Connect with us

ದಾರುಕಾ ಬಡಾವಣೆಯಲ್ಲಿ ಯೋಗ ದಿನಾಚರಣೆ | ಎಂ.ಕೆ.ತಾಜ್ ಪೀರ್, ಕೆ.ಸಿ.ನಾಗರಾಜ್ ಭಾಗೀ..

ದಾರುಕಾ ಬಡಾವಣೆಯಲ್ಲಿ ಯೋಗ ದಿನಾಚರಣೆ | ಎಂ.ಕೆ.ತಾಜ್ ಪೀರ್, ಕೆ.ಸಿ.ನಾಗರಾಜ್ ಭಾಗೀ..

ಮುಖ್ಯ ಸುದ್ದಿ

ದಾರುಕಾ ಬಡಾವಣೆಯಲ್ಲಿ ಯೋಗ ದಿನಾಚರಣೆ | ಎಂ.ಕೆ.ತಾಜ್ ಪೀರ್, ಕೆ.ಸಿ.ನಾಗರಾಜ್ ಭಾಗೀ..

CHITRADURGA NEWS | 23 JUNE 2024

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ದಾರುಕಾ ಬಡಾವಣೆಯ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬಡಾವಣೆಯ ಸದಸ್ಯರು ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ಕಾರ್ಯಕ್ರಮದಲ್ಲಿ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್ ಭಾಗವಹಿಸಿದ್ದರು.

ಇದನ್ನೂ ಓದಿ: ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ ತೀವ್ರ | ರೈತರು ಕೈಗೊಳ್ಳಬಹುದಾದ ಪರಿಹಾರವೇನು ?

ಈ ವೇಳೆ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಯೋಗವನ್ನು ಅಭ್ಯಾಸ ಮಾಡಿಸುವುದರಿಂದ ಮುಂದೆ ಅವರು ವಿವಿಧ ರೋಗಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು.

ಯೋಗವನ್ನು ಈ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಚಾರಕ್ಕೆ ತಂದವರೇ ಮಲ್ಲಾಡಿಹಳ್ಳಿಯ ರಾಘವೇಂದ್ರ ಶ್ರೀಗಳು, ಅವರು ದಿನ ನಿತ್ಯ ಯೋಗವನ್ನು ಮಾಡದೇ ತಮ್ಮ ದಿನಚರಿಯನ್ನು ಆರಂಭ ಮಾಡುತ್ತಿರಲಿಲ್ಲ, ತಾವು ಮಾಡುವುದ್ದಲ್ಲದೆ ಇದನ್ನು ಬೇರೆಯವರಿಗೂ ಸಹಾ ಹೇಳಿ ಕೊಟ್ಟಿದ್ದಾರೆ. ಗ್ರಾಮಗಳಲ್ಲಿ ಯೋಗವನ್ನು ಪರಿಚಯ ಮಾಡಿದ ಕೀರ್ತೀ ಶ್ರೀಗಳಿಗೆ ಸಲ್ಲುತ್ತದೆ.

ಇದನ್ನೂ ಓದಿ: ಹಿರಿಯೂರಿನಲ್ಲಿ ಸಾವಯವ ಸಿರಿಧಾನ್ಯ ಮಳಿಗೆ | ರೈತರಿಗೆ ವಿಶೇಷ ಪ್ರೋತ್ಸಾಹ

ಚಿನ್ಮಯಾನಂದರವರು ಚಿತ್ರದುರ್ಗದಲ್ಲಿ ಯೋಗವನ್ನು ಹೇಳಿ ಕೊಡಲು ಪ್ರಾರಂಭ ಮಾಡಿದರು ಈಗ ಸಾವಿರಾರು ಜನ ಯೋಗವನ್ನು ದಿನ ನಿತ್ಯ ಅಬ್ಯಾಸ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಇಂದಿನ ಯುವ ಜನತೆ ದುಶ್ಚಟಗಳ ದಾಸರಾಗುತ್ತಿದ್ದಾರೆ, ದುಶ್ಚಟಗಳಿಂದ ದೂರವಿದ್ದು ಯೋಗವನ್ನು ಅಭ್ಯಾಸ ಮಾಡುವುದರಿಂದ ತಮ್ಮ ಆರೋಗ್ಯವನ್ನು ಯುವ ಜನತೆ ಕಾಪಾಡಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಯೋಗದಿಂದ ಉತ್ತಮವಾದ ಆರೋಗ್ಯವನ್ನು ಹೊಂದಬಹುದಾಗಿದೆ, ಇದನ್ನು ದಿನ ನಿತ್ಯ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ. ಋಷಿ, ಮುನಿಗಳು ಯೋಗವನ್ನು ಮಾಡುವುದರ ಮೂಲಕ ಹಲವಾರು ವರ್ಷ ಬದುಕಿದ್ದರು.

ಇದನ್ನೂ ಓದಿ: ಸಂಸದರಿಗೆ ಜಿಲ್ಲೆಯ ಅಭಿವೃದ್ಧಿ ಚಿಂತೆ ಬೇಡ | ಶಾಸಕ ಬಿ.ಜಿ.ಗೋವಿಂದಪ್ಪ

ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ದಂಡಿಸಬೇಕಿದೆ ಆಗ ಮಾತ್ರ ಆರೋಗ್ಯವನ್ನು ಹೊಂದಬಹುದಾಗಿದೆ. ಯೋಗ, ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯೋಗಚಾರ್ಯ ಎಲ್.ಎಸ್. ಚಿನ್ಮಯಾನಂದ, ಮರ್ಚೆಂಟ್ಸ್ ಬ್ಯಾಂಕ್‍ನ ನಿರ್ದೇಶಕ ರಘುರಾಮರೆಡ್ಡಿ,ಬಡಾವಣೆಯ ಮಂಜುನಾಥ್, ಹೇಮಂತಕುಮಾರ್, ರಾಮಪ್ಪ, ಕೇಧರನಾಥ್, ರಂಗಸ್ವಾಮಿ, ಚಂದ್ರಶೇಖರ್, ಮ್ಯಾಕಾನಿಕ್ ರಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version