ಮುಖ್ಯ ಸುದ್ದಿ
Rain Effect: ಆಹಾರ ನೀಡಿ ಆತ್ಮವಿಶ್ವಾಸ ತುಂಬಿದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ | ಮಳೆಯ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಂತ್ವಾನ
CHITRADURGA NEWS | 20 AUGUST 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆ ಭಾರೀ ಅವಾಂತರ (Rain Effect) ಸೃಷ್ಟಿ ಮಾಡುತ್ತಿದೆ.
ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಇಡೀ ಗ್ರಾಮ ಅಕ್ಷರಶಃ ನಲುಗಿ ಹೋಗಿದೆ. ಸುಮಾರು 40 ಮನೆಗಳ ಗೋಡೆ, ಮೇಲ್ಛಾವಣಿ ಬಿದ್ದು ಹೋಗಿ ಬದುಕು ಬೀದಿಗೆ ಬಂದಿದೆ.
ಇದನ್ನೂ ಓದಿ: ಪರಶುರಾಂಪುರದಲ್ಲಿ 29.6 ಮಿ.ಮೀ ಮಳೆ | ಜಿಲ್ಲೆಯಲ್ಲಿ 31 ಮನೆ ಹಾನಿ
ಹೀಗೆ ಸಂಕಷ್ಟಕ್ಕೆ ಸಿಲುಕಿದವರ ನೋವು ಆಲಿಸುವ ಜವಾಬ್ದಾರಿ ಹೊತ್ತ ಅಧಿಕಾರಿ, ಜನಪ್ರತಿನಿಧಿಗಳು ಅತ್ತ ಸುಳಿಯದಿದ್ದಾಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೂರಾರು ಆಹಾರದ ಕಿಟ್ ಜೊತೆಗೆ ಮಂಗಳವಾರ ಗ್ರಾಮಕ್ಕೆ ತೆರಳಿ ವಿತರಣೆ ಮಾಡಿ ಜನರ ನೋವಿಗೆ ಮಿಡಿದಿದ್ದಾರೆ.
ಗ್ರಾಮದಲ್ಲಿ ಮನೆಯಿಂದ ಕುಸಿದು ಬಿದ್ದಿದ್ದ ಎಲ್ಲ ಮನೆಗಳನ್ನು ಶ್ರೀಗಳು ವೀಕ್ಷಣೆ ಮಾಡಿದ ಶ್ರೀಗಳು, ಬೆಟ್ಟದ ತಪ್ಪಲಿನಲ್ಲಿರುವ ಈ ಹಳ್ಳಿಗೆ ಮೇಲಿಂದ ನೀರು ಹರಿದು ಬರುತ್ತದೆ. ಮಳೆ ನೀರು ಬಂದಾಗ ಅಲುಗಾಡದಂತಹ ಗಟ್ಟಿಯಾದ ಗೋಡೆ ಕಟ್ಟಿಕೊಳ್ಳಿ, ವೈಜ್ಞಾನಿಕವಾಗಿ ಊರು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ಆಗಸ್ಟ್ 20 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಕಷ್ಟ ಬಂದಾಗ ಜನ ದೇವರನ್ನು ನೆನೆಯುತ್ತಾರೆ. ದೇವರೇ ಯಾಕೆ ಕಷ್ಟ ಕೊಡುತ್ತಿಯಾ ಎಂದು ಪ್ರಶ್ನಿಸುತ್ತಾರೆ. ಆದರೆ, ಓಬಣ್ಣನಹಳ್ಳಿ ಗ್ರಾಮಸ್ಥರು ಸಂಕಷ್ಟದಲ್ಲೂ ಧೃತಿಗೆಡದೆ ಇಲ್ಲಿಯೆ ನೆಲೆ ನಿಂತು ಎಲ್ಲವನ್ನೂ ಎದುರಿಸಿದ್ದಾರೆ. ಅವರ ರಟ್ಟೆಯ ಮೇಲೆ ಅವರಿಗೆ ನಂಬಿಕೆ ಇರುವುದೇ ಇದಕ್ಕೆ ಕಾರಣ ಎಂದು ಧೈರ್ಯ ತುಂಬಿದರು.
