CHITRADURGA NEWS | 30 SEPTEMBER 2026
ಚಿತ್ರದುರ್ಗ: ಗಮಕ ಕಲೆ ಕೇವಲ ಪುರಾಣ, ಇತಿಹಾಸದ ವಿಚಾರಗಳನ್ನು ತಿಳಿಸುವುದಷ್ಟೇ ಅಲ್ಲದೇ, ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ ಎಂದು ಜ್ಞಾನದೀಪ ವಿದ್ಯಾಮಂದಿರದ ಕಾರ್ಯದರ್ಶಿ ನಾಗರತ್ನ ಬದರೀನಾಥ್ ತಿಳಿಸಿದರು.
ಇದನ್ನೂ ಓದಿ:
ನಗರದ ಗಮಕ ಸಂಘದ 40ನೇ ವಾರ್ಷಿಕೋತ್ಸವದ ನಿಮಿತ್ತ ನಡೆಸುತ್ತಿರುವ ಸರಣಿ ಕಾರ್ಯಕ್ರಮದ 38ನೇ ಅಧಿವೇಶನವನ್ನು ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ಉದ್ಘಾಟಿಸಿ ಮಾತನಾಡಿದರು.
ಗಮಕ ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿರುವ ನೈತಿಕತೆಯನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಂಡು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಕುಮಾರ ವ್ಯಾಸ ಭಾರತದ ಸಭಾ ಪರ್ವದಿಂದ ಆಯ್ದ ಚಿತ್ತವೇದಕ ಪ್ರಸಂಗ ದ್ರೌಪದಿ ಪ್ರಾತಿಕಾಮಿಕ ಸಂವಾದದ ವಾಚನವನ್ನು ಬೆಂಗಳೂರಿನ ಗಮಕಿ ಮಂಜುಳಾ ದತ್ತಾತ್ರಿ ನಡೆಸಿಕೊಟ್ಟರು.
ಇದನ್ನೂ ಓದಿ:
ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭೇರಿ, ಕಲ್ಯಾಣಿ, ರೇವತಿ, ವಿಜಯನಾಗರಿ, ಅಮೃತವರ್ಷಿಣಿ ಮುಂತಾದ ರಾಗಗಳಲ್ಲಿ ಪದ್ಯಗಳನ್ನು ಪ್ರಸ್ತುತಪಡಿಸಿದ ರೀತಿ ಮನಸೂರೆಗೊಂಡಿತು. ಅದಕ್ಕೆ ತಕ್ಕಂತೆ ವ್ಯಾಖ್ಯಾನವನ್ನು ಗಮಕಿ ಅನಂತಕೃಷ್ಣ ಅವರು ನೀಡಿದರು.
ಸರಾಫರಾದ ಶ್ರೀ ವೆಂಕಟೇಶ ಹಾಗೂ ಸರಸ್ವತಿ ದಂಪತಿಗಳು ಹಾಗೂ ಜ್ಞಾನದೀಪ ವಿದ್ಯಾಮಂದಿರದ ಕಾರ್ಯದರ್ಶಿ ನಾಗರತ್ನ ಬದರೀನಾಥ್ ಅವರು ದೇಣಿಗೆ ನೀಡಿ ಪ್ರೋತ್ಸಾಹ ನೀಡಿದರು.
ಗಮಕ ಕಲಾಸಂಘದ ಕೆ.ಆರ್.ರಮಾದೇವಿ ವೆಂಕಣ್ಣಾಚಾರ್, ಸಂಗೀತ ಶಿಕ್ಷಕಿ ಅಂಜಲಿ ಕಾರ್ತಿಕ್, ಮೀನಾಕ್ಷಿ ಭಟ್, ನಿರ್ದೇಶಕಿ ಬಿ.ಎಲ್.ಉಮಾ ಇದ್ದರು.
ಇದನ್ನೂ ಓದಿ:
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ.ಎಂ.ವೀರೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

