ಮುಖ್ಯ ಸುದ್ದಿ
City Council: ನಿಮ್ಮ ನಿವೇಶನ ಸ್ವಚ್ಛಗೊಳಿಸದಿದ್ದರೆ ದಂಡ ಖಚಿತ | ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ
CHITRADURGA NEWS | 04 NOVEMBER 2024
ಚಿತ್ರದುರ್ಗ: ನಗರದ ಖಾಲಿ ನಿವೇಶನಗಳಲ್ಲಿ ಪೊದೆಯಂತೆ ಗಿಡ ಗಂಟೆಗಳು ಬೆಳೆದಿರುವುದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಹಾವುಗಳಂತಹ ವಿಷ ಜಂತುಗಳು ಸೇರಿಕೊಳ್ಳುತ್ತಿರುವ ಆದ್ದರಿಂದ ನಿವೇಶನಗಳ ಮಾಲಿಕರು ಗಿಡ ಪೊದೆಗಳನ್ನು 15 ದಿನಗಳಲ್ಲಿ ಸ್ವಚ್ಛಗೊಳಿಸಿ ಎಂದು ನಗರಸಭೆ(City Council) ಅಧ್ಯಕ್ಷೆ ಸುಮಿತಾ ರಾಘವೇಂದ್ರ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: Crop Damage: ಮಳೆಯಿಂದ ಬೆಳೆ ಹಾನಿ | ಶೀಘ್ರ ಪರಿಹಾರಕ್ಕೆ ರೈತರ ಆಗ್ರಹ
ನಿವೇಶನ ಸ್ವಚ್ಛಗೊಳಿಸಿದ ನಂತರ ಕಾಂಪೌಂಡ್ ನಿರ್ಮಿಸಿ ಮಾಲೀಕರ ಹೆಸರು, ವಿಳಾಸ, ಖಾತಾ/ಅಸೆಸ್ಮೆಂಟ್ ಸಂಖ್ಯೆ, ಅಳತೆ, ಪಿ.ಐ.ಡಿ.ನಂ. ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ಅಳವಡಿಸಿ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ಮಾಲೀಕರುಗಳು ತಮ್ಮ ನಿವೇಶನಗಳನ್ನು ಸ್ವಚ್ಚಗೊಳಿಸಿಕೊಳ್ಳದಿದ್ದರೆ ನಗರಸಭೆಯಿಂದ ಗಿಡ ಗಂಟೆಗಳನ್ನು ತೆಗೆಸಿ ಅದಕ್ಕೆ ತಗಲುವ ವೆಚ್ಚವನ್ನು ಕೆ.ಎಂ.ಬುಕ್‌ನಲ್ಲಿ ಷರಾ ಬರೆದು ಮಾಲೀಕರಿಂದ ವಸೂಲಿ ಮಾಡಲಾಗುವುದು. ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: Chitradurga: ಚಿತ್ರದುರ್ಗ-ಚಳ್ಳಕೆರೆ ನಗರಸಭೆ ಉಪಚುನಾವಣೆ | ತೆರವಾದ ಸ್ಥಾನಗಳಿಗೆ ಮೀಸಲಾತಿ ನಿಗಧಿ