CHITRADURGA NEWS | 17 NOVEMBER 2026
ಚಿತ್ರದುರ್ಗ: ನಾಡಿನ ಹಲವು ಪತ್ರಿಕೆಗಳಲ್ಲಿ ದಶಕಗಳ ಕೆಲಸ ಮಾಡಿ, ನಂತರ ತಮ್ಮದೇ ಕೆಂಧೂಳಿ ವಾರಪತ್ರಿಕೆ ಮೂಲಕ ಹೆಸರಾಗಿದ್ದ ಹಿರಿಯ ಪತ್ರಕರ್ತ ತುರುವನೂರು ಮಂಜುನಾಥ್ ಗೃಹ ಪ್ರವೇಶದಲ್ಲಿ ಹೊಸತನ ಮೆರೆದಿದ್ದಾರೆ.
ಸ್ವಗ್ರಾಮ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ನಿರ್ಮಿಸಿರುವ ನೂತನ ಮನೆ ಸಂಸ್ಕೃತಿ ಪ್ರವೇಶದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಮೂಲಕ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೊಸ ಮೆರಗು ನೀಡಿದ್ದಾರೆ.
ಇದನ್ನೂ ಓದಿ:ಅಕ್ರಮ ಸಂಬಂಧಕ್ಕೆ ಅಡ್ಡಿ | ಪತಿಯ ಹತ್ಯೆ | ಅತ್ತೆ, ಪ್ರಿಯಕರ, ಪತ್ನಿ ಬಂಧನ
ದಶಕಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಮಂಜುನಾಥ್ ಕುಟುಂಬ ಈಗ ತುರುವನೂರು ಗ್ರಾಮದಲ್ಲೆ ನೆಲೆಗೊಳ್ಳುತ್ತಿದ್ದು, ಈ ವೇಳೆ ಪುಸ್ತಕ ಬಿಡುಗಡೆಯನ್ನೂ ಮಾಡಿಸಿದ್ದಾರೆ.
ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ನೀರಾವರಿ ಹೋರಾಟಗಾರ ಲಕ್ಷ್ಮಣ ಹೂಗಾರ್ ಮಾತನಾಡುತ್ತಾ, ಐದು ದಶಕಗಳ ಹೋರಾಟದ ಫಲವಾಗಿ ಚಿತ್ರದುರ್ಗದ ಭಾಗದ ಕೆಲ ಕೆರೆಗಳಿಗೆ ಭ್ರಾ ನೀರು ಹರಿಸಲಾಗುತ್ತಿದೆ. ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ಜಿಲ್ಲೆಗೆ ಸಂಪೂರ್ಣ ನೀರು ಹರಿಯುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು.
ಇದನ್ನೂ ಓದಿ:ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಪತ್ರಕರ್ತರಾದ ಮಂಜುನಾಥ ಅವರು ಈಗ ಬೆಂಗಳೂರು ತೊರೆದು ತಮ್ಮ ಊರಲ್ಲೆ ನೆಲೆಸುತ್ತಿದ್ದು ಸಾಹಿತ್ಯ, ಪತ್ರಿಕೋದ್ಯಮ ಜೊತೆಗೆ ಕೃಷಿಯಲ್ಲಿ ತೊಡಗಿದ್ದು, ಮುಂದೆ ಅವರು ರೈತರ ಸಮಸ್ಯೆಗಳಿಗೂ ಧ್ವನಿಯಾಗಬೇಕು ಎಂದರು.
ತಮ್ಮ ಊರಿನ ಋಣ ತೀರಿಸಲು ತುರುವನೂರು ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ಊರಿನ ಇತಿಹಾಸ, ಇಲ್ಲಿನ ಆಚರಣೆ ಕುರಿತು ಸಮಗ್ರವಾಗಿ ಚಿತ್ರಿಸಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ:ಪರಿಶಿಷ್ಟ ಪಂಗಡದ ಯುವಕರಿಗೆ ಉಚಿತ ಸೋಲಾರ್ ತರಬೇತಿ | ಅರ್ಜಿ ಅಹ್ವಾನ
ಕೃತಿಗಳನ್ನು ಕುರಿತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾದ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವೈ.ಸೋಮಶೇಖರ್ ಮಾತನಾಡಿ, ತುರುವನೂರು ಇತಿಹಾಸವನ್ನು ಮಂಜುನಾಥ ಅವರು ಸಮಗ್ರವಾಗಿ ಪರಿಚಯಿಸಿದ್ದು, ಇಲ್ಲಿನ ಆಚರಣೆ, ದೇವಸ್ಥಾನಗಳು, ಅಕ್ಷರ ಸಾಧಕರು, ಶಿಕ್ಷಕರ ಸಾಧನೆಗಳು ಕುರಿತಂತೆ ವಿಭಿನ್ನವಾಗಿ ಚಿತ್ರಸಿದ್ದಾರೆ. ತುರುವನೂರು ಈಚಲ ಮರ ಚಳವಳಿ ಕುರಿತಂತೆ ಅಲ್ಲದೆ ಆ ಸಂದರ್ಭದ ವಿಶೇಷಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪರಿಚಯಿಸಿದ್ದಾರೆ ಎಂದರು.
ದಿವಂಗತ ಎನ್.ತಿಪ್ಪಣ್ಣ ಅವರ ಧರ್ಮಪತ್ನಿ ಗೌರಮ್ಮ ಅವಿಭಕ್ತ ಕುಟುಂಭವನ್ನು ನಿರ್ವಹಿಸಿದ ಬಗ್ಗೆ ಕಾದಂಬರಿಯಲ್ಲಿ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಚನ್ನಗಿರಿ, ತೀರ್ಥಹಳ್ಳಿ, ಭದ್ರಾವತಿ ಹಾಗೂ ರಾಜ್ಯದ ಅಡಿಕೆ ಧಾರಣೆ
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಕೃತಿಕಾರ ತುರುವನೂರು ಮಂಜುನಾಥ ಮತ್ತು ಸರ್ವಮಂಗಳ ಮಂಜುನಾಥ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

