CHITRADURGA NEWS | 29 SEPTEMBER 2026
ಚಿತ್ರದುರ್ಗ: ಮಳೆ ಇಲ್ಲದೆ ಪರಿತಪಿಸುತ್ತಿದ್ದ ಜಿಲ್ಲೆಯ ರೈತರಿಗೆ ಭಾನುವಾರ ಸಂಜೆ ಹಾಗೂ ತಡರಾತ್ರಿವರೆಗೆ ಸುರಿದ ಮಳೆ ತುಸು ನಿರಾಳತೆ ನೀಡಿದೆ.
ಈ ವರ್ಷದ ಮಳೆ ಅಷ್ಟಕ್ಕಷ್ಟೇ ಎನ್ನುವಂತಾಗಿದ್ದು, ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ಕೈ ಕೊಟ್ಟಿವೆ. ಈಗ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವ ಹರಸಾಹಸ ಶುರುವಾಗಿದೆ.
ಇದನ್ನೂ ಓದಿ:ಹಾವು ಕಡಿತ | ಭಯಕ್ಕಿಂತ ಜಾಗೃತಿ, ಸಮಯಪ್ರಜ್ಞೆ ಮುಖ್ಯ
ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಕೊಳವೆ ಬಾವಿಗಳಲ್ಲಿ ನೀರು ನಿಂತು ಹೋಗಿದೆ. ಈಗಾಗಲೇ ಕೆಲವೆಡೆಡ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುತ್ತಿರುವ ಕಡೆಗಳಲ್ಲಿ ರೈತರು ಕಷ್ಟಪಟ್ಟು ಚಾನೆಲ್ ನೀರು ಹಾಯಿಸಿಕೊಂಡು ತೋಟ ಉಳಿಸುವ ಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಆಯುರ್ವೇದ ಪದ್ಧತಿಗೆ ಮಹತ್ವ, ಗುಣಮಟ್ಟದ ಚಿಕಿತ್ಸೆ ನೀಡಿ | ಡಾ.ಎಂ.ಚಂದ್ರಪ್ಪ
ಆದರೂ, ಭದ್ರಾ ನೀರು ನಿಂತ ಮೇಲೆ ನಮ್ಮ ಗತಿ ಏನು ಎಂಬಂತಿದ್ದ ರೈತರಿಗೆ ಈಗ ಸುರಿದ ಮಳೆ ತುಸು ನಿರಾಳತೆ ನೀಡಿದೆ. ಆದರೆ, ಇಷ್ಟು ಮಳೆಯಿಂದ ಏನು ಸಾಧ್ಯವಿಲ್ಲ. ಕೆರೆ ಕಟ್ಟೆಗಳಿಗೆ ಕನಿಷ್ಟ ಅರ್ಧ ಮುಕ್ಕಾಲು ಭಾಗದಷ್ಟು ನೀರು ಬಂದರೆ ಈ ಬೇಸಿಗೆಯನ್ನು ದಾಟಬಹುದು ಎಂಬ ಲೆಕ್ಕಾಚಾರದಲ್ಲಿ ರೈತ ಸಂಕುಲವಿದೆ.
ಸೆಪ್ಟಂಬರ್ 27 ರಿಂದ ಹಸ್ತಾ ಮಳೆ ಶುರುವಾಗಿದ್ದು, ಈ ಮಳೆ ಕೈ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಸೆ.28 ಭಾನುವಾರದಿಂದಲೇ ಮಳೆ ಆರಂಭವಾಗಿದ್ದು, ಈ ಮಳೆ ಮುಗಿಯುವುದರಲ್ಲಿ ಹದವಾಗಿ ಸುರಿದು ಕೆರೆ, ಕಟ್ಟೆಗಳನ್ನು ತುಂಬಿಸಿದರೆ ಬಯಲು ಸೀಮೆ ರೈತರ ಬದುಕು ಹಸನಾಗುತ್ತದೆ.
ಇದನ್ನೂ ಓದಿ:ಆರ್ಥಿಕ ನಷ್ಟ ಮತ್ತು ಒತ್ತಡವನ್ನು ಕಡಿಮೆ ಮಾಡಲು ಮೆಟ್ಟಿಲುಗಳ ಕೆಳಗೆ ಈ ಗಿಡಗಳನ್ನು ಎಂದಿಗೂ ನೆಡಬೇಡಿ
ಭಾನುವಾರ ಸಂಜೆ ಹಾಗೂ ಸೋಮವಾರ ರಾತ್ರಿ ಹಿರಿಯೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಎ.ಎನ್.ಕೊಟ್ಟಿಗೆ, ಬೀರೇನಹಳ್ಳಿ ಭಾಗದಲ್ಲಿ ಹಳ್ಳ, ಕೊಳ್ಳಗಳಲ್ಲಿ ನೀರು ಹರಿದಿದೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಭಾಗದಲ್ಲೂ ಮಳೆಯಾಗಿದೆ.
ಇಂದು ಕೂಡಾ ಮಳೆ ಮುಂದುವರೆಯುವ ಲಕ್ಷಣವಿದ್ದು, ರೈತರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

