ತಾಲೂಕು
ವಿದ್ಯಾರ್ಥಿಗಳಿಗೆ ಇಸ್ರೇಲ್ ಜನರ ಶಿಸ್ತಿನ ಪಾಠ ಹೇಳಿದ ಶಾಸಕ ಡಾ.ಎಂ.ಚಂದ್ರಪ್ಪ | ಉಪ್ಪರಿಗೇನಹಳ್ಳಿ ಕಾಲೇಜಿನಿಂದ ಎನ್ನೆಸ್ಸೆಸ್ಸ್ ಶಿಬಿರ ಆಯೋಜನೆ

ಚಿತ್ರದುರ್ಗ ನ್ಯೂಸ್.ಕಾಂ: ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‍ಎಸ್‍ಎಸ್) ಘಟಕದಿಂದ ಬುಧವಾರ ಕೆರೆಯಾಗಳಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ವಾರ್ಷಿಕ ಶಿಬಿರವನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಎನ್‍ಎಸ್‍ಎಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು 8 ದಿನಗಳ ಕಾಲ ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಳು ಶಿಕ್ಷಣದ ಜೊತೆ ಪರೋಪಕಾರದ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಂದರು.
ಇದನ್ನೂ ಓದಿ: ಗುಡ್ಡದ ತಿಮ್ಮಪ್ಪನಿಗೆ ಅನ್ನದ ಕೋಟೆ | ಹರಿದು ಬಂದ ಜನಸಾಗರ
ಕೇವಲ 90 ಲಕ್ಷ ಜನಸಂಖ್ಯೆಯಿರುವ ಇಸ್ರೇಲ್ ಪ್ಯಾಲೆಸ್ತಿನಗಳು ಒಡ್ಡಿರುವ ಸವಾಲನ್ನು ಸಮರ್ಥವಾಗಿ ಎದುರಿಸುತ್ತಿದೆ. ಅಲ್ಲಿ ಹುಟ್ಟಿದವರು ಹೆಣ್ಣಿರಲಿ, ಗಂಡಿರಲಿ ಶಿಕ್ಷಣದ ನಂತರ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಕಾರಣಕ್ಕೆ ಅಲ್ಲಿ ದೇಶಾಭಿಮಾನ ಈ ಮಟ್ಟಕ್ಕೆ ಬೆಳೆದಿದೆ ಎಂದು ಪ್ರಶಂಸಿದರು.
ರಾಜಕಾರಣದಲ್ಲಿ ಅಧಿಕಾರ ಸಿಕ್ಕಾಗ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ಸಮಾಜದ ಋಣ ತೀರಿಸಬೇಕು. ಸಾರ್ವಜನಿಕ ಹಿತ ಕಾಯುವುದರ ಜೊತೆಗೆ ಬಡವರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಇಸ್ರೇಲ್ ಜನರ ಶಿಸ್ತಿನ ಪಾಠ ಹೇಳಿದ ಶಾಸಕ ಡಾ.ಎಂ.ಚಂದ್ರಪ್ಪ
ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳನ್ನು ಅಭಿವೃದ್ದಿಪಡಿಸಿ ಚೆಕ್ ಡ್ಯಾಂ ಕಟ್ಟಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದೆ. ನೀರು ಮಳೆಯಿಲ್ಲದ ರಾಷ್ಟ್ರ ಇಸ್ರೇಲ್ ಎತ್ತರಕ್ಕೆ ಬೆಳೆದಿದೆ ಎನ್ನುವುದಾದರೆ ಅಲ್ಲಿನ ಪ್ರಜೆಗಳಲ್ಲಿರುವ ಸಮಯ ಹಾಗೂ ಕಾಯಕ ಪ್ರಜ್ಞೆ ಕಾರಣ ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಯಾಗಬಾರದೆಂದು ಕೆರೆಯಾಗಳಹಳ್ಳಿ ಪಕ್ಕ ತೇಕಲವಟ್ಟಿ ಗುಡ್ಡದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನ ಕೋಟಹಾಳ್ ಸಮೀಪದ ಸ್ಟೇಷನ್‍ಗೆ ಜೋಗದಿಂದ ನೇರವಾಗಿ ವಿದ್ಯುತ್ ಪೂರೈಕೆ ಮಾಡುವುದಕ್ಕಾಗಿ 250 ಕೋಟಿ ರೂ. ವೆಚ್ಚದಲ್ಲಿ ಪವರ್ ಸ್ಟೇಷನ್ ಕೆಲಸ ಆರಂಭವಾಗಿದೆ ಎಂದು ತಿಳಿಸಿದರು.
ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ಸಾವಿರಾರು ಕೋಟಿ ರೂ. ಅನುದಾನ ತಂದು ಕೆಲಸ ಮಾಡುವ ಸಾಮಥ್ರ್ಯ ಹೊಂದಿದ್ದೇನೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ತಿಮ್ಮಾಭೋವಿ, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಟಿ.ಚಂದ್ರಪ್ಪ, ಸದಸ್ಯರಾದ ಕೆ.ದ್ಯಾಮಣ್ಣ, ಎಲ್.ಪ್ರಸನ್ನಕುಮಾರ್, ಹೊನ್ನಪ್ಪ, ಮುಖಂಡರಾದ ಕೆ.ಆರ್.ಸುರೇಶ್, ಮೂರ್ತಣ್ಣ, ರಂಗಧಾಮ, ದಿನೇಶ್, ಮಂಜುನಾಥ್, ನೌಕರರ ಸಂಘದ ಕಾರ್ಯಾಧ್ಯಕ್ಷ ಎ.ಜಯಪ್ಪ, ಪ್ರಾಚಾರ್ಯರಾದ ಟಿ.ಮಹೇಶ್ವರಪ್ಪ, ಎನ್‍ಎಸ್‍ಎಸ್ ಶಿಬಿರದ ಕಾರ್ಯಕ್ರಮಾಧಿಕರಿ ಆರ್.ಚಂದ್ರಶೇಖರ್, ಉಪನ್ಯಾಸಕರಾದ ಟಿ.ಲೋಹಿತ್ ಕುಮಾರ್, ಬಿ.ವಿಜಯ್, ಸಿ.ಕೆ.ನಯಾಜ್, ಕೆ.ಹೆಚ್.ಉಮೇಶ್, ಪಿ.ಪುನೀತ್ ಇದ್ದರು.
