ಮುಖ್ಯ ಸುದ್ದಿ
Durgotsava; ಮಾರ್ಚ್ ಅಂತ್ಯದೊಳಗೆ ದುರ್ಗೋತ್ಸವ | ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭರವಸೆ
CHITRADURGA NEWS | 17 OCTOBER 2024
ಚಿತ್ರದುರ್ಗ: ಮುಂಬರುವ ಮಾರ್ಚ್(march) ಅಂತ್ಯದೊಳಗೆ ಸರ್ಕಾರದ ವತಿಯಿಂದ ದುರ್ಗೋತ್ಸವ(Durgotsava) ಆಚರಣೆ ಮಾಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ತಿಳಿಸಿದರು.
ಕ್ಲಿಕ್ ಮಾಡಿ ಓದಿ: Rain Damage: ಮಳೆಯಿಂದ ಮನೆ ಗೋಡೆ ಕುಸಿತ | ಮನೆಯಲ್ಲಿದ್ದ ವೃದ್ಧೆ ಸಾವು
ತರಾಸು ರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಬಾರಿ ದುಗೋತ್ಸವ ಆಚರಣೆ ಮಾಡುವ ಮೂಲಕ ದುರ್ಗದ ವೈಭವ, ಮದಕರಿ ನಾಯಕರ ಚರಿತ್ರೆಯನ್ನು ಇಡೀ ವಿಶ್ವಕ್ಕೆ ತಿಳಿಸುವ ಕೆಲಸ ದುಗೋತ್ಸವದಲ್ಲಿ ಆಗಲಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಸರ್ವಕಾಲಕ್ಕೂ ಪ್ರಸ್ತುತ. ರಾಮಾಯಣ ಮಹಾಕಾವ್ಯದ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: Internal Reservation: ಒಳಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದ ಮಾದಿಗ ಸಂಘಟನೆಗಳು | ರಾಜ್ಯ ಸರ್ಕಾರದ ತೀವ್ರ ಆಕ್ರೋಶ
ಚಿತ್ರದುರ್ಗ ನಗರದ ಮದಕರಿನಾಯಕ ವೃತ್ತದ ಸಮೀಪದಲ್ಲಿರುವ ವಾಲ್ಮೀಕಿ ಭವನಕ್ಕೆ ಇನ್ನೂ ಅನುದಾನದ ಅವಶ್ಯಕತೆ ಇದೆ ಎಂದು ಸಮಾಜದ ಮುಖಂಡರು ಗಮನಕ್ಕೆ ತಂದಿದ್ದು, ಅನುದಾನ ಮಂಜೂರಾತಿಗೆ ಅಗತ್ಯ ಕ್ರಮವಹಿಸಿ, ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಭವನದಲ್ಲಿಯೇ ಆಚರಿಸೋಣ ಎಂದು ತಿಳಿಸಿದರು.
ನಗರದ ಚಳ್ಳಕೆರೆ ಗೇಟ್‌ನಲ್ಲಿ ವಾಲ್ಮೀಕಿ ವೃತ್ತ ಎಂದು ನಾಮಕರಣ ಮಾಡಲು ನಗರಸಭೆಯಿಂದ ಕ್ರಮವಹಿಸಲಾಗಿದೆ.