ಮುಖ್ಯ ಸುದ್ದಿ
ಮುಸ್ಲಿಂ ಮಹಿಳೆಗೆ ನ್ಯಾಯ ದೊರಕಿಸಿದ ಸದ್ಧರ್ಮ ನ್ಯಾಯಪೀಠ | ಸಿರಿಗೆರೆ ಸ್ವಾಮೀಜಿಗೆ ಗೌರವ
CHITRADURGA NEWS | 25 JUNE 2024
ಚಿತ್ರದುರ್ಗ: ತಾಲ್ಲೂಕಿನ ಸಿರಿಗೆರೆಯ ಸದ್ಧರ್ಮ ನ್ಯಾಯಪೀಠ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಮನೆ ವಿವಾದ ಬಗೆಹರಿಸಿದ್ದ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಮುಸ್ಲಿಂ ಮಹಿಳೆಯೊಬ್ಬರು ಸೋಮವಾರ ಅಭಿನಂದಿಸಿದರು.
ಪ್ರತಿ ವರ್ಷ ಮೊಹರಂ ಹಬ್ಬದ ವೇಳೆ ಗೌರಮ್ಮನಹಳ್ಳಿಗೆ ಭೇಟಿ ನೀಡುತ್ತಿದ್ದ ತರಳಬಾಳು ಶ್ರೀಗಳ ಬಗ್ಗೆ ತಿಳಿದುಕೊಂಡಿದ್ದ 85 ವರ್ಷದ ನೂರ್ ಜಾನ್ ಬೇಗಂ ಮನೆ ವಿಚಾರದ ಬಗ್ಗೆ ಒಮ್ಮೆ ಸದ್ಧರ್ಮ ನ್ಯಾಯಪೀಠಕ್ಕೆ ಬಂದು ತಮ್ಮ ಸಂಕಟ ಹೇಳಿಕೊಂಡಿದ್ದರು.
ಕ್ಲಿಕ್ ಮಾಡಿ ಓದಿ: ನಕ್ಷತ್ರ ಆಮೆ ಕಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ | 32 ನಕ್ಷತ್ರ ಆಮೆಗಳು ವಶಕ್ಕೆ
ಅವರ ನೋವು ಆಲಿಸಿದ್ದ ಸ್ವಾಮೀಜಿ, ಅವರ ಮಕ್ಕಳು, ಸಂಬಂಧಿಕರನ್ನು ನ್ಯಾಯಪೀಠಕ್ಕೆ ಕರೆಸಿ ವಿಚಾರಣೆ ನಡೆಸಿದ್ದರು. ಎಲ್ಲರ ಅಹವಾಲು ಆಲಿಸಿ, ಆ ಮನೆಯಲ್ಲಿ ವಾಸ ಮಾಡಲು ನೂರ್ ಜಾನ್‌ಗೆ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದರು. ತಮ್ಮ ಕನಸಿನ ಮನೆಯಲ್ಲಿ ಬದುಕುವ ಅವಕಾಶವನ್ನು ಮತ್ತೆ ಒದಗಿಸಿದ್ದಕ್ಕಾಗಿ ಧನ್ಯತಾ ಭಾವದಿಂದ ಶ್ರೀಗಳಿಗೆ ಗೌರವ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: ಜಿಲ್ಲಾ ಪಂಚಾಯಿತಿ ನೌಕರ ಸಿ.ಎನ್.ನವನೀತ್ ಅಮಾನತು | ಅನಧಿಕೃತ ಗೈರು ಹಾಜರಿ ಹಿನ್ನೆಲೆ ಆದೇಶ
ಕೈಯಲ್ಲೊಂದು ಬುಟ್ಟಿ ಹಿಡಿದು ಕೊಂಡು ಅದರ ತುಂಬ ಹೂ, ಹಣ್ಣು ತುಂಬಿಕೊಂಡು ಸಭಾಂಗಣದಲ್ಲಿ ನಿಂತಿದ್ದ ಇಳಿವಯಸ್ಸಿನ ನೂರ್ ಜಾನ್ ಬೇಗಂ ಅವರನ್ನು ಸೋಮವಾರ ಸಭಾಂಗಣದಲ್ಲಿ ಕಂಡ ಸ್ವಾಮೀಜಿ ಹತ್ತಿರಕ್ಕೆ ಕರೆದು ಕುಶಲೋಪರಿ ವಿಚಾರಿಸಿದರು.
‘ಬಹಳ ಸಂತೋಷವಾಗಿದೆ. ನಿಮ್ಮ ಕೃಪೆಯಿಂದ ನಾನು ನನ್ನ ಮನೆಗೆ ವಾಪಸ್ ಹೋಗಿದ್ದೇನೆ. ತಮ್ಮ ಕೃಪೆಯಿಂದ ಮನೆಯ ಖಾತೆಯೂ ನನ್ನ ಹೆಸರಿಗೆ ಆಗಿದೆ’ ಎಂದು ಹೇಳುತ್ತಾ ನೂರ್ ಜಾನ್ ಶ್ರೀಗಳ ಪಾದಕ್ಕೆರಗಿದರು.
ಗೌರಮ್ಮನಹಳ್ಳಿಯಲ್ಲಿ ಮುಸ್ಲಿಂ ಕುಟುಂಬಗಳೇ ಹೆಚ್ಚು ನೆಲೆಸಿವೆ. ಎರಡು ವರ್ಷಗಳ ಹಿಂದೆ ನೂರ್ ಜಾನ್ ಬೇಗಂ ಅವರನ್ನು ಹಿರಿಯ ಪುತ್ರ ಮನೆಯಿಂದ ಹೊರಗೆ ಹಾಕಿದ್ದರು. ಇದರಿಂದ ಅವರು ಒಂಟಿಯಾಗಿದ್ದರು.