ಮುಖ್ಯ ಸುದ್ದಿ
ಹೊಳಲ್ಕೆರೆ ಶಾಸಕರ ಕ್ಷಮೆಗೆ ಸ್ವಕ್ಷೇತ್ರದವರ ಪಟ್ಟು | ತಟ್ಟಲಿದೆ ನಿಷ್ಠಾವಂತರ ಶಾಪ
CHITRADURGA NEWS | 30 MARCH 2024
ಚಿತ್ರದುರ್ಗ: ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬದ ಕೃಪಾಶೀರ್ವಾದದಿಂದ ಎಂ.ಚಂದ್ರಪ್ಪ ಶಾಸಕರಾಗಿದ್ದಾರೆ. ಇದನ್ನು ಅವರು ಮರೆಯಬಾರದು. ಕೂಡಲೇ ಯಡಿಯೂರಪ್ಪ ಅವರಿಗೆ ಕ್ಷಮೆ ಕೋರಬೇಕು ಎಂದು ಹೊಳಲ್ಕೆರೆಯ ಅಗ್ರಹಾರದ ಮಂಜುನಾಥ್ ಆಗ್ರಹಿಸಿದರು.
‘ಲಿಂಗಾಯತ ಸಮುದಾಯ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಕೀಳಾಗಿ ಮಾತಾಡುವುದು ಸರಿಯಲ್ಲ. ಕೂಡಲೇ ಕ್ಷಮೆ ಕೇಳಬೇಕು. ಗೋವಿಂದ ಕಾರಜೋಳ ಅವರು ನಿರಾತಂಕವಾಗಿ ಚುನಾವಣೆ ಮಾಡಬಹುದು. ನಾವು ಹೆಚ್ಚಿನ ಮತಗಳನ್ನು ಹಾಕಿಸುತ್ತೇವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಚಂದ್ರಪ್ಪ ತಮ್ಮ ಚುನಾವಣೆಯನ್ನು ಮಾಡಿದ್ದಾರೆಯೇ ಹೊರೆತು ಬೇರೆ ಯಾವ ಚುನಾವಣೆಯನ್ನು ಮಾಡಿಲ್ಲ. ಇಂದು ಕೂಡ ತಮಗೆ ಬೇಕಿರುವ ಕೆಲವು ಜನರನ್ನು ಇಟ್ಟುಕೊಂಡು ಸಭೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ಬರಲಿ’ ಎಂದು ಸವಾಲ್ ಹಾಕಿದರು.
ಕ್ಲಿಕ್ ಮಾಡಿ ಓದಿ: ನಾಲ್ವರು ಶಿಕ್ಷಕರು ಅಮಾನತು | ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಕರ್ತವ್ಯ ಲೋಪ
ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಸದಸ್ಯ ಜಯಸಿಂಹ ಕಾಟ್ರೋತ್ ಮಾತನಾಡಿ, ‘ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಬೇರೆ ಯಾವ ಕಾರ್ಯ ಮಾಡುತ್ತಿಲ್ಲ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 10 ಸದಸ್ಯರನ್ನು ಗೆಲ್ಲಿಸಲು ಅವರಿಗೆ ಸಾಧ್ಯವಿಲ್ಲ. ಇವರಿಗೆ ಮುಂದಿನ ದಿನಗಳಲ್ಲಿ ಬಿಜೆಪಿಯ ನಿಷ್ಠಾವಂತರ ಶಾಪ ತಟ್ಟುತ್ತದೆ. ಕೂಡಲೇ ಕ್ಷಮೆಯಾಚಿಸಿ ಬಿಜೆಪಿ ಪರವಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ಅಗ್ರಹಾರ ಬಸವರಾಜ್, ತಿಪ್ಪೇಸ್ವಾಮಿ ಇದ್ದರು.