ಮುಖ್ಯ ಸುದ್ದಿ
AshaKirana Institute; ಆಶಾಕಿರಣ ಸಂಸ್ಥೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

CHITRADURGA NEWS | 07 OCTOBER 2024
ಚಿತ್ರದುರ್ಗ: ಆಶಾಕಿರಣ ಸಂಸ್ಥೆ(AshaKirana Institute) ವತಿಯಿಂದ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: Bharamasagara: ಶಾದಿಮಹಲ್ ನಿರ್ಮಾಣಕ್ಕೆ 50 ಲಕ್ಷ ಅನುದಾನ | ಸಚಿವ ಜಮೀರ್ ಅಹಮದ್ ಖಾನ್ ಭರವಸೆ
ಆಶಾಕಿರಣ ಸಂಸ್ಥೆಯ ಆಧ್ಯಕ್ಷ ಗಿರೀಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇಲ್ಲಿ ಸಹಾಯ ಪಡೆದವರು ಮುಂದಿನ ದಿನದಲ್ಲಿ ಬೇರೆಯವರಿಗೆ ಸಹಾಯ ಮಾಡುವಂತವರಾಗಬೇಕು ಎಂದು ಹೇಳಿದರು.
ಆಶಾಕಿರಣ ಸಂಸ್ಥೆಯು ಸರ್ಕಾರದ ಯಾವುದೇ ಸಹಾಯವಿಲ್ಲದೆ ನಗರದ 13 ಜನ ಸೇರಿ ನಿರ್ಮಾಣ ಮಾಡಿದ ಸಂಸ್ಥೆಯಾಗಿದೆ. ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಪದವಿ ಪಡೆಯುವವರೆಗೂ ಸಹಾಯ ಮಾಡಲಾಗುವುದು, ಇದುವರೆಗೂ ಸುಮಾರು 800 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ ಎಂದರು.
ಕ್ಲಿಕ್ ಮಾಡಿ ಓದಿ: ನಿಮ್ಮ ಖಾತೆಗೂ ಬಂತಾ PMKISAN 2 ಸಾವಿರ | ಇಲ್ಲಿದೆ ನೋಡಿ ಚೆಕ್ ಮಾಡುವ ವಿಧಾನ
ಎಸ್.ಎಸ್.ಎಲ್.ಸಿ. ಮುಗಿದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಓದಲು ಆರ್ಥಿಕ ನೆರವಿಲ್ಲದೆ ಕಷ್ಠ ಪಡುತ್ತಾರೆ, ಇಂತಹವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತದೆ. ನಾವು ನೀಡುವ ಸಹಾಯಧನ ಯಾವುದೇ ಜಾತಿ, ಧರ್ಮ, ಲಿಂಗ ಬೇಧ, ಜನಾಂಗದ ಲೆಕ್ಕಾಚಾರ ಇಲ್ಲದೆ ಅರ್ಜಿಯನ್ನು ಸಲ್ಲಿಸಿದವರ ಅರ್ಥಿಕ ಪರಿಸ್ಥಿತಿ ಪರೀಶೀಲಿಸಿ ಸಹಾಯಧನ ನೀಡಲಾಗುವುದು.
ಪ್ರತಿ ವರ್ಷ ಪರೀಕ್ಷೆಯಲ್ಲಿ ಶೇ.70 ರಷ್ಟು ಫಲಿತಾಂಶ ಬಂದರೆ ಮಾತ್ರ ಮುಂದಿನ ವರ್ಷದ ಸಹಾಯಧನ ಪಡೆಯಲು ಅರ್ಹರಿರುತ್ತಾರೆ. ಇದ್ದಲ್ಲದೆ ವಿದ್ಯಾರ್ಥಿಗಳಿಗೆ ವರ್ಷಕ್ಕೋಮ್ಮೆ ಬಿಡ್ಜ್ ಕೋರ್ಸನ್ನು ಹಮ್ಮಿಕೊಳ್ಳಲಾಗುವುದು ಇದರಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ 4 ದಿನಗಳ ಕಾಲ ವಸತಿ ಸಹಿತ ತರಬೇತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಲಾಗುವುದು ಎಂದು ಹೇಳಿದರು.
ಆಶಾಕಿರಣ ಸಂಸ್ಥೆಯ ನಿರ್ದೇಶಕ ಮಹೇಶ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರಗತಿಗೆ ಸಹಾಯ ಮಾಡುವ ಉದ್ದೇಶದಿಂದ ಕಳೆದ 13 ವರ್ಷದಿಂದ ಈ ಕೆಲಸವನ್ನು ಮಾಡಲಾಗುತ್ತಿದೆ. ನಾವು ಕೂಡುವಂತ ಸಹಾಯಧನ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ, ಶಿಕ್ಷಣ ಮಾತ್ರವಲ್ಲದೆ ನಿಮ್ಮ ಇತರೆ ಸಮಸ್ಯೆಗಳನ್ನು ಸಹಾ ನಮ್ಮ ಬಳಿ ಹೇಳಿದರೆ ಅದಕ್ಕೆ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡಲಾಗುವುದು ಎಂದರು.
ಕ್ಲಿಕ್ ಮಾಡಿ ಓದಿ: Chitradurga: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆ | ಚಿತ್ರದುರ್ಗದ ಇಬ್ಬರು ಸಮಿತಿಗೆ ಆಯ್ಕೆ
ಎಸ್.ಎಸ್.ಎಲ್.ಸಿ.ಯಿಂದ ಹಿಡಿದು ಪದವಿಯವರೆಗೂ ಸುಮಾರು 65 ವಿದ್ಯಾರ್ಥಿಗಳಿಗೆ ಸುಮಾರು 8 ಲಕ್ಷ ರೂ. ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ಮೃಣಾಲಿನಿ, ಎಂ.ಪಿ.ಗುರುರಾಜ್, ಆಶಾಕಿರಣ ಸಂಸ್ಥೆಯ ನಿರ್ದೇಶಕರುಗಳಾದ ಮಧುಪ್ರಸಾದ್, ಕೇಶವಮೂರ್ತಿ, ಪ್ರವೀಣ್, ಪ್ರಸನ್ನ ಕುಮಾರ್, ನಾಗರಾಜ್, ರವಿಶಂಕರ್, ಹೇಮಂತ ರೆಡ್ಡಿ, ರಮೇಶ್, ಭಾನುಕಿರಣ್, ದಿವಾಕರ, ವೆಂಕಟೇಶ್ ಉಪಸ್ಥಿತರಿದ್ದರು.
