Connect with us

4.80 ಕೋಟಿ ವಂಚಿಸಿ ವಿಯೆಟ್ನಾಂ ಸೇರಿದ್ದ ಆರೋಪಿ ಅಂದರ್ | ಕೋಡೆ ರಮಣಯ್ಯನಿಗೆ ಹೆಡೆಮುರಿ ಕಟ್ಟಿದ ಚಿತ್ರದುರ್ಗ ಪೊಲೀಸ್

Accused Arrest who had defrauded 4.80 crores and joined Vietnam

ಕ್ರೈಂ ಸುದ್ದಿ

4.80 ಕೋಟಿ ವಂಚಿಸಿ ವಿಯೆಟ್ನಾಂ ಸೇರಿದ್ದ ಆರೋಪಿ ಅಂದರ್ | ಕೋಡೆ ರಮಣಯ್ಯನಿಗೆ ಹೆಡೆಮುರಿ ಕಟ್ಟಿದ ಚಿತ್ರದುರ್ಗ ಪೊಲೀಸ್

CHITRADURGA NEWS | 26 JUNE 2024

ಚಿತ್ರದುರ್ಗ: ಕೇವಲ 60 ದಿನಗಳಲ್ಲಿ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿ ಜಿಲ್ಲೆಯ 107 ಜನರಿಂದ 4.79 ಕೋಟಿ ರೂ. ಸಂಗ್ರಹಿಸಿ ಪರಾರಿಯಾಗಿದ್ದ ಆರೋಪಿಯನ್ನು ಚಿತ್ರದುರ್ಗ ಸೈಬರ್ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ನಗರದ ಕೋಡೆ ರಮಣಯ್ಯ ಬಂಧಿತ ಆರೋಪಿಯಾಗಿದ್ದು, ವಂಚನೆ ಪ್ರಕರಣದ ಬಳಿಕ ದೇಶವನ್ನೇ ತೊರೆದು ವಿಯೆಟ್ನಾಂ ಸೇರಿಕೊಂಡಿದ್ದ.

ಇದನ್ನೂ ಓದಿ: 106 ಜನರಿಗೆ 4.80 ಕೋಟಿ ರೂ. ವಂಚನೆ | ಚಿತ್ರದುರ್ಗ ಜಿಲ್ಲೆಯಲ್ಲಿ ಬಯಲಿಗೆ ಬಂತು ದೊಡ್ಡ ವಂಚನೆ ಪ್ರಕರಣ

ಈ ಮಾಹಿತಿ ಪತ್ತೆ ಮಾಡಿದ ಚಿತ್ರದುರ್ಗದ ಸೈಬರ್ ಠಾಣೆ ಪೊಲೀಸರು, ಭಾರತ ಸರ್ಕಾರದ ಬ್ಯೂರೋ ಆಫ್ ಇಮಿಗ್ರೇಶನ್(Bureay of Immigration, Government of India) ವಿಭಾಗದ ನೆರವಿನೊಂದಿಗೆ ಲುಕ್‍ಔಟ್ ನೋಟೀಸ್ ಹೊರಡಿಸಿದ್ದರು.

2024 ಜೂನ್ 8 ರಂದು ಆರೋಪಿ ಕೋಡೆ ರಮಣಯ್ಯ ಕೊಲ್ಕತ್ತಾದ ಧಮ್ ಧಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ತಕ್ಷಣ ವಿಮಾನ ನಿಲ್ದಾಣ ಪ್ರಾಧಿಕಾರದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೋಲ್ಕತ್ತಾದ ನೇತಾಜಿ ಸುಭಾಷ್‍ಚಂದ್ರಭೋಸ್ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ ತೀವ್ರ | ರೈತರು ಕೈಗೊಳ್ಳಬಹುದಾದ ಪರಿಹಾರವೇನು ?

