Connect with us

Sanehalli; ಸಾಣೇಹಳ್ಳಿ ರಾಷ್ಟ್ರೀಯ ನಾಟಕೊತ್ಸವಕ್ಕೆ ದಿನಾಂಕ ನಿಗಧಿ

ಸಾಣೇಹಳ್ಳಿಯ ಶ್ರೀ ಗುರು ಬಸವ ಮಹಾಮನೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆ

ಹೊಸದುರ್ಗ

Sanehalli; ಸಾಣೇಹಳ್ಳಿ ರಾಷ್ಟ್ರೀಯ ನಾಟಕೊತ್ಸವಕ್ಕೆ ದಿನಾಂಕ ನಿಗಧಿ

CHITRADURGA NEWS | 26 SEPTEMBER 2024

ಹೊಸದುರ್ಗ: ಸಾಣೇಹಳ್ಳಿ(Sanehalli)ಯಲ್ಲಿ ನವೆಂಬರ್ 4 ರಿಂದ 9 ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ(Drama) ನಡೆಯಲಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಕ್ಲಿಕ್ ಮಾಡಿ ಓದಿ: VA protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಆರಂಭ | ಕೆಲಸದ ಒತ್ತಡ ತಗ್ಗಿಸಲು ಆಗ್ರಹ | ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ಸಾಣೇಹಳ್ಳಿಯ ಶ್ರೀ ಗುರು ಬಸವ ಮಹಾಮನೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ.

ಎಸ್ ಎಸ್ ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯವಿಚಾರ ಸಂಕಿರಣದ ಕಾರ್ಯಕ್ರಮಗಳು ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ.

ನಾಟಕೋತ್ಸವದಲ್ಲಿ ಶಿವಸಂಚಾರದ 3 ನಾಟಕಗಳು ಮತ್ತು ಪರಭಾಷೆಯ ನಾಟಕಗಳೂ ಸೇರಿದಂತೆ ನಾಟಕಗಳು ಪ್ರದರ್ಶನಗೊಳ್ಳುವವು. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಮುಂಸಾಣೇಹಳ್ಳಿತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ.

ಕ್ಲಿಕ್ ಮಾಡಿ ಓದಿ: Audition; ZEE ಕನ್ನಡದಿಂದ ‌ಸರಿಗಮಪ ಆಡಿಷನ್‌ ಚಿತ್ರದುರ್ಗದಲ್ಲಿ | ಯಾರೆಲ್ಲಾ ಭಾಗವಹಿಸಬಹುದು ಗೊತ್ತಾ

ಅತಿಥಿಗಳು, ಸ್ವಾಮಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ನಾಟಕಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಎಸ್.ಕೆ.ಪರಮೇಶ್ವರಯ್ಯ, ತಾಲ್ಲೂಕು ಸಾಧು ಸದ್ಧರ್ಮ ವೀರಶೈವ ಸಮಾಜದ ಅಧ್ಯಕ್ಷ ಎಸ್.ಸಿದ್ಧಪ್ಪ, ಎ.ಸಿ.ಚಂದ್ರಣ್ಣ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕಾಟೇಹಳ್ಳಿ ಶಿವಕುಮಾರ್, ಬನ್ಸಿಹಳ್ಳಿ ಅಜ್ಜಪ್ಪ, ಬಿ.ಪಿ ಓಂಕಾರಪ್ಪ, ಕೆ.ಬಸವರಾಜ್, ತಿಮ್ಮಜ್ಜ, ಸಿದ್ಧಯ್ಯ, ಕೃಷ್ಣಮೂರ್ತಿ ಸಾಣೇಹಳ್ಳಿ ಮತ್ತು ಸುತ್ತಮುತ್ತಲು ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ನಾಟಕೋತ್ಸವಕ್ಕೆ ಅಜ್ಜಂಪುರದ ಎ.ಸಿ.ಚಂದ್ರಪ್ಪ 18 ಕ್ವಿಂಟಾಲ್ ಈರುಳ್ಳಿಯನ್ನು ಶ್ರೀಮಠಕ್ಕೆ ನೀಡಿದರು.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version