ಮುಖ್ಯ ಸುದ್ದಿ
VaniVilasaSagara: ವಿವಿ ಸಾಗರ ಭರ್ತಿಗೆ ಇನ್ನು 6 ಅಡಿ ಬಾಕಿ | ಚಿತ್ತಾ ಮಳೆ ಆರ್ಭಟಕ್ಕೆ ಹೆಚ್ಚಾದ ಒಳಹರಿವು
CHITRADURGA NEWS | 21 OCTOBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿಯೇ ಆಗಿರುವ ವಾಣಿವಿಲಾಸ ಸಾಗರ ಜಲಾಶಯ (VaniVilasaSagara) ಭರ್ತಿಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಚಿತ್ತಾ ಮಳೆಯ ಪ್ರಭಾವದಿಂದ ದಿನದಿಂದ ದಿನಕ್ಕೆ ಜಲಾಶಯ ಮಟ್ಟ ಏರಿಕೆಯಾಗುತ್ತಲೇ ಇದೆ. ಇದರಿಂದ ಜಿಲ್ಲೆಯ ರೈತ ಸಂಕುಲ ಸಂತಸಪಡುತ್ತಿದೆ.
ಇದನ್ನೂ ಓದಿ: ಹಿಂದೂ ಸಂಘಟನೆ, ವ್ಯಕ್ತಿ ನಿರ್ಮಾಣ ಆರೆಸ್ಸೆಸ್ಸ್ ಆದ್ಯತೆ
ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ನಾಯಕನಹಟ್ಟಿ ಸೇರಿದಂತೆ ಹಲವು ಗ್ರಾಮಗಳಿಗೆ ವಿವಿ ಸಾಗರ ಕುಡಿಯುವ ನೀರಿನ ಆಸರೆಯಾಗಿದ್ದು, ಜಲಾಶಯ ಒಮ್ಮೆ ಭರ್ತಿಯಾದರೆ ನಾಲ್ಕೈದು ವರ್ಷ ಕುಡಿಯುವ ನೀರಿಗೂ ಸಮಸ್ಯೆ ಇಲ್ಲ ಎನ್ನುವ ನಿರಾಳ ಭಾವ ಮೂಡುತ್ತಿದೆ.
ಅಕ್ಟೋಬರ್ 21 ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ಬರೋಬ್ಬರಿ 1964 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದನ್ನೂ ಓದಿ: ಸಮಾಜಸೇವೆ ಈಡಿಗರ ರಕ್ತದಲ್ಲೇ ಇದೆ | ಸಚಿವ ಡಿ.ಸುಧಾಕರ್
ಸದ್ಯ ಜಲಾಶಯ ಮಟ್ಟ 124 ಅಡಿ ತಲುಪಿದ್ದು, ಭರ್ತಿಯಾಗಲು ಇನ್ನು 6 ಅಡಿ ಮಾತ್ರ ಬಾಕಿ ಇದೆ. ಇಲ್ಲಿಂದ ಮುಂದಕ್ಕೆ ಜಲಾಶಯದ ವ್ಯಾಪ್ತಿ ದೊಡ್ಡದಾಗುತ್ತಾ ಹೋಗಲಿದ್ದು, ಏರಿಕೆ ನಿಧಾನಗತಿಯಾಗಲಿದೆ. 130 ಅಡಿ ಎತ್ತರದ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಾಗಲಿದೆ.
ಇಂದು ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯದಲ್ಲಿ 25.39 ಟಿಎಂಸಿ ನೀರು ಸಂಗ್ರಹವಾಗಿದ್ದು, ಭರ್ತಿಗೆ ಇನ್ನು 5 ಟಿಎಂಸಿ ಮಾತ್ರ ಬಾಕಿ ಇದೆ.
ಇದನ್ನೂ ಓದಿ: ಸರ್ಕಾರ ಬದಲಾದರೆ ಸಚಿವ ಸ್ಥಾನ ನೋಡೋಣ | ಬಿ.ಜಿ.ಗೋವಿಂದಪ್ಪ
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 122.05 ಅಡಿವರೆಗೆ ಇದ್ದು, 23.77 ಟಿಎಂಸಿ ನೀರಿತ್ತು. ಕಳೆದ ವರ್ಷದ ದಾಖಲೆ ಮುರಿದು ಮುಂದೆ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.