ್ಸವ ಎಳೆಯಲು ಪ್ರಾರಂಭಿಸಲಾಯಿತು.
ನಾಯಕನಹಟ್ಟಿಯ ತೇರು ಬೀದಿಯ ಈಶ್ವರ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ರಥೋತ್ಸವ ಸರ್ಕಲ್ ದಾಟಿ ಹೊರಮಠದ ರಸ್ತೆವರೆಗೆ ಸಾಗಿತು.
ಇದನ್ನೂ ಓದಿ: ನಾಯಕನಹಟ್ಟಿ ಮುಕ್ತಿ ದೊಡ್ಡ ಮೊತ್ತಕ್ಕೆ ಹರಾಜು | ಈ ಬಾರಿ ಯಾರಿಗೆ ಒಲಿಯಿತು ಮುಕ್ತಿ ಭಾವುಟ ?
ಈ ವೇಳೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಹಟ್ಟಿ ತಿಪ್ಪೇಶನಿಗೆ ಜೈಕಾರ ಹಾಕುತ್ತಾ, ಭಕ್ತಿಯ ಸಾಗರದಲ್ಲಿ ಮಿಂದೆದ್ದರು.
ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
ಜನಸಾಗರದಲ್ಲಿ ತೇಲಿ ಬಂದ ತೇರಿಗೆ ಬಾಳೆಹಣ್ಣು, ಸೂರುಬೆಲ್ಲ, ಧವನ ಎಸೆಯುತ್ತಾ ಹರಕೆ ತೀರಿಸಿಕೊಳ್ಳಲಾಯಿತು.
ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?
ಕಳೆದ ಒಂದು ವಾರದಿಂದ ಜಿಲ್ಲಾಡಳಿತ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆ ವ್ಯವಸ್ಥಿತವಾಗಿ ನಡೆಯಿತು.
ಪೊಲೀಸ್ ಬಿಗಿ ಬಂದೋಬಸ್ತ್:
ಜಾತ್ರೆಯಲ್ಲಿ ಕಳ್ಳತನ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ನಾಯಕನಹಟ್ಟಿ ಪಟ್ಟಣ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲೂ ಚೆಕ್‍ಪೋಸ್ಟ್ ಅಳವಡಿಸಲಾಗಿತ್ತು.
ಇದನ್ನೂ ಓದಿ: Kannada Novel: 24. ಐಗಳ ಗೃಹಪ್ರವೇಶ
ಅಲ್ಲಲ್ಲಿ ಟವರ್ ನಿರ್ಮಿಸಿ ಪೊಲೀಸರು ಕಣ್ಗಾವಲು ಹಾಕಿದ್ದರು. ಎಲ್ಲೆಲ್ಲೂ ಸಿಸಿ ಕ್ಯಾಮರಾ ಅಳವಡಿಸಿ ಜಾತ್ರೆಗೆ ಬಂದು ಹೋಗುವವರ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು.