ಕ್ರೈಂ ಸುದ್ದಿ
ರೈಲಿಗೆ ಸಿಲುಕಿ ವ್ಯಕ್ತಿ ಸಾವು | ಗುರುತು ಪತ್ತೆಗೆ ಮನವಿ
CHITRADURGA NEWS | 17 DECEMBER 2024
ಚಿತ್ರದುರ್ಗ: ಚಿತ್ರದುರ್ಗ ಮತ್ತು ಬಾಲೇನಹಳ್ಳಿ ರೈಲು ನಿಲ್ದಾಣಗಳ ನಡುವೆ ರೈಲ್ವೆ ಕಿ.ಮೀ ನಂ 35/100-200ರ ರೈಲ್ವೆ ಹಳಿಗಳಲ್ಲಿ ಯಾವುದೋ ರೈಲಿಗೆ ಸಿಲುಕಿ ಸುಮಾರು 25 ರಿಂದ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಈ ಕುರಿತು ಡಿ.16ರಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ
ಅನಾಮಧೇಯ ಮೃತ ವ್ಯಕ್ತಿಯು 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸು.3 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಇವೆ.
ಮೃತನು ತುಂಬು ತೋಳಿನ ಲೈಟ್ ಗ್ರೀನ್ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಚಡ್ಡಿ, ಕಂದು ಬಣ್ಣದ ಬೆಲ್ಟ್ ಧರಿಸಿರುತ್ತಾರೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯ ಭರ್ತಿಗೆ ಇನ್ನೊಂದೇ ಅಡಿ ಬಾಕಿ
ಈ ಮೇಲ್ಕಂಡ ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08192-259643, 9480802123 ಅಥವಾ ಇ-ಮೇಲ್davangererly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ. 080-22871291 ಗೆ ಸಂಪರ್ಕಿಸಬಹುದು ಎಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.