ಮುಖ್ಯ ಸುದ್ದಿ
ಎಸ್‍ಓಪಿ ರಸಗೊಬ್ಬರ ಜಪ್ತಿ | ಕೃಷಿ ಇಲಾಖೆ ಜಾರಿ ದಳ ದಾಳಿ

CHITRADURGA NEWS | 08 MARCH 2024
ಚಿತ್ರದುರ್ಗ: ನಗರದ ರಸಗೊಬ್ಬರ ಮಾರಾಟದ ಅಂಗಡಿಗಳ ಮೇಲೆ ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ಶ್ರೀ ರಂಗ ಅಗ್ರಿ ಅಂಡ್ ಹಾರ್ಟಿ ಕ್ಲಿನಿಕ್ ರಸಗೊಬ್ಬರ ಮಾರಾಟ ಅಂಗಡಿ ಮೇಲೆ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕರಾದ ಎಸ್.ಮಲ್ಲನಗೌಡ, ಜೆ.ಉಲ್ಫತ್‍ಜೈಬ ನೇತೃತ್ವದ ತಂಡ ರಸಗೊಬ್ಬರ ವಶಕ್ಕೆ ಪಡೆದಿದೆ.
ಚಿತ್ರದುರ್ಗ ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ಎಂ.ಆಶಾರಾಣಿ, ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ(ತಾಂತ್ರಿಕ ಅಧಿಕಾರಿ) ವೈ.ವಿ.ಪ್ರವೀಣ್, ಜಿಲ್ಲಾ ಎನ್‍ಎಫ್‍ಎಸ್‍ಎಂ ಸಂಯೋಜಕ ಇ.ತಿಪ್ಪೇಸ್ವಾಮಿ ಭಾಗವಹಿಸಿದ್ದರು.
ಏಕೆ ರಸಗೊಬ್ಬರ ವಶ: ನೇರ ಪೊಟ್ಯಾಶ್‍ಯುಕ್ತ ಎಸ್‌ಓಪಿ ರಸಗೊಬ್ಬರದ ಮೇಲೆ ಶೇ.100ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ ಎಂದು ಲೇಬಲ್ ಹಾಕಿ ಶ್ರೀ ರಂಗ ಅಗ್ರಿ ಅಂಡ್ ಹಾರ್ಟಿ ಕ್ಲಿನಿಕ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಬಂದ ದೂರಿನ ಮೇರೆಗೆ ದಾಳಿ ಮಾಡಿ ತಪಾಸಣೆ ನಡೆಸಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/mobile-dialysis-unit-to-start-soon/
ಈ ವೇಳೆ ಅಂಗಡಿಯಲ್ಲಿ ಮಾರಾಟಗಾರರು ಮತ್ತು ಉತ್ಪಾದಕರು, ಸರಬರಾಜುದಾರರು ರಸಗೊಬ್ಬರ (ನಿಯಂತ್ರಣ) ಆದೇಶ 1985 ಮತ್ತು ಅಗತ್ಯ ವಸ್ತುಗಳ ಅಧಿನಿಯಮ 1955ರ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ. ಈ ಕಾರಣಕ್ಕೆ ಮಾರಾಟ ಮಳಿಗೆಯ ಮೇಲೆ ಮತ್ತು ಉತ್ಪಾದಕ ಕಂಪನಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ದಾಳಿ ವೇಳೆ ಪತ್ತೆಯಾದ ನೀರಿನಲ್ಲಿ ಕರಗದ ಎಸ್‍ಓಪಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
