ಮುಖ್ಯ ಸುದ್ದಿ
SRS ಯುವತರಂಗ | ನಾಳೆಯಿಂದ ಸಾಂಸ್ಕೃತಿಕ ಮಹಾ ಸಮ್ಮೇಳನ | ಪ್ರತಿಭೆಗಳ ಝೇಂಕಾರ
ಚಿತ್ರದುರ್ಗ ನ್ಯೂಸ್.ಕಾಂ: ಶ್ರೀ ರಂಗನಾಥಸ್ವಾಮಿ ಎಜುಕೇಶನ್ ಸೊಸೈಟಿಯಡಿ ನಡೆಯುತ್ತಿರುವ ನಗರದ ಪ್ರತಿಷ್ಠಿತ SRS ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 22, 23 ಮತ್ತು 24 ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಸಂಗಮ ನಡೆಯಲಿದೆ.
SRSಕಾಲೇಜು ಆವರಣದಲ್ಲಿ ನ.22 ರಂದು ಸಂಜೆ 4.30ಕ್ಕೆ SRS ಯುವತರಂಗ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಕಾರ್ಯಕ್ರಮ ಉದ್ಘಾಟಿಸವರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. SRS ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.
SRS ವಿದ್ಯಾರ್ಥಿಗಳಿಂದ ಕಾಲಚಕ್ರಂ ಪ್ರದರ್ಶನ:
ನವೆಂಬರ್ 22 ಬುಧವಾರ ಮತ್ತು 23 ರಂದು ಸಂಜೆ SRS ಸಂಸ್ಥೆಯ ಎಲ್‍ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗಿನ ಎಲ್ಲ ವಿದ್ಯಾರ್ಥಿಗಳು ಯುವತರಂಗ ಕಾಲಚಕ್ರಂ ಹೆಸರಿನಲ್ಲಿ ಸುಮಾರು 20 ಪರಿಕಲ್ಪನೆಗಳಡಿ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಲಿದ್ದಾರೆ.
ನ.23 ರಂದು ಕೆ.ಜಿ(ಕಿಂಡರ್ ಗಾರ್ಡನ್) ಮಕ್ಕಳ ನೃತ್ಯದ ಮೂಲಕ ಆರಂಭವಾಗಲಿದ್ದು, ಪತಂಗ, ನಾಗರೀಕತೆ, ಯೋಗ, ತಾಯಿ ಮತ್ತು ಮಗು, ಸಂವಹನ, ಸರ್ಕಾರಿ ವ್ಯವಸ್ಥೆ, ದಶಾವತಾರ, ವಿಜ್ಞಾನ, ಉಡುಗೆ-ತೊಡುಗೆ, ಸಿನಿಮಾಗಳನ್ನು ಮಾದರಿಯಾಗಿಟ್ಟುಕೊಂಡು ಕಾರ್ಯಕ್ರಮ ನೀಡಲಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರು ರಿಲೀಫ್ | ಬಂಧನವಾದ ಮೂರೇ ತಾಸಲ್ಲಿ ಬಿಡುಗಡೆ
ನ.23 ಗುರುವಾರ ಕೃಷಿ, ಆಹಾರ, ಹಣ, ಶಿಕ್ಷಣ, ಕ್ರೀಡೆ, ಬಾಲ್ಯ, ಅಬಾಕಸ್, ಹಬ್ಬಗಳು, ವೃತ್ತಿಯ ತತ್ವಗಳು, ವಾತಾವರಣ, ನೀರು, ಮಹಿಳಾ ಸಬಲೀಕರಣ, ಸಂಗೀತ, ಪರಿಸರ, ಇತಿಹಾಸ, ಸೇನೆ, ಭಾರತ ಈ ಪರಿಕಲ್ಪನೆಗಳಡಿ ಕಾರ್ಯಕ್ರಮಗಳು ಪ್ರದರ್ಶನವಾಗಲಿವೆ.
ನ.24 ಶುಕ್ರವಾರ ಸಮಾರೋಪ ಸಮಾರಂಭ ನಡೆಯಲಿದ್ದು, SRS ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮಹಾಮೇಳ ನಡೆಯಲಿದೆ. SRS ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕಲಾಮೇಳ, ಎಸ್‍ಆರ್‍ಎಸ್ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಜರುಗಲಿವೆ.
ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ಭಾಗವಹಿಸುವರು. ಸಂಸ್ಥೆಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.