CHITRDURGA NEWS | 02 OCTOBER 2024

ಹೊಳಲ್ಕೆರೆ: ತಾಲ್ಲೂಕಿನ ತೊಡರನಾಳ್, ಬ್ರಹ್ಮಪುರ ತಿರುಮಲಾಪುರದಲ್ಲಿ ರೂ.4.23 ಕೋಟಿಯ ಕೆರೆ ಅಭಿವೃದ್ಧಿ ಹಾಗೂ ಹೊಸ ಕೆರೆ(Lake) ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.

ಕ್ಲಿಕ್ ಮಾಡಿ ಓದಿ: Power Cut; ಮಾಡದಕೆರೆಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ನಂತರ ಮಾತನಾಡಿದ ಅವರು, ರೈತರಿಗೆ ಜೀವನಾಡಿಯಾಗಿರುವ ಕೆರೆಗಳಿಗೆ ನೀರು ತುಂಬಿಸುವುದು, ಹೊಸ ಕೆರೆಗಳ ನಿರ್ಮಾಣ, ಗೋಕಟ್ಟೆಗಳ ಅಭಿವೃದ್ದಿ, ಚೆಕ್‍ಡ್ಯಾಂಗಳನ್ನು ಕಟ್ಟುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು.

ಮಕ್ಕಳಂತೆ ಅಡಿಕೆ ತೋಟಗಳನ್ನು ಬೆಳೆಸುತ್ತಿರುವ ರೈತರಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶವಿಟ್ಟುಕೊಂಡು ಶಿವಗಂಗಾ, ತಾಳ್ಯ, ಹೆಚ್.ಡಿ.ಪುರ, ನಂದನಹೊಸೂರು ಸೇರಿದಂತೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು.

ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಲು ಚೆಕ್‍ಡ್ಯಾಂ, ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ. ಭದ್ರಾ ಪ್ರಾಜೆಕ್ಟ್ ನಿಂದ ನೀರು ತಂದು ಕೆರೆಗಳನ್ನು ತುಂಬಿಸಲು 200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಕ್ಲಿಕ್ ಮಾಡಿ ಓದಿ: Adike Rate: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆ

ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.

ವಿ.ವಿ.ಸಾಗರದ ಮಧ್ಯೆ 40 ಅಡಿ ಆಳದಲ್ಲಿ ಪಿಲ್ಲರ್ ಹಾಕಿ ಮೋಟಾರ್ ಕೂರಿಸಿ 60 ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಮುಂದಿನ 30 ವರ್ಷಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನೀರು ಹರಿಸಲಾಗುವುದು.

ತೊಡರನಾಳ್ ಗ್ರಾಮದಲ್ಲಿ ಪುಷ್ಕರಣಿ ರೀತಿಯಲ್ಲಿ ಸುಂದರವಾಗಿ ಕೆರೆಗಳನ್ನು ಕಟ್ಟಲಾಗುವುದು ಎಂದರು.

ಕ್ಲಿಕ್ ಮಾಡಿ ಓದಿ: Result; ಬಾಪೂಜಿ ಪ್ರಬಂಧ ಸ್ಪರ್ಧೆ | ಪೂರ್ಣ ಫಲಿತಾಂಶ ಇಲ್ಲಿದೆ

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂತಮ್ಮ ನಾಗರಾಜ್, ಸದಸ್ಯರುಗಳಾದ ಕಮಲಮ್ಮ ನಾಗರಾಜ್, ಟಿ.ಸಿ.ರಾಜಪ್ಪ, ಕೆಂಚವೀರಪ್ಪ, ಕೃಷ್ಣಪ್ಪ, ವೀರಪ್ಪ, ಈಶಣ್ಣ, ದಗ್ಗೆಶಿವಪ್ರಕಾಶ್, ಪರಮೇಶ್ವರಪ್ಪ, ಅರುಣ್‍ಕುಮಾರ್, ಅಂಕಳಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳಾದ ನಾಗರಾಜ್, ಶರಣಪ್ಪ ಇದ್ದರು.