Connect with us

ಮುರುಘಾ ಶರಣರು RELIEF | ಬಂಧನವಾದ ಮೂರೇ ತಾಸಲ್ಲಿ ಬಿಡುಗಡೆ

ಮುಖ್ಯ ಸುದ್ದಿ

ಮುರುಘಾ ಶರಣರು RELIEF | ಬಂಧನವಾದ ಮೂರೇ ತಾಸಲ್ಲಿ ಬಿಡುಗಡೆ

ಚಿತ್ರದುರ್ಗ ನ್ಯೂಸ್.ಕಾಂ: ಬಂಧನವಾದ ಮೂರೇ ತಾಸಿನಲ್ಲಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು‌ ಜಿಲ್ಲಾ‌ ಕಾರಾಗೃಹದಿಂದ ಬಿಡುಗಡೆಯಾದರು.

ಎರಡನೇ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ (Non bailable arrest warrant) ಹೊರಡಿಸಿತ್ತು.

ಇದನ್ನೂ ಓದಿ: ಮುರುಘಾಶ್ರೀ ಪ್ರಕರಣಕ್ಕೆ ಟ್ವಿಸ್ಟ್

ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ದಾವಣಗೆರೆ ವಿರಕ್ತ ಮಠದಲ್ಲಿ ತಂಗಿದ್ದ ಶ್ರೀಗಳನ್ನು ಮಧ್ಯಾಹ್ನ 3 ಗಂಟೆಗೆ ವಶಕ್ಕೆ ಪಡೆದು ಕರೆತಂದು‌ ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯ ಡಿಸೆಂಬರ್ 2 ರವರೆಗೆ ಅಂದರೆ 14 ದಿನ ಕಾಲ ನ್ಯಾಯಾಂಗ‌ ಬಂಧನ ವಿಧಿಸಿ ಆದೇಶ ಹೊರಡಿಸಿತು.

ಈ ಆದೇಶ ಹೊರಬೀಳುತ್ತಲೇ ಅತ್ತ ಶರಣರ‌ ಪರ ವಕೀಲರು ಬೆಂಗಳೂರಿನಲ್ಲಿ ಹೈಕೋರ್ಟ್ ಕದ ತಟ್ಟಿದ್ದರು.

ಚಿತ್ರದುರ್ಗ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ‌ ನೀಡಿದ ಹೈಕೋರ್ಟ್ ತಕ್ಷಣ ಬಿಡುಗಡೆ ಮಾಡುವಂತೆ ತಿಳಿಸಿ, ಆದೇಶ ಪ್ರತಿಯನ್ನು‌ ಚಿತ್ರದುರ್ಗ ಜಿಲ್ಲಾ‌ ಕಾರಾಗೃಹಕ್ಕೆ ಮೇಲ್ ಮೂಲಕ ಕಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಗೆ ಸೂಚಿಸಿತ್ತು.

ಇದನ್ನೂ ಓದಿ: ನ್ಯಾಯಾಂಗ ಬಂಧನ ಆದೇಶಕ್ಕೆ ಹೈಕೋರ್ಟ್ ಅಸಮಾಧಾನ

ಸಂಜೆ 7.30ಕ್ಕೆ e-mail ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಆದೇಶ ಯಲುಪಿದ್ದು, ರಾತ್ರಿ 8.35ಕ್ಕೆ ಶ್ರೀಗಳು ಜೈಲಿನಿಂದ ಹೊರಗೆ ಬಂದರು.‌‌ ಈ ವೇಳೆ ಹೊರಗಿದ್ದ ಭಕ್ತರ ಕಾರಿನಲ್ಲಿ ದಾವಣಗೆರೆಯ ವಿರಕ್ತ‌ ಮಠಕ್ಕೆ ಕರೆದಯ್ಯಲಾಯಿತು.

ಸೋಮವಾರ ಇಡೀ‌ ದಿನ  ಶರಣರ ಪ್ರಕರಣದಲ್ಲಿ ಹಲವು‌ ಮಹತ್ವದ ಘಟನೆಗಳು ನಡೆದವು.

ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದ ನಾಲ್ಕೇ ದಿನಗಳಲ್ಲಿ ಇಂದು ಮತ್ತೆ ಬಂಧನ ವಾರೆಂಟ್ ಹೊರಡಿಸಿದ್ದರಿಂದ ಮತ್ತೆ ಆತಂಕಕ್ಕೆ ಒಳಗಾಗಿದ್ದರು. ಆದರೆ, ಹೈಕೋರ್ಟ್ ಆದೇಶ ಶರಣರ ಪಾಲಿಗೆ ಸಂಜೀವಿನಿಯಾಗಿದ್ದಂತೂ ಸತ್ಯ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version