Connect with us

    ಸಾಣೇಹಳ್ಳಿ ಮಠದಲ್ಲಿ ಹಳೇ ಬೇರು ಹೊಸ ಚಿಗುರು-ಧವಸ ಸಮರ್ಪಣೆ | ಹಿರಿಯ ಚೇತನಗಳಿಗೆ ಅಭಿನಂದನಾ ಕಾರ್ಯಕ್ರಮ

    ಹೊಸದುರ್ಗ

    ಸಾಣೇಹಳ್ಳಿ ಮಠದಲ್ಲಿ ಹಳೇ ಬೇರು ಹೊಸ ಚಿಗುರು-ಧವಸ ಸಮರ್ಪಣೆ | ಹಿರಿಯ ಚೇತನಗಳಿಗೆ ಅಭಿನಂದನಾ ಕಾರ್ಯಕ್ರಮ

    CHITRADURGA NEWS | 11 MARCH 2024

    ಹೊಸದುರ್ಗ: ಸಾಣೇಹಳ್ಳಿ ಮಠದ ಎಸ್.ಎಸ್.ರಂಗಮಂದಿರದಲ್ಲಿ ಆಯೋಜಿಸಿದ್ದ ಹಳೆ ಬೇರು ಹೊಸ ಚಿಗುರು, ಧವಸ ಸಮರ್ಪಣೆ ಮತ್ತು ಹಿರಿಯ ಚೇತನಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಹಿರಿಯ ಚೇತನಗಳನ್ನು ಗೌರವಿಸುವ ಈ ಕಾರ್ಯಕ್ರಮ ಹೃದಯಸ್ಪರ್ಶಿಯಾದದ್ದು. ಹಿರಿಯರನ್ನು ಗೌರವಿಸದ ಸಮಾಜ ಜಾಗೃತ ಸಮಾಜವಾಗಲಾರದು.

    ಇದನ್ನೂ ಓದಿ: ಪಿ.ಆರ್.ತಿಪ್ಪೇಸ್ವಾಮಿ ಸ್ಮಾರಕ ಹಾಗೂ ಪುತ್ಥಳಿ ಅನಾವರಣ

    ಸಂಸ್ಕಾರವಂತ ಸಮಾಜವಾಗಲಾರದು. ಮಠ ಮತ್ತು ಮನೆಯಲ್ಲಿರುವಂತ ಹಿರಿಯರನ್ನು ಗೌರವಿಸಬೇಕು. ಆಗ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ. ಮನುಷ್ಯ ಎಷ್ಟು ವರ್ಷ ಬಾಳಿದ ಎನ್ನುವುದಕ್ಕಿಂತ, ಆರೋಗ್ಯವಂತನಾಗಿ, ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬಾಳುವುದು ಮುಖ್ಯ ಎಂದು ಹೇಳಿದರು.

    ಹಿರಿಯರನ್ನು ಗೌರವಿಸದ ಸಮಾಜ ಜಾಗೃತ ಸಮಾಜವಾಗಲಾರದು. ಸಂಸ್ಕಾರವಂತ ಸಮಾಜವಾಗಲಾರದು. ಮಠ ಮತ್ತು ಮನೆಯಲ್ಲಿರುವಂತ ಹಿರಿಯರನ್ನು ಗೌರವಿಸಬೇಕು. ಆಗ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

    ಇದನ್ನೂ ಓದಿ:  ವಾಗ್ವಾದಕ್ಕೆ ಕಾರಣವಾದ ಸಂವಾದ | ಮಾದಾರ ಚನ್ನಯ್ಯ ಗುರುಪೀಠ ಕುರಿತ ಚರ್ಚೆಗೆ ತೀವ್ರ ವಿರೋಧ 

    ಮನುಷ್ಯನ ಬದುಕಿನಲ್ಲಿ ಮೂರು ಭಾಗ್ಯಗಳು ಮುಖ್ಯವಾಗಿ ಬೇಕು. ಸುಸಂಸ್ಕøತ ತಂದೆ-ತಾಯಿಗಳು ಪ್ರತಿಯೊಬ್ಬ ಮಕ್ಕಳಿಗೂ ದೊರೆಯಬೇಕು.. ಗುರು ಸಮಾಜದ ಬಗ್ಗೆ ಗೌರವ, ಶಿಷ್ಯರ ಏಳ್ಗೆ ಕಂಡು ಸಂತೋಷಪಡಬೇಕು, ಅರಿವಿನ ಆಗರವಾಗಿರಬೇಕು. ಭಗವಂತನ ಆಶೀರ್ವಾದ ಇರಬೇಕು. ಈ ಮೂರು ಸೌಭಾಗ್ಯಗಳಿದ್ದಾಗ ನಾವು ಭಾಗ್ಯವಂತರಾಗಲು ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

