ಕ್ರೈಂ ಸುದ್ದಿ
Conversion: ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ | ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಚಿತ್ರದುಗ: ನಗರದ ನೀಲಕಂಠೇಶ್ವರ ಬಡಾವಣೆಯಲ್ಲಿ ಮತಾಂತರಕ್ಕೆ(conversion) ಯತ್ನಿಸಿದ ಆರೋಪದಡಿ ಇಬ್ಬರ ಮೇಲೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಬಿನ್ ಹಾಗೂ ಬಿನ್ನಿ ಎಂಬುವವರ ವಿರುದ್ಧ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ನೀಲಕಂಠೇಶ್ವರ ಬಡಾವಣೆಯ ಅನಿಲ್ ಕುಮಾರ್ ದೂರು ದಾಖಲಾಗಿದೆ.
ಅ.9 ರಂದು ಸಂಜೆ 7.30ಕ್ಕೆ ಅನಿಲ್‌ಕುಮಾರ್ ಮನೆಗೆ ಏಕಾಏಕಿ ಆಗಮಿಸಿದ ರಾಬಿನ್ ಹಾಗೂ ಬಿನ್ನಿ, ಈ ಹಿಂದೆ ಎರಡು ಬಾರಿ ನಿಮ್ಮ ಮನೆಗೆ ಬಂದಿದ್ದೆವು, ನಿಮ್ಮ ತಾಯಿ ಜೊತೆಗೆ ಮಾತನಾಡಿದ್ದೇವೆ. ನೀವು ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ೩೨ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಚಾಲನೆ
ಮತಾಂತರ ಆಗುವುದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ. ನಾವು ಹಣಕಾಸಿನ ಸಹಾಯವನ್ನೂ ಮಾಡುತ್ತೇವೆ. ನಿಮ್ಮ ದೇವರುಗಳು ದೇವರೇ ಅಲ್ಲ, ಕಲ್ಲುಗಳು, ಜಗತ್ತಿಗೆಲ್ಲಾ ಒಬ್ಬನೇ ದೇವರು ಏಸುಕ್ರಿಸ್ತರು, ಅವರನ್ನು ಆರಾಧಿಸಿ ಎಂದು ಪ್ರಚೋಧನೆ ಮಾಡಿದ್ದಾರೆ.
ಈ ಬಗ್ಗೆ ನನ್ನ ಸ್ನೇಹಿತರಿಗೂ ಹೇಳಿ ಅವರನ್ನೂ ಕರೆಯಿಸುತ್ತೇನೆ ಎಂದು ಅನಿಲ್‌ಕುಮಾರ್, ನಗರಸಭೆ ಸದಸ್ಯ ಶಶಿಧರ್ ಹಾಗೂ ಶ್ರೇಣಿಕ್ ಜೈನ್ ಅವರಿಗೆ ಪೋನ್ ಮಾಡಿದ್ದಾರೆ. ಸ್ನೇಹಿತರಿಗೆ ಪೋನ್ ಮಾಡುತ್ತಿದ್ದಂತೆ ರಾಬಿನ್ ಹಾಗೂ ಬಿನ್ನಿ ಮನೆಯಿಂದ ಹೊರಟು ಹೋಗಿದ್ದಾರೆ.
ಇದನ್ನೂ ಓದಿ: ಒಳಮೀಸಲಾತಿಗೆ ಒತ್ತಾಯಿಸಿ ಹೋರಾಟ | ಸಂಸದ ಗೋವಿಂದ ಕಾರಜೋಳ
ಈ ಬಗ್ಗೆ ಸಮಾಲೋಚನೆ ನಡೆಸಿ ಕೋಟೆ ಠಾಣೆಯಲ್ಲಿ ಮತಾಂತರಕ್ಕೆ ಯತ್ನಿಸಿದ ಆರೋಪದಡಿ ಅನಿಲ್‌ಕುಮಾರ್ ದೂರು ದಾಖಲಿಸಿದ್ದಾರೆ.
