By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ | ದೇವತೆಗಳ ಭೇಟಿಗೆ ಭಕ್ತರ ಕಾತರ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ | ದೇವತೆಗಳ ಭೇಟಿಗೆ ಭಕ್ತರ ಕಾತರ

ಮುಖ್ಯ ಸುದ್ದಿ

ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ | ದೇವತೆಗಳ ಭೇಟಿಗೆ ಭಕ್ತರ ಕಾತರ

chitradurganews.com
Last updated: 7 May 2024 14:14
chitradurganews.com
1 year ago
Share
ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ
ಚಿತ್ರದುರ್ಗದ ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಭರದ ಸಿದ್ಧತೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 07 MAY 2024

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ನೂರಾರು ವರ್ಷಗಳಿಂದ ನಡೆದು ಬರುತ್ತಿರುವ ಜಾನಪದ ಸೊಗಡಿನ, ಸಾಂಪ್ರದಾಯಿಕ ಅಕ್ಕ-ತಂಗಿ ದೇವತೆಯರ ಭೇಟಿ ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಚಿತ್ರದುರ್ಗ ನಗರದ ದೊಡ್ಡಪೇಟೆಯ ರಾಜಬೀದಿಯಲ್ಲಿ ಶ್ರೀ ಬರಗೇರಮ್ಮ ದೇವಿ ಹಾಗೂ ಶ್ರೀ ತಿಪ್ಪಿನಘಟ್ಟಮ್ಮ ದೇವಿಯರ ಭೇಟಿ ಉತ್ಸವ ನಡೆಯಲಿದ್ದು, ಇಂದು(ಮಂಗಳವಾರ) ಸಂಜೆ ಕಾರ್ಯಕ್ರಮ ಭೇಟಿ ಕುರಿತ ಧಾರ್ಮಿಕ ಕಾರ್ಯಗಳು ಪ್ರಾರಂಭವಾಗಲಿವೆ.

ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

ಜನಪದ ಸೊಗಡಿನ ಹಿನ್ನೆಲೆ ಹೊಂದಿರುವ ಈ ಭೇಟಿ ಉತ್ಸವ ಪ್ರತಿವರ್ಷ ಶ್ರೀ ಏಕನಾಥೇಶ್ವರಿ ಅಮ್ಮನವರ ಉತ್ಸವದ ನಂತರ ಮೊದಲ ಮಂಗಳವಾರ ನಡೆಯುವುದು ವಾಡಿಕೆ. ಅದರಂತೆ ಇಂದು ನಡೆಯಲಿರುವ ಭೇಟಿ ಉತ್ಸವಕ್ಕೆ ರಾಜಬೀದಿ ದೊಡ್ಡಪೇಟೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ರಂಗಯ್ಯನ ಬಾಗಿಲಿನವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಭೇಟಿ ಉತ್ಸವ ವೀಕ್ಷಿಸಲು ಬ್ಯಾರಿಕೇಡ್ ನಿರ್ಮಿಸಲಾಗಿದೆ.

ಇದನ್ನೂ ಓದಿ: ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

ಭೇಟಿ ಉತ್ಸವ ಸಮಿತಿಯಿಂದ ಉತ್ಸವಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಜತೆಗೆ ಪ್ರತಿ ವರ್ಷದಂತೆ ನಗರಸಭೆಯಿಂದ ಸ್ವಚ್ಛತಾ ಕಾರ್ಯ, ನೀರಿನ ಸೌಕರ್ಯ, ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಮಹೋತ್ಸವ ನಡೆಯುವ ಸ್ಥಳದಲ್ಲಿ ಆಕರ್ಷಕ ಅಲಂಕಾರ ನಡೆಯುತ್ತಿದ್ದು, ಚಿತ್ತಾಕರ್ಷಕ ರಂಗವಲ್ಲಿ, ಹೂವಿನ ಅಲಂಕಾರಗಳೂ ನಡೆಯುತ್ತಿವೆ.

ಇದನ್ನೂ ಓದಿ: ಮೇ.8 ರಿಂದ 10ರವರೆಗೆ ಮುರುಘಾ ಮಠದಲ್ಲಿ ಬಸವ ಜಯಂತಿ

ಸಂಜೆ ನಡೆಯುವ ಭೇಟಿ ಉತ್ಸವ ಕಣ್ತುಂಬಿಕೊಳ್ಳಲು ದುರ್ಗದ ಜನತೆ ಕಾತರರಾಗಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Akka Thangi bheti UtsavChitradurgaChitradurga newsKannada Latest NewsSri BaragerammaSri EkanatheshwariSri Thippinaghattammaಅಕ್ಕ ತಂಗಿ ಭೇಟಿ ಉತ್ಸವಕನ್ನಡ ಲೇಟೆಸ್ಟ್ ಸುದ್ದಿಚಿತ್ರದುರ್ಗಚಿತ್ರದುರ್ಗ ಸುದ್ದಿಶ್ರೀ ಏಕನಾಥೇಶ್ವರಿಶ್ರೀ ತಿಪ್ಪಿನಘಟ್ಟಮ್ಮಶ್ರೀ ಬರಗೇರಮ್ಮ
Share This Article
Facebook Email Print
Previous Article ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತ ಚಲಾಯಿಸಿದ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
Next Article ಬಸವಣ್ಣ ವೀರಶೈವ ಸಮಾಜದಿಂದ ಬಸವೇಶ್ವರ ಜಯಂತಿ | ಬೈಕ್ ರ್ಯಾಲಿ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up