    ಇದನ್ನೂ ಓದಿ: ನಾಯಕ ಎಂ.ಜಯಣ್ಣ, ಅಂಜಿನಪ್ಪ ಕುರಿತು ಕೃತಿಗಳು ಬರಬೇಕು

    ನಮ್ಮಲ್ಲಿ ಏಕ ದೇವನಿಷ್ಠೆ ಇಲ್ಲ. ನಮ್ಮ ಹಿರಿಯರು ನಂಬಿದ ದೇವರನ್ನು ಸಂಪೂರ್ಣವಾಗಿ ನಂಬಿ ಏಕದೇವ ನಿಷ್ಠೆ ಯುಳ್ಳವರಾಗಿದ್ದರು.  ಹೆಣ್ಣು, ಹೊನ್ನು, ಮಣ್ಣು, ಒಡವೆಗಳನ್ನು ಸಂಪಾದಿಸಲಿಲ್ಲ. ಅರಿವನ್ನೇ ಒಡವೆಯನ್ನಾಗಿ ಪಡೆದು ಅನುಭಾವಿಗಳಾದರು.

    ಜೀವನ ಎನ್ನುವುದು ನೀರಿನ ಮೇಲೆ ಗುಳ್ಳೆ ಇದ್ದಂತೆ. ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಎಷ್ಟು ಜನರ ಪ್ರೀತಿ-ವಿಶ್ವಾಸಗಳನ್ನು ಗಳಿಸಿ ಆದರ್ಶವನ್ನಿಟ್ಟುಕೊಂಡಿದ್ದಾನೆ ಎನ್ನುವುದು ತುಂಬಾ ಮುಖ್ಯ.

    ನಮ್ಮ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ ಅನೇಕ ಹಿರಿಯರಿದ್ದಾರೆ. ಅಂತಹ ಹಿರಿಯರನ್ನು ಗೌರವಿಸುವ ಕಾರ್ಯ ಸಾಣೇಹಳ್ಳಿ ಮಠದಲ್ಲಿ ಕಳೆದ ಹಲವು ಹರ್ಷಗಳಿಂದ ನಡೆಯುತ್ತ ಬಂದಿರುವುದು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.

    ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಕಬೀರಾನಂದಾ ಮಠದಲ್ಲಿ ವಿಶಿಷ್ಟ ಕೌದಿ ಪೂಜೆ

    ಎಲ್ಲರ ಮನೆಗಳಲ್ಲಿ ಹಿರಿಯರನ್ನು ಪ್ರೀತಿ-ವಿಶ್ವಾಸದಿಂದ ಕಾಣಬೇಕು. ನಮ್ಮ ಹಿರಿಯರನ್ನು ನಾವು ಗೌರವಿಸಿದರೆ ನಾಳೆ ನಮ್ಮ ಮಕ್ಕಳು ನಮ್ಮನ್ನು ಗೌರವಿಸುತ್ತಾರೆ. ಸಾಣೇಹಳ್ಳಿಯಲ್ಲಿ ಇಷ್ಟೆಲ್ಲಾ ಪ್ರಗತಿ ಆಗಲಿಕ್ಕೆ ನಿಮ್ಮಂಥ ಮುಗ್ಧ ಭಕ್ತರೇ ಕಾರಣ. ಭಕ್ತಿಗೆ ಎಂದೂ ಬರಗಾಲವಿಲ್ಲ. ಏನಾದರೂ ಮಠಕ್ಕೆ ಸಲ್ಲಿಸಬೇಕು ಎನ್ನುವ ಸದ್ಭಾವನೆ ಮತ್ತು ಹೃದಯ ಶ್ರೀಮಂತಿಕೆ ನಮ್ಮ ಭಕ್ತರಿಗಿದೆ ಎಂದರು.

    ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಮಾತನಾಡಿ, ಸತ್ಸಂಗ ಎನ್ನುವುದು ತುಂಬಾ ಶ್ರೇಷ್ಟವಾಗಿರುವಂಥದ್ದು. ಅಂತಹ ಸತ್ಸಂಗದ ಕಾರ್ಯ ನಿರಂತರವಾಗಿ ನಡೆಯಬೇಕು. ನಮ್ಮ ಅಪೇಕ್ಷೆಗಳು ಇನ್ನು ಹೆಚ್ಚು-ಹೆಚ್ಚು ಕೊಡು ಎಂದು ದೇವರಲ್ಲಿ ಬೇಡುತ್ತೇವೆಯೇ ಹೊರತು ಒಳ್ಳೆಯ ಮನೋಸ್ಥಿತಿಯನ್ನು ಕೊಡು ಎಂದು ದೇವರನ್ನು ಯಾರೂ ಬೇಡಿಕೊಳ್ಳುವುದಿಲ್ಲ.

