ಕ್ರೈಂ ಸುದ್ದಿ
ಎತ್ತಿನ ಗಾಡಿಗೆ ಲಾರಿ ಡಿಕ್ಕಿ | ಗಾಡಿಯಲಿದ್ದ ಮಹಿಳೆ, ಎರಡು ಎತ್ತುಗಳು ಮೃತ
CHITRADURGA NEWS | 17 DECEMBER 2024
ಚಿತ್ರದುರ್ಗ: ಲಾರಿ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಭೀಕರ ಅಪಘಾತದಲ್ಲಿ ಎರಡು ಎತ್ತುಗಳು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಚಳ್ಳಕೆರೆ ಹಿರಿಯೂರು ನಡುವಿನ ಹೆದ್ದಾರಿಯಲ್ಲಿ ಸಾಣಿಕೆರೆ ಬಳಿ ವೇದಾ ಶಾಲೆ ಬಳಿ ಈ ಭೀಕರ ಅಪಘಾತ ನಡೆದಿದೆ.
ಇದನ್ನೂ ಓದಿ: ರೈಲಿಗೆ ಸಿಲುಕಿ ವ್ಯಕ್ತಿ ಸಾವು | ಗುರುತು ಪತ್ತೆಗೆ ಮನವಿ
ಘಟನೆಯಲ್ಲಿ ಎಂಜಮ್ಮ(45) ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭಿರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಎರಡು ಎತ್ತುಗಳು ಮೃತಪಟ್ಟಿವೆ.
ಸಾಣಿಕೆರೆ ಗೊಲ್ಲರಹಟ್ಟಿಯ ದಂಪತಿಗಳು ಜಮೀನಿನಿಂದ ಎತ್ತಿನ ಗಾಡಿಯಲ್ಲಿ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ
ಲಾರಿ ವೇಗವಾಗಿ ಬಂದು ಹೊಡೆದ ಹೊಡೆತಕ್ಕೆ ಎತ್ತಿನ ಗಾಡಿ ಪುಡಿ ಪುಡಿಯಾಗಿದೆ. ಘಟನಾ ಸ್ಥಳಕ್ಕೆ ಸಾಣಿಕೆರೆ ಹಾಗೂ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.