Connect with us

ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ ತೀವ್ರ | ರೈತರು ಕೈಗೊಳ್ಳಬಹುದಾದ ಪರಿಹಾರವೇನು ?

ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ

ಮುಖ್ಯ ಸುದ್ದಿ

ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ ತೀವ್ರ | ರೈತರು ಕೈಗೊಳ್ಳಬಹುದಾದ ಪರಿಹಾರವೇನು ?

CHITRADURGA NEWS | 23 JUNE 2024

ಚಿತ್ರದುರ್ಗ: ಕಳೆದ ವರ್ಷದ ಭೀಕರ ಬರ, ಆನಂತರ ಬಂದ ಕಡು ಬೇಸಿಗೆ, ವಿಪರೀತ ಬಿಸಿಲಿನಿಂದ ಬಳಲಿದ್ದ ಅಡಿಕೆ ತೋಟಗಳಲ್ಲಿ ಈಗ ಹರಳು ಉದುರುವುದು ಹಾಗೂ ಹೊಂಬಾಳೆ(ಇಂಗಾರ) ಒಣಗುವ ಸಮಸ್ಯೆ ರೈತರನ್ನು ಚಿಂತೆಗೀಡು ಮಾಡಿದೆ.

ಗೋಲಿ ಗಾತ್ರಕ್ಕಿಂತ ಕಡಿಮೆ ಅಥವಾ ತುಸು ದಪ್ಪ ಆಗಿರುವ ಅಡಿಕೆಯ ಸಣ್ಣ ಕಾಯಿಗಳು ಮರದಿಂದ ಸುರಿಯುತ್ತಿವೆ.

ಇದನ್ನೂ ಓದಿ: ಪಹಣಿಗೆ ಆಧಾರ್ ಜೋಡಣೆಗೆ ಟಾರ್ಗೆಟ್ ಫಿಕ್ಸ್ ಮಾಡಿದ ಡಿಸಿ

ಈಗಾಗಲೇ ಕಳೆದ ವರ್ಷದ ಕೆಟ್ಟ ವಾತಾವರಣದ ಕಾರಣಕ್ಕೆ ಅಡಿಕೆ ತೋಟಗಳು ಕಳೆಗುಂದಿದ್ದು ಇಳುವರಿಯೂ ಕಡಿಮೆ ಆಗಿದೆ. ಇದರ ನಡುವೆ ಈಗ ಅಡಿಕೆ ಹರಳು ಉದರುತ್ತಿರುವುದು ಮತ್ತು ಹೊಂಬಾಳೆ ಒಣಗುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ನೀರು ಕಡಿಮೆಯಾಗಿ, ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಶೇ.42 ದಾಟಿದ್ದರ ಪರಿಣಾಮ ಈಗ ಮಳೆ ಬಂದು ತಂಪಾಗುತ್ತಲೇ ಹರಳು ಉದುರುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವರ್ಷದ ಸಮಸ್ಯೆಗೆ ವಾತಾವರಣದ ವೈಪರೀತ್ಯವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಜಗದ್ಗುರುಗಳ ಸ್ಮರಣೋತ್ಸವ | ಎಸ್‍ಜೆಎಂ ವಿದ್ಯಾಪೀಠ ಸಂಸ್ಥಾಪನಾ ದಿನಾಚರಣೆಗೆ ತೀರ್ಮಾನ

ವಿಪರೀತ ಬೇಸಿಗೆ ತೇವಾಂಶದ ಕೊರತೆ ಒಂದು ಕಡೆಯಾಗಿದ್ದರೆ, ಆನಂತರ ಬಂದ ವಿಪರೀತ ಮಳೆ. ಇರಡೂ ವಾತಾವರಣಕ್ಕೆ ತೋಟಗಳು ಹೊಂದಿಕೊಳ್ಳಲು ತುಸು ಸಮಯ ಬೇಕಾಗುತ್ತದೆ. ಈ ಕಾರಣಕ್ಕೆ ಇಳುವರಿಯೂ ಕಡಿಮೆ ಆಗಬಹುದು.

ಹೊಂಬಾಳೆ ಒಣಗುವುದು, ಹರಳು ಉದುರುವುದಕ್ಕೆ ಪರಿಹಾರ

ನೀರಿನ ನಿರ್ವಹಣೆ ಹಾಗೂ ಲಘು ಪೋಷಕಾಂಶಗಳ ಕೊರತೆ ಕಾರಣಕ್ಕೆ ಹರಳು ಉದುರುತ್ತವೆ.
ಬೇಸಿಗೆ ಸಂದರ್ಭದಲ್ಲಿ ತೋಟಗಳನ್ನು ಉಳುಮೆ ಮಾಡಬಾರದು ಎಂದು ತಜ್ಞರು ಶಿಫಾರಸ್ಸು ಮಾಡಿದ್ದು, ಬೇಸಿಗೆ ಮುನ್ನಾ ಹಸಿರಿಲೆ ಗೊಬ್ಬರದ ಗಿಡಗಳನ್ನು ಬೆಳೆಸಿದರೆ ಉತ್ತಮ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಕೋಟೆನಾಡಲ್ಲಿ ಇಸ್ರೋ ಮಹತ್ವದ ಸಾಧನೆ | RLV ಪುಷ್ಪಕ್ ಸತತ ಮೂರನೇ ಸಲ ಯಶಸ್ವಿ ಲ್ಯಾಂಡಿಂಗ್

ರೈತರು ಅಡಿಕೆ ಕೊಯ್ಲು ಮುಗಿಯುತ್ತಿದ್ದಂತೆ ಮರಗಳಲ್ಲಿರುವ ಒಣಗಿದ ಹಾಗೂ ರೋಗಪೀಡಿತ ಹೊಂಬಾಳೆಗಳನ್ನು ಕೊಯ್ದು ಸುಟ್ಟು ಹಾಕಬೇಕು.

ಹೊಸದಾಗಿ ಬಂದ ಹೊಂಬಾಳೆಯಲ್ಲಿ ಸಮಸ್ಯೆ ಕಂಡು ಬಂದರೆ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೈಜಿಮ್+ಮ್ಯಾಂಕೊಜೆಬ್ ಬೆರೆಸಿ ಸಿಂಪಡಿಸಬೇಕು. ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಇದರ ಜೊತೆಗೆ ಪ್ರತಿ ಎರಡು ಲೀಟರ್ ನೀರಿಗೆ ಇಮಿಡಾಕ್ಲೋಫ್ರಿಡ್+ಅಸಿಪೇಟ್ ಮಿಶ್ರಣವನ್ನು ಮಿಶ್ರಣ ಸಿಂಪಡಿಸಬೇಕು.

ಇದನ್ನೂ ಓದಿ: ಹಲ್ಲೆ ನಡೆಸಿ ಮನೆ ದರೋಡೆ | ಸ್ಥಳಕ್ಕೆ ಎಸ್ಪಿ ಭೇಟಿ

ವಿಶೇಷವಾಗಿ ಹರಳು ಉದುರುವ ಸಮಸ್ಯೆಗೆ ಲಘು ಪೋಷಕಾಂಶಗಳ ಮಿಶ್ರಣವನ್ನು ಪ್ರತಿ ಲೀ. ನೀರಿಗೆ 5 ಮಿ.ಲೀ ಬೆರೆಸಿ ಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗೆ, ಅನುಮಾನಗಳಿಗೆ ಹತ್ತಿರದ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version