ಹೊಸದುರ್ಗ
B.G.Govindappa: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರದ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ
CHITRADURGA NEWS | 24 OCTOBER 2024
ಹೊಸದುರ್ಗ: ವಾಣಿವಿಲಾಸ ಸಾಗರದ ಹಿನ್ನೀರಿನ ಅಂಚಿನಲ್ಲೇ ಇರುವ ಮಾಡದಕೆರೆ ಹಾಗೂ ಮತ್ತೋಡು ಹೋಬಳಿಯ ಎಲ್ಲ ಗ್ರಾಮಗಳ ಭೂಮಿ ಹಾಗೂ ಕೆರೆಗಳಿಗೆ ವಿವಿ ಸಾಗರದ ನೀರು ಒದಗಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ (B.G.Govindappa) ಅಭಿಪ್ರಾಯಪಟ್ಟಿದ್ದಾರೆ.
ಹೊಸದುರ್ಗ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಿನ್ನೀರಿನ ಅಂಚಿನಲ್ಲೇ ಇರುವ ಈ ಎರಡು ಹೋಬಳಿಗಳ ಜನರಿಗೆ ನೀರು ಸಿಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವಿವಿ ಸಾಗರಕ್ಕೆ ಒಂದೇ ದಿನ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ
ಹಿನ್ನೀರು ಭಾಗದಲ್ಲಿರುವ ಎರಡು ಹೋಬಳಿಗಳಿಗೆ ನೀರು ಒದಗಿಸುವ ಸಂಬಂಧ ಸಮೀಕ್ಷೆ ನಡೆಸಿ, ಸ್ಥಳ ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ವಿವಿ ಸಾಗರಕ್ಕೆ ಗೇಟ್ ಅಳವಡಿಕೆಗೆ ಮನವಿ: ವಿವಿ ಸಾಗರ ಜಲಾಶಯದ ನೀರು 130 ಅಡಿಯೇ ಇರಲಿ, ಅದಕ್ಕೇನು ನಮ್ಮ ತಕರಾರು ಇಲ್ಲ. ಆದರೆ, 134 ಅಡಿ ತಲುಪಿದಾಗ ನೀರನ್ನು ಗೇಟ್ ಮೂಲಕ ಹೊರಹಾಕಬೇಕು ಎಂದು ಬಿ.ಜಿ.ಗೋವಿಂದಪ್ಪ ಹೇಳಿದ್ದಾರೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ನೀರು | ಮೈದುಂಬಿ ಹರಿಯುತ್ತಿರುವ ವೇದಾವತಿ
ಕೆ.ಆರ್.ಎಸ್. ಸೇರಿದಂತೆ ಅನೇಕ ಜಲಾಶಯಗಳಿಗೆ ಗೇಟ್ ಅಳವಡಿಸಲಾಗಿದೆ. ಅದರಂತೆಯೇ ವಿಶ್ವೇಶ್ವರಯ್ಯ ಜಲ ನಿಗಮದವರ ಬಳಿ ಚರ್ಚಿಸಿ, 120 ಕೋಟಿ ರೂ ವೆಚ್ಚದಲ್ಲಿ ಗೇಟ್ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚಾದ ನೀರನ್ನು ಗೇಟ್ ಮೂಲಕ ಹೊರಹಾಕಿ, ಕೋಡಿ ಬಾಯಿಂದ ನೀರು ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.
ಹಿರಿಯೂರು ರೈತರು ನಮ್ಮ ರೈತರ ಸಂಕಷ್ಟ ನೋಡಿ:
ಹಿರಿಯೂರು ತಾಲ್ಲೂಕಿನ ರೈತರು ಹೊಸದುರ್ಗ ತಾಲ್ಲೂಕಿನ ವಿವಿ ಸಾಗರದ ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟ ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಮನವಿ ಮಾಡಿದ್ದಾರೆ.
ವಾಣಿ ವಿಲಾಸ ಸಾಗರ ಜಲಾಶಯ ಈಗಾಗಲೇ ಭರ್ತಿಯಾಗುತ್ತಿದ್ದು, ಕೋಡಿ ಬೀಳುವ ಹಂತದಲ್ಲಿದೆ. 2022 ರಲ್ಲಿ ಕೋಡಿ ಬಿದ್ದಾಗ ತಾಲ್ಲೂಕಿನ ಹಿನ್ನೀರಿನ ಜನತೆ ಅಪಾರ ನಷ್ಟ ಅನುಭವಿಸಿದ್ದರು.
ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ | ನಾಯಕನಹಟ್ಟಿ ಹೊರಮಠ ಜಲಾವೃತ
ವಿವಿ ಸಾಗರದ ನಿರ್ಮಾಣಕ್ಕೆ 25 ಸಾವಿರ ಎಕರೆ ಭೂಮಿ ನೀಡಿರುವುದು ನಮ್ಮ ರೈತರ ಉದಾರ ಗುಣ, ಆದರೆ, ಇಂದು ಅದೇ ಹಿನ್ನೀರಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿವಿ ಸಾಗರ ಜಲಾಶಯ ಪಕ್ಕದಲ್ಲಿಯೇ ಇದ್ದರೂ ಹಿನ್ನೀರಿನ ಅಂಚಿನಲ್ಲಿರುವ ತಾಲ್ಲೂಕಿನ ಜನರಿಗೆ ನೀರು ದೊರೆಯುತ್ತಿಲ್ಲ.
ಅಂತರ್ಜಲ ಮಟ್ಟವೂ ಸಹ ವೃದ್ಧಿಸುತ್ತಿಲ್ಲ. ಕೆರೆ, ಬಾವಿ, ಕೊಳವೆಬಾವಿ ಹಾಗೂ ಜಮೀನುಗಳಲ್ಲಿಯೂ ನೀರಿಲ್ಲ. 700 ಅಡಿ ಕೊಳವೆಬಾವಿ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ. ವಿವಿ ಸಾಗರದ ಭರ್ತಿಯಿಂದ ಒಂದು ಕಡೆ ಸಂತಸ, ಮತ್ತೊಂದೆಡೆ ಸಂಕಟವಿದೆ. ಪಕ್ಷದಿಂದ ಹೊರಬಂದು ಮಣ್ಣಿನ ಮಕ್ಕಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎರಡೂ ಕಡೆ ರೈತರು ವಿಶ್ವಾಸಯುತವಾಗಿ ನಡೆದುಕೊಳ್ಳುವಂತಾಗಬೇಕು ಎಂದರು.
ಇದನ್ನೂ ಓದಿ: ಕರ್ತವ್ಯ ಲೋಪ | PDO ಅಮಾನತು
ಹಿಂದೆ ಮಹಾರಾಜರು ಭೂಮಿ ಕೊಟ್ಟ ರೈತರಿಗೆ ಪರಿಹಾರವನ್ನು ನೀಡಿದ್ದಾರೆ. ಆದರೀಗ ವಿವಿ ಸಾಗರ ಜಲಾಶಯ ಭರ್ತಿಯಾದರೆ, ಖಾತೆ ಜಮೀನುಗಳಿಗೆ ನೀರು ನೀರು ನುಗ್ಗುತ್ತದೆ, ತೇವಾಂಶ ಹೆಚ್ಚಾಗಿ ಮನೆ ಗೋಡೆಗಳು ಬಿರುಕು ಬಿಡುತ್ತವೆ ಎಂದು ವಿವರಿಸಿದ್ದಾರೆ.