ಈ ಮಾಹಿತಿ ತಿಳಿದ ಚಿತ್ರದುರ್ಗದ ಸಿಇಎನ್ ಠಾಣೆ ಪೊಲೀಸರು, ಕಲ್ಕತ್ತಾಕ್ಕೆ ತೆರಳಿ ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು, ಚಿತ್ರದುರ್ಗದ ಸೈಬರ್ ಪೊಲೀಸ್ ಠಾಣೆಗೆ ಕರೆತಂದು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಕೋಡೆ ರಮಣಯ್ಯ ಬಳಿಯಿದ್ದ ಲ್ಯಾಪ್‍ಟ್ಯಾಪ್, ಮೂರು ಮೊಬೈಲ್ ವಶಪಡಿಸಿಕೊಂಡು ಪಂಚನಾಮೆ ನಂತರ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಮಿರರ್ ಇಮೇಜ್ ಮಾಡಿಕೊಡಲು ನೀಡಲಾಗಿದೆ.

ಇದನ್ನೂ ಓದಿ: ಕನ್ನಡದಲ್ಲಿ ಗೋವಿಂದ ಎಂ.ಕಾರಜೋಳ ಪ್ರಮಾಣ ವಚನ ಸ್ವೀಕಾರ ‌

ಆರೋಪಿಯಿಂದ ಇನ್ನೂ ಸಾಕಷ್ಟು ದಾಖಲೆಗಳ ಸಂಗ್ರಹ ಬಾಕಿಯಿದೆ ಎಂದು ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆ ಪಿಐ ವೆಂಕಟೇಶ್, ಸಿಬ್ಬಂದಿಗಳಾದ ಸಿಎಚ್‍ಸಿ ಸಿ.ಕೆಂಚಪ್ಪ, ಸಿಪಿಸಿ ಗಗನ್ ದೀಪ್ ಪವಾರ್ ಭಾಗವಹಿಸಿದ್ದು, ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಶ್ಲಾಘಿಸಿದ್ದಾರೆ.

ಪ್ರಕರಣಕ್ಕೆ ಚುರುಕು ಮುಟ್ಟಿಸಿದ್ದ ಎಸ್ಪಿ:

60 ದಿನಗಳಲ್ಲಿ ಹೂಡಿಕೆ ಮಾಡಿದ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕ್ರೌಡ್ ಕ್ಲಬ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಚಿಕ್ಕಜಾಜೂರು ರೈಲ್ವೇ ಜಂಕ್ಷನ್‍ನಲ್ಲಿ ಕೆಲಸ ಮಾಡುವ 107 ಮಂದಿ 4.79 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ನೌಕರ ಸಿ.ಎನ್.ನವನೀತ್ ಅಮಾನತು | ಅನಧಿಕೃತ ಗೈರು ಹಾಜರಿ ಹಿನ್ನೆಲೆ ಆದೇಶ

ಹಣ ಪಡೆದುಕೊಂಡ ನಂತರ ಸಂಪರ್ಕಕ್ಕೆ ಸಿಗದೆ, ಹಣವನ್ನೂ ಕೊಡದೆ ಕಣ್ಮರೆಯಾದ ನಂತರ ಹೂಡಿಕೆದಾರರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ 2023 ಡಿಸೆಂಬರ್ 15 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದೊಡ್ಡ ಮೊತ್ತದ ವಂಚನೆಯಾಗಿರುವ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿ ತನಿಖೆಗೆ ಚುರುಕು ಮುಟ್ಟಿಸಿದ್ದರು.

ಇದನ್ನೂ ಓದಿ: ನಕ್ಷತ್ರ ಆಮೆ ಕಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ | 32 ನಕ್ಷತ್ರ ಆಮೆಗಳು ವಶಕ್ಕೆ

ಕೋಡೆ ರಮಣಯ್ಯನಿಗಾಗಿ ಚಿತ್ರದುರ್ಗ ಪೊಲೀಸರು ತಲಾಶ್ ಆರಂಭಿಸಿದಾಗ ಆತ ದೇಶ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಅದರಂತೆ ಆರೋಪಿ ವಿಯೆಟ್ನಾಂನಲ್ಲಿರುವುದನ್ನು ಸಿಇಎನ್ ಪೊಲೀಸರು ಪತ್ತೆ ಮಾಡಿದ್ದರು.

