ಮುಖ್ಯ ಸುದ್ದಿ
ಒಂದ್ ಕೆಜಿ ರೈಸ್ ನಾ ಎಷ್ಟ್ ಜನ ಊಟ ಮಾಡ್ತಾರೆ ಅಂತಾ ಮೊದ್ಲು ಹೇಳಿ..; ನಗರಸಭೆ ಪರಿಸರ ಎಂಜಿನಿಯರ್ ಗೆ ಡಿಸಿ ಫುಲ್ ಕ್ಲಾಸ್
ಚಿತ್ರದುರ್ಗನ್ಯೂಸ್.ಕಾಂ
ಒಂದ್ ಕೆಜಿ ರೈಸ್ ನಾ ಎಷ್ಟ್ ಜನ ಊಟ ಮಾಡ್ತಾರೆ ಅಂತಾ ಮೊದ್ಲು ಹೇಳಿ..ಅಡುಗೆ ಮಾಡೋರು ನೋಡಿದ್ರೆ ಹೇಳ್ತಾರೆ..ನೀವು ಇಲ್ಲಿಗೆ ಡೈಲಿ ವಿಸಿಟ್ ಮಾಡ್ತಿಲ್ಲ ಅಂತಾ ಇದರಲ್ಲೇ ಗೊತ್ತಾಗ್ತಿದೆ…ಎಲ್ಲ ಲೆಕ್ಕ ಬೆರಳ ತುದಿಲೀ ಇರಬೇಕು..ಯಾವಾತ್ತಾದ್ರೂ ಟೆಸ್ಟ್ ನೋಡಿದ್ದೀರಾ..ಸುಮ್ಮನೆ ಇಂದಿರಾ ಕ್ಯಾಂಟಿನ್ ಗೆ ಜನ ಬರಲ್ಲ ಹೇಳ ಬೇಡಿ..ಟೇಸ್ಟ್ ಆಗಿ ಅಡುಗೆ ಮಾಡಿದ್ರೆ ಬರ್ತಾರೆ…ಟೇಸ್ಟ್ ಅಂದ್ರೆ ಬೇರೆ ಏನೂ ಇಲ್ಲ, ಉಪ್ಪು, ಹುಳಿ ಸರಿಯಾದ ಪ್ರಮಾಣದಲ್ಲಿ ಹಾಕಿದರೆ ಸಾಕು…ಇನ್ನೂ ನಾ ಸುಮ್ಮನೆ ಇರಲ್ಲ…ಹೀಗೆ ನಗರಸಭೆ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಶನಿವಾರ ಬೆಳ್ಳಂ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರಸಭೆ ಪರಿಸರ ಎಂಜಿನಿಯರ್ ಜಾಫರ್ ಅವರಿಗೆ ಕ್ಲಾಸ್ ತೆಗೆದುಕೊಂಡರು.
ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ತರಾಟೆಗೆ ತೆಗೆದುಕೊಂಡ ವೀಡಿಯೋ ನೋಡಿ.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ಕ್ಯಾಂಟೀನ್‍ನಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‍ಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು, ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ ಇದ್ದರು.