
CHITRADURGA NEWS | 23 JUNE 2024
ಚಿತ್ರದುರ್ಗ: ₹4 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಒಂದು ತಿಂಗಳಲ್ಲಿ ಕ್ರೀಡಾಂಗಣ ಬಳಕೆಗೆ ಸಿದ್ಧವಾಗಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಹೊಳಲ್ಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ಕ್ರೀಡಾಂಗಣದ ರೂಫಿಂಗ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ‘ಹೊಳಲ್ಕೆರೆ ಪಟ್ಟಣ ತಾಲ್ಲೂಕು ಕೇಂದ್ರವಾದರೂ, ಕ್ರೀಡಾಂಗಣ ಇರಲಿಲ್ಲ. ಈಗ ₹ 35 ಕೋಟಿ ವೆಚ್ಚದಲ್ಲಿ ಸುಂದರ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ’ ಎಂದರು.

‘ಕ್ರೀಡಾಂಗಣದ ಹಿಂಭಾಗದ ₹2 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಆಗುತ್ತಿದೆ. ತಾಲ್ಲೂಕು ಕ್ರೀಡಾಂಗಣಕ್ಕೆ ₹7.5 ಕೋಟಿ ಅನುದಾನ ನೀಡಿದ್ದು, ಗ್ಯಾಲರಿ ಕಾಮಗಾರಿ ನಡೆಯುತ್ತಿದೆ. ಈಗ ಮತ್ತೆ ಕ್ರೀಡಾಂಗಣ ಅಭಿವೃದ್ಧಿಗೆ ₹20 ಕೋಟಿ ಅನುದಾನ ನೀಡುತ್ತಿದ್ದು, ಪ್ರೇಕ್ಷಕರ ಗ್ಯಾಲರಿಗೆ ರೂಫಿಂಗ್, ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ. ಕಾಮಗಾರಿ ಮುಗಿದ ನಂತರ ಇದು ಸುಂದರ ಕ್ರೀಡಾಂಗಣವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ದೆಹಲಿ ಸಿಎಂ ಕೇಜ್ರಿವಾಲ್ ಬಿಡುಗಡೆ | ಚಿತ್ರದುರ್ಗ ಎಎಪಿ ಕಾರ್ಯಕರ್ತರ ಸಂಭ್ರಮ

‘ಒಳಾಂಗಣ ಕ್ರೀಡಾಂಗಣದ ರೂಫಿಂಗ್ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣ 200 ಅಡಿ ಉದ್ದ, 100 ಅಡಿ ಅಗಲವಿದೆ. ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಆಡಲು ಅವಕಾಶ ಸಿಗಲಿದೆ. ಪ್ರೇಕ್ಷಕರ ಗ್ಯಾಲರಿ, ವೀಕ್ಷಕ ವಿವರಣೆಗಾರರ ಬಾಕ್ಸ್, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕ್ರೀಡಾಪಟುಗಳ ವಿರಾಮಕ್ಕೆ ಪ್ರತ್ಯೇಕ ವಿಭಾಗ ಇದೆ. ಜಿಲ್ಲೆಯಲ್ಲಿಯೇ ಇದು ಸುಸಜ್ಜಿತ ಕ್ರೀಡಾಂಗಣ ಆಗಲಿದೆ’ ಎಂದು ವಿವರಿಸಿದರು.
ಕ್ಲಿಕ್ ಮಾಡಿ ಓದಿ: ವಿದ್ಯಾನಗರದ ಬೋಟ್‍ಹೌಸ್‍ನಲ್ಲಿ ಯೋಗ ದಿನಾಚರಣೆ
ಪುರಸಭೆ ಸದಸ್ಯ ಮುರುಗೇಶ್, ಡಿ.ಸಿ.ಮೋಹನ್, ಎಂಜಿನಿಯರ್ ಶಿವಕುಮಾರ್, ಮಹೇಶ್ ನಾಯ್ಕ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