ವಂಚನೆ ಪ್ರಕರಣಕ್ಕೆ SP ಧರ್ಮೇಂದರ್ ಕುಮಾರ್ ಮೀನಾ ಮರುಜೀವ ನೀಡಿ, THE BANNING OF UNREGULATED DEPOSIT SCHEAME ORDINENCE-2019 (BUDS) ಕಾಯ್ದೆ ಅಡಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಮುಸ್ಲಿಂ ಮಹಿಳೆಗೆ ನ್ಯಾಯ ದೊರಕಿಸಿದ ಸದ್ಧರ್ಮ ನ್ಯಾಯಪೀಠ | ಸಿರಿಗೆರೆ ಸ್ವಾಮೀಜಿಗೆ ಗೌರವ

ಸದರಿ ಕಾಯ್ದೆ ಅನ್ವಯ ಕೋಡೆ ರಮಣಯ್ಯ ಹಾಗೂ ಆತನ ಕಂಪನಿಯ ಆಸ್ತಿ ವಿವರಗಳನ್ನು ಕಲೆ ಹಾಕಿದ್ದರು. ಆಂಧ್ರಪ್ರದೇಶದ ನೊಂದಣಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ. ಈ ವ್ಯವಹಾರಕ್ಕೆ ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದರು.

107 ಜನರಿಗೆ 4.80 ಕೋಟಿ ವಂಚನೆ ಹೇಗೆ ಗೊತ್ತಾ..?

2023 ಡಿಸೆಂಬರ್‍ನಿಂದ ಸುಮಾರು 9 ತಿಂಗಳ ಹಿಂದೆ ಚಿಕ್ಕಜಾಜೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪಿ.ವಿ.ಶೇಷಯ್ಯ ಹಾಗೂ ಎಂ.ಏಳುಕುಂಡಲು ಅವರ ಮೂಲಕ ಮಾಹಿತಿ ಪಡೆದುಕೊಂಡು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಕೋಡೆ ರಮಣಯ್ಯ ಎಂಬುವವರ ಕ್ರೌಡ್ ಕ್ಲಬ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ 60 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ಮಾಹಿತಿ ನೀಡಿದ್ದು, ಅದರಂತೆ ಚಿಕ್ಕಜಾಜೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸದುರ್ಗ ತಾಲೂಕು ಬಾಗೂರು ಮೂಲದ ರಮೇಶಪ್ಪ ತಮ್ಮ ಸ್ನೇಹಿತ ರವೀಂದ್ರ ಹೆಸರಿನಲ್ಲಿ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ | ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

2 ತಿಂಗಳ ನಂತರ ರಮೇಶಪ್ಪನಿಗೆ 1.96 ಲಕ್ಷ ರೂ.ಗಳನ್ನು ಹಣ ಪಾವತಿಯಾಗಿದೆ. ಇದರಿಂದ ನಂಬಿಕೆ ಬಂದು ಮತ್ತೆ ಇದೇ ಕ್ರೌಡ್ ಕ್ಲಬ್ ಕಂಪನಿಗೆ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದ ಇತರೆ ಸಿಬ್ಬಂದಿ, ಸಂಬಂಧಿರು, ಸ್ನೇಹಿತರು ಸೇರಿ ಒಟ್ಟು 106 ಮಂದಿ ವಿವಿಧ ಬ್ಯಾಂಕುಗಳ ಮೂಲಕ ಒಟ್ಟು 4,79,99,000 (4 ಕೋಟಿ 79 ಲಕ್ಷ 99 ಸಾವಿರ) ರೂ.ಗಳನ್ನು ಈ ಕಂಪನಿಯ ಖಾತೆಗೆ ವಿವಿಧ ಬ್ಯಾಂಕುಗಳಿಂದ ಹೂಡಿಕೆ ಮಾಡಿದ್ದರು.

ಕ್ರೌಡ್ ಕ್ಲಬ್ ಕಂಪನಿಯ ಮಾಲಿಕ ಕೋಡೆ ರಮಣಯ್ಯ ಹೂಡಿಕೆದಾರರ ಜೊತೆ ಮಾಡಿಕೊಂಡ ಅಗ್ರಿಮೆಂಟ್ ಪ್ರಕಾರ ಎರಡು ತಿಂಗಳು ಕಳೆದ ನಂತರ ಹಣ ಹಿಂದಿರುಗಿಸಿಲ್ಲ. ಅವರು ಕೊಟ್ಟಿದ್ದ ಎಲ್ಲ ನಂಬರ್‍ಗಳಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಟ್ಸಪ್ ಮೆಸೇಜ್ ಕಳಿಸಿದರೂ ಉತ್ತರಿಸಿರಲಿಲ್ಲ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version