CHITRADURGA NEWS | 08 SEPTEMBER 2026
ಚಿತ್ರದುರ್ಗ: ಒಂದು ಸಣ್ಣ ಕೆಲಸ ಮಾಡಿಕೊಟ್ಟವರಿಗೆ ನಾವು ಉಪಕೃತರಾಗಿರುತ್ತೇವೆ. ಅದೇ ಒಂದು ಸಂಸ್ಥೆಯಿಂದ ಅಥವಾ ಮಠದಿಂದ ಜೀವನ ಕಟ್ಟಿಕೊಂಡು ಆ ಸಂಸ್ಥೆಯೊಂದಿಗೆ ಒಡನಾಟ, ಪರಸ್ಪರ ಸಹಕಾರ, ಸಲಹೆ ಕೊಡದಿದ್ದರೆ ಹೇಗೆ ಎಂದು ಡಾ.ಬಸವಕುಮಾರ ಸ್ವಾಮೀಜಿ ಪ್ರಶ್ನಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 7 ಸೆಪ್ಟಂಬರ್ | ಇಂದಿನ ಅಡಿಕೆ ರೇಟ್
ಮುರುಘಾ ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಶ್ರಾವಣ ಮಾಸದ ಪ್ರಯುಕ್ತ ಶ್ರೀಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ವಚನಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಕೊರತೆ ಇಲ್ಲದವರು ಮಠ, ಆಶ್ರಮ ಅಥವಾ ಸಾರ್ವಜನಿಕ ವಿದ್ಯಾರ್ಥಿನಿಲಯಗಳಿಗೆ ಸೇರಲು ಬಯಸುವುದಿಲ್ಲ. ಬಡತನ ಆಶ್ರಯ ಪಡೆದು ಓದುತ್ತಾರೆ. ಅದರಂತೆ ಕಳೆದ 7-8 ದಶಕಗಳ ಹಿಂದೆ ಸ್ಥಿತಿವಂತರು ಕಡಿಮೆ ಪ್ರಮಾಣದಲ್ಲಿದ್ದರು.
ಬಹುತೇಕ ಗ್ರಾಮೀಣ ಭಾಗದ ಜನ ತಮ್ಮ ಮಕ್ಕಳನ್ನು ಮಠಗಳು, ಉಚಿತ ಪ್ರಸಾದ ನಿಲಯಗಳು, ಸರ್ಕಾರದ ಉಚಿತ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿದವರೇ ಆಗಿದ್ದಾರೆ. ಅಂತಹ ವ್ಯವಸ್ಥೆಯಲ್ಲಿ ಓದಿ ರಾಷ್ಟ್ರ ರಾಜ್ಯಗಳ ಚುಕ್ಕಾಣಿ ಹಿಡಿದವರು, ಓದಲು ಬಂದವರು ದೊಡ್ಡ ದೊಡ್ಡ ಮಠಗಳ ಪೀಠಾಧ್ಯಕ್ಷರಾದ ಉದಾಹರಣೆ ಶ್ರೀ ಮುರುಘಾಮಠದ ಪರಂಪರೆಯಲ್ಲಿ ಸಾಕಷ್ಟಿದೆ ಎಂದರು.
ಇದನ್ನೂ ಓದಿ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟ | ಆನ್‌ಲೈನ್ ನೋಂದಣಿ ಕಡ್ಡಾಯ
ಮುರುಘಾಮಠದ ಅಂದಿನ ಶ್ರೀ ಜಯದೇವ ಜಗದ್ಗುರುಗಳು ಸ್ಥಾಪಿಸಿದ ಜಯದೇವ ಉಚಿತ ಪ್ರಸಾದ ನಿಲಯಗಳಲ್ಲಿ ಓದಿ ಈ ನಾಡು ಕಂಡ ಶ್ರೇಷ್ಠರಲ್ಲಿ ಒಬ್ಬರಾಗಿ ಹೋಗಿದ್ದಾರೆ. ಅಂಥ ಮಹನೀಯರಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಒಬ್ಬರು. ಅವರು ತಮ್ಮ ಮಗನಿಗೆ ಜಯದೇವ ಎನ್ನುವ ಹೆಸರನ್ನಿಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಮಠಗಳಲ್ಲಿರುವವರಿಗೆ ಓದಿನೊಂದಿಗೆ ಸಂಸ್ಕೃತಿ ಸನ್ನಡತೆಯ ವಿಶೇಷ ಬದುಕನ್ನು ರೂಪಿಸಿದೆ. ಮುರುಘಾ ಮಠಕ್ಕೆ ಓದಲು ಬಂದವರು ಅತ್ಯುನ್ನತ ಸ್ಥಾನ ಪಡೆದಿದ್ದಾರೆ. ಇಲ್ಲಿ ಸೇರಿರುವ ನಾವುಗಳೇ ನೋಡಿ ಅನೇಕ ಮಠಗಳ ಜವಾಬ್ದಾರಿ ಹೊತ್ತು ಸಾಗಿದ್ದೇವೆ. ಅಂತಹ ಮುರುಘೇಶನ ಸನ್ನಿಧಿಗೆ ಬರುವ ಪರಿಪಾಠ ರೂಢಿಸಿಕೊಂಡರೆ ಅದು ನಿಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ದಾರಿಯಾಗುತ್ತದೆ.
ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳು ಹಾಗೂ ಯುವಕರು ಬರುವುದೇ ಇಲ್ಲ. ನೀವುಗಳು ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬಂದು ಸಂಸ್ಕೃತಿಯನ್ನು ಪರಿಚಯಿಸಬೇಕಿದೆ. ಮಠಗಳು ಜೀವನ ರೂಪಿಸುವ ಶ್ರದ್ಧಾಕೇಂದ್ರಗಳು. ಜೀವನ ನಿರ್ವಹಣೆಗೆ ಕೇವಲ ಹಣವೊಂದಿದ್ದರೆ ಸಾಲದು ಉತ್ತಮ ನಡವಳಿಕೆಯೂ ಮುಖ್ಯ. ಅಂತಹುದನ್ನು ಮುರುಘಾಮಠ ನಮಗೆ ಕಲಿಸಿದೆ. ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಿದೆ ಎಂದು ನುಡಿದರು.
ಇದನ್ನೂ ಓದಿ:
ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಾನು ಸಹ ನನ್ನ ಬಡತನ ಕಾರಣದಿಂದ ಶ್ರೀಮಠಕ್ಕೆ ಓದಲು ಬಂದವನಾಗಿದ್ದೆ. ಅಂದು ನಮ್ಮಲ್ಲಿಯೂ ತುಂಟತನಗಳಿದ್ದವು. ಜೀವನದಲ್ಲಿನ ಅನೇಕ ಪಾಠಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.
ಮುರುಘಾಮಠ ನಮ್ಮಂತ ಅನೇಕ ಯುವ ಮಠಾಧೀಶರನ್ನು ತಯಾರು ಮಾಡಿದ ಕಮ್ಮಟವಾಗಿದ್ದು ಶ್ರೀ ಮುರುಘಾಮಠ ಹೀಗೆ ಅನೇಕರ ಬಾಳಿಗೆ ಬೆಳಕನ್ನು ನೀಡಿದೆ. ನಮಗೆ ಇದು ತವರು. ಅಂತಹ ಸಂಬಂಧವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಡಾ.ಬಸವಪ್ರಭು ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಬೇಲೂರಿನ ಶಿವಕುಮಾರ ಸ್ವಾಮೀಜಿ, ಕೋರಣೇಶ್ವರ ಸ್ವಾಮೀಜಿ, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಮಾತೆ ಜಯದೇವಿ ತಾಯಿ, ಚಿನ್ಮಯಿತಾಯಿ, ಬಸವ ಮುರುಘೇಂದ್ರ ಸ್ವಾಮೀಜಿ, ಬಸವಾದಿತ್ಯ ದೇವರು, ಬಸವಲಿಂಗಮೂರ್ತಿ ಶರಣರು ಸೇರಿದಂತೆ ಭಕ್ತರು, ಅಭಿಮಾನಿಗಳು ವಿವಿಧ ಸಂಘ ಸಂಸ್ಥೆಗಳ ಸಮಾಜಗಳ ಪದಾಧಿಕಾರಿಗಳಾದ ಚಿದನಾಂದಪ್ಪ, ಮಲ್ಲಿಕಾರ್ಜುನಪ್ಪ, ಗಾಯತ್ರಿ ಶಿವರಾಂ, ಡಾ.ಬಿ.ರಾಜಶೇಖರಪ್ಪ, ಡಾ.ಪಿ.ಯಶೋದ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

