CHITRADURGA NEWS | 04 SEPTEMBER 2026
ಚಿತ್ರದುರ್ಗ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯಲ್ಲಿ “ಕೃಷ್ಣಂ ವಂದೇ ಜಗದ್ಗುರುಂ” ಎಂಬ ಆಶಯದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು.
ಇದನ್ನೂ ಓದಿ: ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ | ಸೆ.30 ಕೊನೆಯ ದಿನ
ಕಾರ್ಯಕ್ರಮದಲ್ಲಿ 1ರಿಂದ 5ನೇ ತರಗತಿಯ 1,181 ವಿದ್ಯಾರ್ಥಿಗಳು ಭಗವದ್ಗೀತೆಯ 70 ಶ್ಲೋಕಗಳನ್ನು ಸಾಮೂಹಿಕವಾಗಿ ಪಠಿಸುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳ ಸ್ಪಷ್ಟ ಉಚ್ಚಾರಣೆಯೊಂದಿಗೆ ನಡೆದ ಶ್ಲೋಕ ಪಠಣದಿಂದ ಶಾಲಾ ಆವರಣದಲ್ಲಿ ಆಧ್ಯಾತ್ಮಿಕ ಹಾಗೂ ಶಾಂತಿಮಯ ವಾತಾವರಣ ನಿರ್ಮಾಣವಾಯಿತು.
ಶ್ರೀಕೃಷ್ಣನ ಜೀವನ ಸಂದೇಶ, ಭಗವದ್ಗೀತೆಯ ಮಹತ್ವ, ಕರ್ತವ್ಯಪ್ರಜ್ಞೆ, ಸತ್ಯ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಗವದ್ಗೀತೆಯ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ತೀರ್ಪುಗಾರರಾದ ಹರೀಶ್ ಹಾಗೂ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಿಗೆ ವಿದ್ಯಾರ್ಥಿಗಳು ದಾಸರಾಗಬಾರದು | AC ಡಾ.ಕಾಂತರಾಜ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎ. ಲಿಂಗಾರೆಡ್ಡಿ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಬಿ.ಎಲ್. ಅಮೋಘ್, ಕಾರ್ಯದರ್ಶಿ ಸುಜಾತಾ ಬಿ. ಲಿಂಗಾರೆಡ್ಡಿ, ಎಸ್.ಆರ್.ಎಸ್. ಹೆರಿಟೇಜ್ ಶಾಲೆಯ ನಿರ್ದೇಶಕಿ ಲಿಖಿತ ಅಮೋಘ್ ಹಾಗೂ ಆಡಳಿತಾಧಿಕಾರಿ ಡಾ. ರವಿ ಟಿ.ಎಸ್. ಉಪಸ್ಥಿತರಿದ್ದರು.
ಎಸ್.ಆರ್.ಎಸ್. ಹೆರಿಟೇಜ್ ಶಾಲೆ, ಚಳ್ಳಕೆರೆ ಪ್ರಾಂಶುಪಾಲ ವಿಜಯ್ ಬಿ.ಎಸ್., ಎಸ್.ಆರ್.ಎಸ್. ಹೆರಿಟೇಜ್ ಶಾಲೆ (ಸಿಬಿಎಸ್ಇ), ಚಿತ್ರದುರ್ಗದ ಪ್ರಾಂಶುಪಾಲ ಪ್ರಭಾಕರ್ ಎಂ.ಎಸ್. ಹಾಗೂ (ಐಸಿಎಸ್ಇ) ವಿಭಾಗದ ಪ್ರಾಂಶುಪಾಲೆ ಅರ್ಪಿತಾ ಎಂ.ಎಸ್. ವಿದ್ಯಾರ್ಥಿಗಳಿಗೆ ಶುಭಹಾರೈಸಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳ ಶ್ರದ್ಧೆ, ಶಿಸ್ತು ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಗಣ್ಯರು ಹಾಗೂ ಪೋಷಕರು ಪ್ರಶಂಸಿಸಿದರು.
ಇದನ್ನೂ ಓದಿ: ಶಿಕ್ಷಕರಿಗೆ ಪ್ರಶಸ್ತಿ ಪ್ರಕಟ | 33 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
1,181 ವಿದ್ಯಾರ್ಥಿಗಳು 70 ಭಗವದ್ಗೀತಾ ಶ್ಲೋಕಗಳನ್ನು ಸಾಮೂಹಿಕವಾಗಿ ಪಠಿಸಿದ ಈ ಕಾರ್ಯಕ್ರಮ ಯಶಸ್ವಿಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಯಿತು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
“ಭಗವದ್ಗೀತೆಯ ಜ್ಞಾನವು ಜೀವನಕ್ಕೆ ದಾರಿದೀಪ; ಶ್ರೀಕೃಷ್ಣನ ಸಂದೇಶವು ಪ್ರತಿಯೊಬ್ಬರಿಗೂ ಸ್ಫೂರ್ತಿ” ಎಂಬ ಆಶಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

