
CHITRADURGA NEWS | 15 OCTOBER 2025
ಹಿರಿಯೂರು: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ ಅ.15ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಭರಮಸಾಗರ ಹೋಬಳಿಯ ಕೊಳಾಳ್ ಚೆಕ್ ಡ್ಯಾಂ ಭರ್ತಿ | ಬಾಗೀನ ಅರ್ಪಿಸಿದ ಶಾಸಕ ಎಂ.ಚಂದ್ರಪ್ಪ
ಹಿರಿಯೂರು ಪಟ್ಟಣದಲ್ಲಿ ಹೊಸದಾಗಿ ಲಿಂಕ್‍ಲೈನ್ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಇರುವ ಪ್ರಯುಕ್ತ ಹಿರಿಯೂರು 66/11 ವಿದ್ಯುತ್ ವಿತರಣಾ ಕೇಂದ್ರದ ಹುಳಿಯಾರು ಮತ್ತು ತೋಟಗಾರಿಕೆ ಫೀಡರ್ ಮತ್ತು ಚಳ್ಳಕೆರೆ ವಾಟರ್ ಸಪ್ಲೈ 11 ಕೆವಿ ಫೀಡರ್‍ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಿರಿಯೂರು ಪಟ್ಟಣ, ಟಿ.ಬಿ.ವೃತ್ತ, ವೇದಾವತಿ ನಗರ, ಆವಾದಾನಿ ನಗರ, ಲಕ್ಕವ್ವನಹಳ್ಳಿ ರಸ್ತೆ, ಕೆ.ಎಂ.ಕೊಟ್ಟಿಗೆ, ಹರಿಶ್ಚಂದ್ರ ಘಾಟ್, ಎಪಿಎಂಸಿ ಹಿಂಭಾಗ ಚಿತ್ರದುರ್ಗ ಕುಡಿಯುವ ನೀರಿನ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆ | 25 ಜನರಿಗೆ 2 ದಿನ ತರಬೇತಿ
ಗ್ರಾಹಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
