
CHITRADURGA NEWS | 10 SEPTEMBER 2025
ಹೊಸದುರ್ಗ: ಇದೇ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 5ರವರೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಬಸವಸಂಸ್ಕೃತಿ ಅಭಿಯಾನ ಕಾರ್ಯಕ್ರಮವು ಚಿತ್ರದುರ್ಗದಲ್ಲಿ ಸೆಪ್ಟೆಂಬರ್ 28ರಂದು ಶರಣಸಂಸ್ಕೃತಿ ಉತ್ಸವದಲ್ಲಿ ನಡೆಯಲಿದೆ.
ಇದನ್ನೂ ಓದಿ: ಯುವ ವಕೀಲರು ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ | ನ್ಯಾ.ರೋಣ ವಾಸುದೇವ್
ಅದಕ್ಕೆ ಪಟ್ಟಣದ ಶ್ರೀ ಗುರುಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸೇರಿದ್ದ ಪ್ರಮುಖರು, ವಚನ ಝೇಂಕಾರ ಮತ್ತು ಇಡೀ ದಿನದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕಿನ ಲಿಂಗಾಯತ ಸೇರಿದಂತೆ ಸರ್ವ ಸಮಾಜದವರು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳವರು ಭಾಗವಹಿಸುವುದಾಗಿ ನುಡಿದರು.
ಹಾಗೆಯೇ ಇದರ ಮುಂದುವರಿದ ಭಾಗವಾಗಿ ಇದೇ ತಿಂಗಳ 21ರಂದು ಭಾನುವಾರ 12 ಗಂಟೆಗೆ ಗಾಂಧಿವೃತ್ತ ಬಳಿ ಇರುವ ಎಸ್.ಜೆ.ಎಂ. ಕನ್ವೇಷನ್ ಹಾಲ್‌ನಲ್ಲಿ ಸಭೆ ಕರೆಯಲಾಗಿದೆ.
ಅಭಿಯಾನದ ಆಶಯಗಳಾದ ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜದ ಬಗ್ಗೆ ಚಿಂತನೆ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಹಿಳೆಯ ಘನತೆಯನ್ನು ಕಾಪಾಡುವುದು ಸೇರಿದಂತೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ: ಶೋಭಾಯಾತ್ರೆಗೆ 9 ಡಿಜೆ ಎಂದು ಸ್ಟೇಟಸ್ | ದೂರು ದಾಖಲಿಸಿದ ಪೊಲೀಸರು
ಈ ಸಂದರ್ಭದಲ್ಲಿ ಕೆ.ಎಸ್. ಕಲ್ಮಠ, ರಾಗಿ ಶಿವಲಿಂಗಪ್ಪ, ಜೆ.ಮಲ್ಲೇಶ್, ಬಿ.ಪಿ.ಓಂಕಾರಪ್ಪ, ಮಹಿಳಾ ಪ್ರತಿನಿಧಿಗಳಾದ ಅನಿತಾ ರಾಜೇಶ್, ಡಾ. ಕೋಮಲ ಶಿವಸ್ವಾಮಿ, ಆನಿವಾಳದ ಸುಕುಮಾರ್, ವಕೀಲರಾದ ಶಿವಲಿಂಗಪ್ಪ, ಸಿದ್ಧರಾಮೇಶ್, ಎಸ್.ಎಂ. ಷಡಾಕ್ಷರಯ್ಯ, ಚಿತ್ರದುರ್ಗ ಜಿಲ್ಲಾ ಜಾಗತಿಕ ಲಿಂಗಾಯತ ಸಭಾದ ಅಧ್ಯಕ್ಷ ಕೆಂಚವೀರಪ್ಪ, ಬಸವರಾಜ ಕಟ್ಟಿ ಮತ್ತಿತರರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

