ಮುಖ್ಯ ಸುದ್ದಿ
CENTRAL GOVERNMENT; ಕೇಂದ್ರದಿಂದ 5300 ಕೋಟಿ ತಂದು ಸಮಗ್ರ ನೀರಾವರಿ ಯೋಜನೆ ರೂಪಿಸಲು ರೈತರ ಒತ್ತಾಯ
CHITRADURGA NEWS | 12 JULY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ರೂ.5300 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಿಸಿ, ಸಮಗ್ರ ನೀರಾವರಿ ಯೋಜನೆ ರೂಪಿಸಬೇಕೆಂದು ರೈತರು ಶುಕ್ರವಾರ ಸಂಸದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: Lokayukta raid : ಜಗದೀಶ್, ರವೀಂದ್ರ ಮನೆ ಮೇಲೆ ಲೋಕಾಯುಕ್ತ ದಾಳಿ | ಪತ್ತೆಯಾದ ಆಸ್ತಿ ಎಷ್ಟು ಗೊತ್ತಾ ?
15 ವರ್ಷಗಳಿಂದ ಭದ್ರಾ ಮೇಲ್ದಂಡೆ ಕಾಮಗಾರಿಯು ಅತ್ಯಂತ ಆಮೆಗತಿಯಲ್ಲಿ ಸಾಗಿರುವುದು ವಿಷಾದನೀಯ, ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನ ಮಂತ್ರಿಗಳು ಚಿತ್ರದುರ್ಗಕ್ಕೆ ಬಂದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು, ಆದರೆ 1 ವರ್ಷವಾದರೂ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.
ಚುನಾವಣೆಯ ಪೂರ್ವದಿಂದ ಭದ್ರಾ ಮೇಲ್ದಂಡೆಯಿಂದ ಸಮಗ್ರ ನೀರಾವರಿ ಮಾಡುವುದಾಗಿ ಘೋಷಣೆ ಮಾಡಿ ಜಿಲ್ಲೆಯ ಜನರಲ್ಲಿ ಆಸೆಗಳನ್ನು ಹುಟ್ಟಿ ಹಾಕಿದ್ದೀರಿ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟೀಯ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ 5,300 ಕೋಟಿ ಹಣವನ್ನು ಬಿಡುಗಡೆಮಾಡಿಸಿ, ಕೆಲಸದ ಉಸ್ತುವಾರಿಯನ್ನು ವಹಿಸಿಕೊಂಡು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕಾಲಮಿತಿಯಲ್ಲಿ ಕೆಲಸ ಮುಗಿಸಿ ಮುಂದಿನ ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರನ್ನು ತುಂಬಿಸಿ ಸಮಗ್ರ ನೀರಾವರಿಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: Murugha Mutt: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?
ಹಳ್ಳಿಗಳಲ್ಲಿ ಪ್ರಾರಂಭಿಸಿರುವ ಜಲಜೀವನ್ ಯೋಜನೆಯನ್ನು ಶೀಘ್ರವಾಗಿ ಪೂರೈಸಿ, ನೀರು ಸರಬರಾಜು ಮಾಡಬೇಕು ಮತ್ತು ಪ್ರಧಾನಮಂತ್ರಿ ಫಜಲ್ ಭೀಮ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಜಾರಿ ಇರುವ ನಿಯಮಗಳು, ವಿಮಾ ಕಂಪನಿಯ ಪರವಾಗಿಯೇ ಇದ್ದು, ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದೂ ಅದನ್ನು ಸರಿಪಡಿಸಿಬೇಕೆಂದು ಒತ್ತಾಯಿಸಿದರು.
ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ಸಿದ್ಧವೀರಪ್ಪ, ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ಡಿಎಸ್ ಹಳ್ಳಿ ಬಸವರಾಜಪ್ಪ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಮಂಜುನಾಥ್, ನಿಜಲಿಂಗಪ್ಪ ಸೇರಿದಂತೆ ರೈತರು ಇದ್ದರು.