    ನಮ್ಮ ತಿಳಿವಳಿಕೆಗೆ ಒಂದು ಸೀಮಿತ ಗಡಿ ಇದೆ. ಭಗವಂತನ ಇಚ್ಚೆಯನ್ನು ನಾವೆಲ್ಲರೂ ಅರಿತುಕೊಂಡರೆ ಸ್ವಾರ್ಥಿಗಳಾಗಲಿಕ್ಕೆ ಸಾಧ್ಯವಿಲ್ಲ. ನಮ್ಮ ಹಿರಿಯರು ತಮ್ಮ ಜೀವನವನ್ನು ತ್ಯಾಗ ಮಾಡಿ ಸಮಾಜಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ಹೇಳಿದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಶೀಘ್ರದಲ್ಲೇ ವೇಳಾಪಟ್ಟಿ | ಸಿದ್ಧತೆಗಳ ಬಗ್ಗೆ ನಿಗಾ ಇರಿಸಲು ಡಿಸಿ ಸೂಚನೆ 

    ಚಟ್ನಳ್ಳಿ ಮಹೇಶ್ ಮಾತನಾಡಿ, ನಮ್ಮ ವಚನಕಾರರು ಹಿರಿತನಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದರು. ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಅರಿವಿನಿಂದ ಹಿರಿಯರಾಗಿದ್ದವರು. ಶರಣರು ಸತ್ಯವನ್ನು ಒರೆಗಲ್ಲಿಗಚ್ಚಿ ನೋಡುತ್ತಿದ್ದರು. ಹಿರಿತನ ಮತ್ತು ಹಿರಿತನದ ಸಮನ್ವಯತೆಯ ಮಧ್ಯೆದಲ್ಲಿದ್ದ ವಿಚಾರಗಳನ್ನು ಅನುಭವ ಮಂಟಪದಲ್ಲಿ ಚರ್ಚಿಸುತ್ತಿದ್ದರು.

    ಕನ್ನಡ ಸಾಹಿತ್ಯ ಹಿರಿಯರ ಬಗ್ಗೆ ಹೆಚ್ಚು ಮಹತ್ವ ಕೊಟ್ಟಿದೆ. ಹಿರಿಯರನ್ನು ಗೌರವಿಸುವ ಜವಾಬ್ದಾರಿ ಮಠ ಹಾಗೂ ಮನೆಗಳ ಮೇಲಿದೆ. ಇವತ್ತು ಸಾಣೇಹಳ್ಳಿ ಮಠ ಹಿರಿಯರನ್ನು ಗೌರವಿಸುತ್ತಿರುವುದು ಬೇರೆ ಮಠಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಎಸ್‍ಓಪಿ ರಸಗೊಬ್ಬರ ಜಪ್ತಿ | ಕೃಷಿ ಇಲಾಖೆ ಜಾರಿ ದಳ ಜಾರಿ

    ಈ ವೇಳೆ ಧವಸ ಸಂಗ್ರಹ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು.  ವೇದಿಕೆಯಲ್ಲಿ ಎ.ಸಿ ಚಂದ್ರಪ್ಪ, ಎಸ್.ಆರ್.ಚಂದ್ರಶೇಖರಯ್ಯ, ಆಲದಹಳ್ಳಿ ಓಂಕಾರಪ್ಪ, ಎಸ್.ಪಿ ಶೋಭಾ ಸೇರಿದಂತೆ ಧವಸ ಸಂಗ್ರಹ ಸಮಿತಿಯ ಸದಸ್ಯರು ಹಾಗೂ ಹಿರಿಯ ಚೇತನಗಳು ಇದ್ದರು.

    ಈ ಸಂದರ್ಭದಲ್ಲಿ 2 ಲಕ್ಷ ಹಣ, 41 ಕ್ವಿಂಟಲ್ ರಾಗಿ ಮತ್ತು ಕಡಲೆ, ಅಕ್ಕಿ, ಮೆಣಸಿನಕಾಯಿಯನ್ನು ಶ್ರೀ ಮಠಕ್ಕೆ ಭಕ್ತರು ಸಮರ್ಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top