ಚಿತ್ರದುರ್ಗ ನ್ಯೂಸ್.ಕಾಂ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಂಗಳವಾರ ಚಿತ್ರದುರ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಬೆಳಗ್ಗೆ 10 ಗಂಟೆಗೆ ಜಿಲ್ಲೆಗೆ ಆಗಮಿಸಿದ ಅವರು, ಹಿರಿಯೂರಿನಿಂದ ನೇರವಾಗಿ ಮಾಡದಕೆರೆ ನಾಡಕಚೇರಿಗೆ ಆಗಮಿಸಿ ವೀಕ್ಷಿಸಿದರು.
ಆನಂತರ ಹೊಸದುರ್ಗ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದರು.
ಹೊಸದುರ್ಗ ತಾಲೂಕು ಕಚೇರಿಯ ಆಡಳಿತ ವೈಖರಿ ವೀಕ್ಷಿಸಿದರು. ಇಲ್ಲಿನ ದಾಖಲೆಗಳ ಕೊಠಡಿ (ರೆಕಾರ್ಡ್ ರೂಂ)ಗೆ ನೇರವಾಗಿ ಭೇಟಿ ನೀಡಿದ ಸಚಿವರು, ಅಲ್ಲಿನ ಸ್ಥಿತಿಗತಿ ನೋಡಿ ಅಸಮಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೇಷ್ಮೆ ಕೃಷಿಕರು ಅರ್ಜಿ ಸಲ್ಲಿಸಿ
ರೆಕಾರ್ಡ್ ರೂಂನಲ್ಲಿರುವ ದಾಖಲೆಗಳು ಪುಡಿ ಪುಡಿಯಾಗಿವೆ. ತಕ್ಷಣ ಇವುಗಳನ್ನು ಸ್ಕ್ಯಾನ್ ಮಾಡಿ ಉಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರ 50-100 ವರ್ಷದಗಳ ದಾಖಲೆಗಳು ಹಾಳಾಗುತ್ತವೆ. ಹೀಗಾದರೆ, ಅಕ್ರಮ ಮಾಡುವವರ ಪಾಲಾಗುತ್ತವೆ ಎಂದು ಎಚ್ಚರಿಸಿದರು.
100 ವರ್ಷದ ಹಳೆಯ ಕಡತಗಳು ದೂಳು ಹಿಡಿದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಶೀಘ್ರದಲ್ಲೇ ಎಲ್ಲಾ ಕಡತಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಈ ದಾಖಲೆಗಳು ಲಭ್ಯವಾಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಡದಕೆರೆ ನಾಡಕಚೇರಿಗೆ ಭೇಟಿ ನೀಡಿದ ಕಂದಾಯ ಸಚಿವರು:
ಮಾಡದಕೆರೆ ನಾಡಕಚೇರಿಗೆ ಭೇಟಿ ನೀಡಿದ್ದ ಸಚಿವರು, ಅಧಿಕಾರಿಗಳಿಂದ ಹಲವು ಮಾಹಿತಿಗಳನ್ನು ಪಡೆದರು.

ಇದನ್ನೂ ಓದಿ: ಅಡಕೆ ಮಾರುಕಟ್ಟೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ
ಹೋಬಳಿ ವ್ಯಾಪ್ತಿಯಲ್ಲಿ ಎಷ್ಟು ಬೆಳೆ ಸಮೀಕ್ಷೆ ಆಗಿದೆ, ಎಷ್ಟು ಬಾಕಿಯಿದೆ ಎಂದು ಮಾಹಿತಿ ಪಡೆದು, ಅಡಕೆ, ತೆಂಗಿನ ಬೆಳೆಗಳನ್ನು ಪ್ರತಿ ವರ್ಷ ಸರ್ವೇ ಮಾಡುವುರು ಅನಗತ್ಯ. ಈ ಬಗ್ಗೆ ಮೇಲಿನ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನಂತರ ಹೊಸದುರ್ಗ ತಾಲೂಕು ಕಚೇರಿಗೆ ತೆರಳಿದರು.
ತಾಲೂಕು ಕಚೇರಿ ಭೇಟಿ ನಂತರ ಸಚಿವ ಕೃಷ್ಣಭೈರೇಗೌಡ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಶಾಸಕರಾದ ಬಿ.ಜಿ.ಗೋವಿಂದಪ್ಪ ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

