CHITRADURGA NEWS | 10 MAY 2026
ಚಿತ್ರದುರ್ಗ: ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಅವನಿ ಕಲೆ ಸಾಹಿತ್ಯ ಹಾಗೂ ಸಾಂಸ್ಕøತಿಕ ವೇದಿಕೆ, ಸುರಭಿ ಮೆಲೋಡಿಸ್ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಡಾ.ಚಾಂದಿನಿ ಖಲೀದ್‍ರವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮದಕರಿ ಸ್ಮಾರಕ ಮಾಡೇ ಮಾಡ್ತಿವಿ | ಚಿಂತೆ ಬೇಡ ಮೋದಿ ಸರ್ಕಾರ ಇದೆ | ಅಮಿತ್ ಶಾ ಭರವಸೆ
ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾಗಿರುವುದರಿಂದ ಕವಿಗೆ ಜವಾಬ್ದಾರಿಯಿರಬೇಕೆಂದು. ಒಂದು ಬೊಗಸೆ ಪ್ರೀತಿ ಹೆಸರೆ ವಿಶೇಷವಾಗಿದೆ. ಕಾವ್ಯ ಇದ್ದಕ್ಕಿದ್ದಂತೆ ಹುಟ್ಟಲ್ಲ. ನಿಲುವು, ಮಟ್ಟ, ಯೋಚನಾ ಲಹರಿ, ಪ್ರತಿಯೊಂದನ್ನು ಬೇರ್ಪಡಿಸುವ ಸ್ವಭಾವ ಡಾ.ಚಾಂದಿನಿ ಖಲೀದ್‍ರವರಲ್ಲಿದೆ. ಈ ಕವನ ಸಂಕಲನದಿಂದ ಹೆಗ್ಗಳಿಕೆ, ಸಾಮಥ್ರ್ಯ ಸಿದ್ದಿಸಿದೆ ಎಂದರು.
ಸಾಹಿತಿ, ಕವಿಗಳಾದವರು ಒಂದೆ ಭಾಷೆಗೆ ಅಂಟಿಕೊಳ್ಳುವ ಬದಲು ಬೇರೆ ಭಾಷೆಗಳ ಬರಹಗಳನ್ನು ಓದಬೇಕು. ಓದದೆ ಬೇರೆ ಆಲೋಚನೆಗಳು ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲ. ಕಾವ್ಯದ ಬಗ್ಗೆ ಜವಾಬ್ದಾರಿಯಿದ್ದಾಗ ಮಾತ್ರ ಸರಿಯಾದ ಬರವಣಿಗೆ ಕೊಡಬೇಕೆಂಬ ಕಾಳಜಿ ಕವಿಯಲ್ಲಿರುತ್ತದೆ. ಡಾ.ಚಾಂದಿನಿ ಖಲೀದ್ ಲೀಲಾ ಜಾಲವಾಗಿ ಕನ್ನಡವನ್ನು ಬಳಸಿದ್ದಾರೆ. ಭಾಷೆಯನ್ನು ಸಿದ್ದಿಸಿಕೊಂಡಿರುವ ಇವರ ಕವನ ಸಂಕಲನದಲ್ಲಿ ಪ್ರಬುದ್ದತೆ ಕಾಣುತ್ತಿದೆ ಎಂದು ಪ್ರಶಂಶಿಸಿದರು.
ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಚಾಂದಿನಿ ಖಲೀದ್‍ರವರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತ ರಾಜ ಮಹಾರಾಜರ ಕಾಲದಿಂದಲೂ ಪ್ರೀತಿಗಾಗಿ ಯುದ್ದವಾಗಿದೆ. ಡಾ.ಚಾಂದಿನಿ ಖಲೀದ್‍ರವರು ಓದಿರುವುದು ಹಿಂದಿ. ಆದರೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿರುವುದರಿಂದ ಇಂತಹ ಕೃತಿಗಳು ಹೊರ ಬರುತ್ತಿವೆ.
ಇದನ್ನೂ ಓದಿ: ಡಿ.ಸುಧಾಕರ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ
ಮುಂದೆ ಇನ್ನು ಹೆಚ್ಚಿನ ಪುಸ್ತಕಗಳು ಅವರ ಬರವಣಿಗೆಯಿಂದ ಹೊರ ಬರಲಿ ಎಂದು ಹಾರೈಸಿದರು. ಪ್ರೀತಿ ಎಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ಪ್ರೀತಿಯಲ್ಲ. ಅಪ್ಪ ಅಮ್ಮನ ಪ್ರೀತಿ, ಸಹೋದರರ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಗೂ ಪ್ರಾಮುಖ್ಯತೆಯಿದೆ. ಆ ಅರ್ಥದಲ್ಲಿ ಡಾ.ಚಾಂದಿನಿ ಖಲೀದ್ ಬೊಗಸೆಯಷ್ಟು ಪ್ರೀತಿ ಎಂಬ ಕವನ ಸಂಕಲನವನ್ನು ಹೊರತಂದಿರಬಹುದೆಂದು ನುಡಿದರು.
ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಆರ್ಥಿಕ ಚಿಂತಕರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಯಟ್ ಉಪನ್ಯಾಸಕ ಸಂತೆಬೆನ್ನೂರಿನ ಫೈಜ್ನಟರಾಜ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜನ್, ಡಾ.ಚಾಂದಿನಿ ಖಲೀದ್ ಇವರುಗಳು ಮಾತನಾಡಿದರು.
ಕವಿ, ಚಿತ್ರಕಾರ ಜಬಿವುಲ್ಲಾ ಎಂ.ಅಸದ್‍ರವರಿಗೆ ಬೆಳದಿಂಗಳು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಸತೀಶ್ ಎಸ್.ವಿ.ಪ್ರಾರ್ಥಿಸಿದರು. ರೇಣುಕಾ ಪ್ರಕಾಶ್ ಸ್ವಾಗತಿಸಿದರು. ಡಾ.ಬಸವರಾಜ್ ಹರ್ತಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಹುರುಳಿ ಬಸವರಾಜ್ ನಿರೂಪಿಸಿದರು.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರ ಹಿರಿಯೂರಿಗೆ | ಅಂತಿಮ ದರ್ಶನಕ್ಕೆ ವ್ಯವಸ್ಥೆ | ನಾಳೆ ಚಳ್ಳಕೆರೆಯಲ್ಲಿ ಅಂತ್ಯಕ್ರಿಯೆ
ಅಪರಾಧ ಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಸಂಗೇನಹಳ್ಳಿ ಅಶೋಕ್‍ಕುಮಾರ್, ಮೃತ್ಯುಂಜಯ, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ರಘುರಾಮರೆಡ್ಡಿ, ಯಶೋಧ ರಾಜಶೇಖರಪ್ಪ, ಶೋಭ ಮಲ್ಲಿಕಾರ್ಜುನ್, ದೀಪಿಕಬಾಬು, ಸತೀಶ್‍ಕುಮಾರ್, ವಿನಾಯಕ, ಇಂದ್ರಕುಮಾರ್ ಹೆಚ್.ಬಿ. ಚಂದ್ರಶೇಖರ್ ಸೇರಿದಂತೆ ಡಾ.ಚಾಂದಿನಿ ಖಲೀದ್‍ರವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
