Connect with us

ಹೊಳಲ್ಕೆರೆಯಲ್ಲಿ ಅದ್ದೂರಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ | ಶಾಸಕ ಎಂ.ಚಂದ್ರಪ್ಪ, ಪ್ರಸನ್ನಾನಂದ ಶ್ರೀ ಭಾಗೀ  

ಹೊಳಲ್ಕೆರೆಯಲ್ಲಿ ಅದ್ದೂರಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ

ಹೊಳಲ್ಕೆರೆ

ಹೊಳಲ್ಕೆರೆಯಲ್ಲಿ ಅದ್ದೂರಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ | ಶಾಸಕ ಎಂ.ಚಂದ್ರಪ್ಪ, ಪ್ರಸನ್ನಾನಂದ ಶ್ರೀ ಭಾಗೀ  

ಹೊಳಲ್ಕೆರೆಯಲ್ಲಿ ಅದ್ದೂರಿ ವಾಲ್ಮೀಕಿ ಜಯಂತ್ಯುತ್ಸವ ಆಚರಣೆ | ಶಾಸಕ ಎಂ.ಚಂದ್ರಪ್ಪ, ಪ್ರಸನ್ನಾನಂದ ಶ್ರೀ ಭಾಗೀ  

CHITRADURGA NEWS | 26 OCTOBER 2024

ಹೊಳಲ್ಕೆರೆ: ಪಟ್ಟಣದ ಸಂವಿಧಾನ ಸೌಧದಲ್ಲಿ ಮಹರ್ಷಿ ವಾಲ್ಮೀಕಿ, ರಾಜವೀರ ಮದಕರಿ ನಾಯಕ ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗ್ರಾಮ ಪಂಚಾಯಿತಿ ಅಧ್ಯಕ್ಷರು-ಸದಸ್ಯರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಶಾಸಕ ಎಂ.ಚಂದ್ರಪ್ಪ, ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಭಾಗವಹಿಸಿ, ಮಹರ್ಷಿ ವಾಲ್ಮೀಕಿ, ಮದಕರಿ ನಾಯಕ ಫೋಟೋಗೆ ಪುಷ್ಪರ್ಚನೆ ಸಲ್ಲಿಸಿದರು.

ಕ್ಲಿಕ್ ಮಾಡಿ ಓದಿ: ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ಪುನರಾಯ್ಕೆ | ಚಿತ್ರದುರ್ಗದಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನ

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ವಾಲ್ಮೀಕಿ, ಬೇಡರಕಣ್ಣಪ್ಪ, ರಾಜವೀರ ಮದಕರಿನಾಯಕ ಇವರುಗಳು ವಾಲ್ಮೀಕಿ ಸಮಾಜದ ಮಹಾನ್ ಪುರುಷರು, ಹಾಗಾಗಿ ಇವರುಗಳ ಇತಿಹಾಸ ಸಮಾಜಕ್ಕೆ ಗೊತ್ತಿದೆ.

ಮಹಾಭಾರತದಲ್ಲಿ ಏಕಲವ್ಯ ಬಿಲ್ಲು ವಿದ್ಯೆಯನ್ನು ಕಲಿಯಲು ದ್ರೋಣಾಚಾರ್ಯರ ಬಳಿ ಹೋದಾಗ ಬೇರೆ ಜನಾಂಗದವರಿಗೆ ನಾನು ಬಿಲ್ಲು ವಿದ್ಯೆ ಕಲಿಸಲ್ಲ. ಕ್ಷತ್ರಿಯರಿಗೆ ಮಾತ್ರ ಹೇಳಿಕೊಡುವುದು ಎಂದು ಅವಮಾನಿಸಿ ಕಳಿಸಿದಾಗ ಏಕಲವ್ಯ ದ್ರೋಣಾಚಾರ್ಯರನ್ನು ಮನದಲ್ಲಿಯೇ ಸ್ಮರಣೆ ಮಾಡಿಕೊಂಡು ಬಿಲ್ಲು ವಿದ್ಯೆಯನ್ನು ಕಲಿಯುತ್ತಾನೆ, ಅಂತಹ ಶಕ್ತಿಶಾಲಿ ಏಕಲವ್ಯ ಎಂದರು.

ನೀವುಗಳು ಯಾರು ನನಗೆ ಮಹರ್ಷಿ ವಾಲ್ಮೀಕಿ ಮಂಟಪ ನಿರ್ಮಿಸಿಕೊಡಿ ಎಂದು ಕೇಳಿರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದಲೂ ಯಾರು ಏನೆ ಕೇಳಲಿ ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಹಗಲಿರುಳು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಎಸ್.ಮಹೇಶ್ ಅವಿರೋಧ ಆಯ್ಕೆ

ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದರು ಎಂದು ಸ್ಮರಿಸಿಕೊಂಡರು.

ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಆಸ್ತಿ-ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರ ತ್ಯಾಗವನ್ನು ರಾಮಾಯಣ ಎಂತಲೂ, ಅಧಿಕಾರ-ಆಸ್ತಿಗಾಗಿ, ಅಣ್ಣ-ತಮ್ಮಂದಿರ ಜಗಳವನ್ನು ಮಹಾಭಾರತವೆಂದು ಕರೆಯಲಾಗುತ್ತದೆ.

ಮಹರ್ಷಿ ವಾಲ್ಮೀಕಿರವರ ಆದರ್ಶವನ್ನು ಸಮಸ್ತ ಮಾನವ ಕುಲಕೋಟಿ ಪರಿಪಾಲಿಸಬೇಕು. ವಾಲ್ಮೀಕಿಯನ್ನು ಕೇವಲ ನಾಯಕ ಜನಾಂಗಕ್ಕೆ ಸೀಮಿತಗೊಳಿಸಬಾರದು ಎಂದರು.

ಭಾರತ ಜಾತ್ಯತೀತ ದೇಶ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಜಾಸ್ತಿಯಿರುವ ದೇಶದಲ್ಲಿ ಜಾತಿಗಣತಿ ಆಗಲೇಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕಿದೆ. ಇಲ್ಲವಾದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜ್ಯಕೀಯವಾಗಿ ಆಳುವ ಸರ್ಕಾರಗಳು ಪ್ರಾತಿನಿಧ್ಯ ಕೊಡಬೇಕು.

ಕ್ಲಿಕ್ ಮಾಡಿ ಓದಿ: ಆರ್ಯ ಈಡಿಗರ ಸಂಘದಿಂದ ಬಂಗಾರಪ್ಪ ಜನ್ಮ ದಿನಾಚರಣೆ 

ಚುನಾವಣೆಯಲ್ಲಿ ನಮ್ಮ ಮತಗಳನ್ನು ಪಡೆಯುತ್ತಾರೆ. ಅಧಿಕಾರಕ್ಕೆ ಬಂದ ನಂತರ ಹಿತ ಕಾಪಾಡುವುದನ್ನು ಮರೆತು ಬಿಡುತ್ತಾರೆ. ವಾಲ್ಮೀಕಿ ಜಯಂತಿ, ಮದಕರಿನಾಯಕ ಜಯಂತಿಯಲ್ಲಿ ಎಲ್ಲರೂ ಒಟ್ಟಾಗಿ ಸೇರಿಕೊಂಡು ಸಂಘಟಿತರಾಗುವಂತೆ ಪರಿಶಿಷ್ಟ ವರ್ಗದವರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಸರ್ಕಾರ ಸಾಂವಿಧಾನಿಕ ಹಕ್ಕು ನೀಡುತ್ತದೆ. ಇಲ್ಲದಿದ್ದರೆ ಸಾಮಾಜಿಕ ಹಿನ್ನೆಡೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಹೋದರ ಸಮಾಜದವರು ಸುಳ್ಳು ಜಾತಿ ಪ್ರಮಾಣಗಳನ್ನು ಪಡೆದುಕೊಂಡು ನಾಯಕ ಜನಾಂಗಕ್ಕೆ ಅನ್ಯಾಯವೆಸಗುತ್ತಿರುವುದರ ವಿರುದ್ದ ಜಾಗೃತರಾಗಬೇಕಿದೆ. ಇಲ್ಲವಾದಲ್ಲಿ ನಮಗೆ ಸಿಗಬೇಕಾದ ನ್ಯಾಯಯುತವಾದ ಸೌಲಭ್ಯಗಳು ಅನ್ಯರ ಪಾಲಾಗುತ್ತವೆ ಎಂದು ಹೇಳಿದರು.

ಹೊಳಲ್ಕೆರೆ ತಾಲ್ಲೂಕು ನಾಯಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಸೂರೆಗೌಡ, ಮದಕರಿನಾಯಕ ಯುವ ಸೇನಾ ಸಮಿತಿಯ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ಲೋಹಿತ್‍ ಕುಮಾರ್ ಸೇರಿದಂತೆ ಸಮಾಜದ ಬಾಂಧವರು ಹಾಗೂ ಇತರರು ಜಯಂತಿಯಲ್ಲಿ ಭಾಗವಹಿಸಿದ್ದರು.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ ಧಾರಣೆ | ಅಕ್ಟೋಬರ್ 26 | ಇಂದಿನ ಹತ್ತಿ ರೇಟ್

Click to comment

Leave a Reply

Your email address will not be published. Required fields are marked *

More in ಹೊಳಲ್ಕೆರೆ

To Top
Exit mobile version