ಶ್ರಮಿಕ ವರ್ಗದವರೇ ಹೆಚ್ಚಾಗಿರುವ ಇಲ್ಲಿ ಜನ ನಿತ್ಯವೂ ಕಾಯಕ ಮಾಡಿಯೇ ಬದುಕು ಕಟ್ಟಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನಿಮ್ಮ ನೆರವಿಗೆ ಬರಬೇಕು. ಬರುತ್ತದೆ. ಸ್ವಲ್ಪ ತಡವಾಗಿರಬಹುದು. ಅಲ್ಲೀವರೆಗೆ ಕಾಯದೆ ಬಿದ್ದಿರುವ ಮನೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನೈರುತ್ಯ ರೈಲ್ವೆಗೆ ಬಂಪರ್ | ವೇಗ ಪಡೆಯಲಿದೆ ನೇರ ಮಾರ್ಗ ಕಾಮಗಾರಿ
ಭೋವಿ ಗುರುಪೀಠ ಸಂಕಷ್ಟದಲ್ಲಿರುವವರಿಗೆ ಸದಾ ಮಿಡಿಯುತ್ತದೆ. ಮಾನವೀಯತೆ ಆಧಾರದಲ್ಲಿ ನಾವು ಸ್ಪಂದಿಸುತ್ತಿದ್ದೇವೆ. ಮುಂದೆಯೂ ಸಹಕಾರ ನೀಡುತ್ತೇವೆ. ನೀವು ಕೂಡಾ ದುಡಿದ ಹಣದಲ್ಲಿ ಎಲ್ಲವನ್ನೂ ಕಳೆಯದೆ ಉಳಿಸಿ, ಬೆಳೆಸುವ ಕೆಲಸ ಮಾಡಿ. ಆಪತ್ಕಾಲಕ್ಕೆ ಹಣ ಇಟ್ಟುಕೊಳ್ಳಬೇಕು. ನಿಮ್ಮ ಗ್ರಾಮದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗ ಮಾತನಾಡಿದ್ದೇನೆ. ಅವರೂ ನಿಮಗೆ ನೆರವಾಗಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ಜನಾಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಒಗ್ಗಟ್ಟಿನಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಧ್ವನಿ ವಿಧಾನಸೌಧವನ್ನು ನಡೆಸುವಂತಿರಬೇಕು. ಆಗ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೂರಾರು ಮನೆಗಳಿಗೆ ನೀರು ನುಗ್ಗಿದರು ಸಹ ಇದುವರೆಗೂ ರಾಜಕಾರಣಿಗಳು ಬಂದು ಸಾಂತ್ವನ ಹೇಳಿಲ್ಲ. ರಾಜಕಾರಣಿಗಳಿಗೆ ಜನರ ಸಮಸ್ಯೆಗಳನ್ನು ಆಲಿಸುವಾಗ ವ್ಯವಧಾನ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪೈಪೋಟಿ ನಡುವೆ ಅವಿರೋಧ ಆಯ್ಕೆ | ನಗರಸಭೆಯಲ್ಲಿ ಒಗ್ಗಟ್ಟು
ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ ಮಾತನಾಡಿ, ನಮ್ಮ ಕಷ್ಟಕ್ಕೆ ಯಾವ ರಾಜಕಾರಣಿಯು ಆಗುವುದಿಲ್ಲ. ಮಠದ ಜೊತೆ ನಾವಿದ್ದರೆ, ಮಠ ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಮಠದ ಕಾರ್ಯಕ್ರಮಗಳಿಗೆ ಸ್ವಯಂಘೋಷಿತವಾಗಿ, ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಹೇಳಿದರು.
ಎಸ್‍ಜೆಎಸ್ ಸಂಸ್ಥೆ ಕಾರ್ಯದರ್ಶಿ ಡಿಸಿ ಮೋಹನ್ ಮಾತನಾಡಿ, ಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇರುವುದರಿಂದ ಬಡತನದಲ್ಲಿರುವ ಕುಟುಂಬದವರು ಮಕ್ಕಳನ್ನ ಕೂಲಿ ಕಳಿಸದೆ ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಏರಿಕೆಯಾಗುತ್ತಿದೆ ವಿವಿ ಸಾಗರ ಜಲಾಶಯ ಮಟ್ಟ | ಹೆಚ್ಚುತ್ತಿದೆ ಒಳಹರಿವು
ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ. ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಉಮೇಶ್, ಗ್ರಾಪಂ ಪಿಡಿಒ ಆಂಜನೇಯ, ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮಮ್ಮ, ಜಯಪ್ಪ ಮುಖಂಡರಾದ ಚಂದ್ರಪ್ಪ, ಯಲ್ಲಪ್ಪ, ಓಬಳೇಶ್ ಮತ್ತಿತರರಿದ್ದರು.
ಇದೇ ವೇಳೆ ಶ್ರೀಗಳು ಅಕ್ಕಿ, ಬೇಳೆ, ರಾಗಿ, ಜೋಳ, ಖಾರದ ಪುಡಿ, ಉಪ್ಪು, ಸಕ್ಕರೆ, ಗೋಧಿ ಸೇರಿದಂತೆ ಸುಮಾರು 20 ವಿವಿಧ ರೀತಿಯ ದವಸ ಧಾನ್ಯಗಳನ್ನು ಒಳಗೊಂಡ ಕಿಟ್ ಗಳನ್ನು ಅಲ್ಲಿನ 120 ಜನರಿಗೆ ಹಂಚಿಕೆ ಮಾಡಿದರು.