ಮುಖ್ಯ ಸುದ್ದಿ
1 ಕಿ.ಮೀ ತಿರಂಗಾ ಯಾತ್ರೆ | ದುರ್ಗದ ಬೀದಿಗಳಲ್ಲಿ ದೇಶಭಕ್ತಿಯ ಹೆದ್ದರೆ | ಭಾರತೀಯ ಸೇನೆಗೆ ನಾಗರೀಕರ ಬೆಂಬಲ


CHITRADURGA NEWS | 17 MAY 2025
ಚಿತ್ರದುರ್ಗ: ಹೆಗಲು ಹೆಗಲು ಹೆಜ್ಜೆ ಹೆಜ್ಜೆ ಜೋಡಿಗೂಡಿ ನಡೆಯುವಾ ಎಂಬ ಕವಿ ವಾಣಿಯಂತೆ ಕೋಟೆನಾಡು ಚಿತ್ರದುರ್ಗದಲ್ಲಿ ಸಾವಿರಾರು ಹೆಜ್ಜೆಗಳು ಶನಿವಾರ ಒಂದೇ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದ್ದವು.
ತಿರಂಗಾ ಯಾತ್ರೆಯ ಹೈಲೈಟ್ಸ್:
- ತಲೆಯ ಮೇಲೆ ಕಿಲೋ ಮೀಟರ್ ಉದ್ದದ ತ್ರಿವರ್ಣದ ತಿರಂಗ, ನೂರಾರು ತ್ರಿವರ್ಣ ಧ್ವಜ, ಕೆನ್ನೆಯ ಮೇಲೆಯೂ ತ್ರಿವರ್ಣ.
- ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ನಾಗರೀಕರ ವೇದಿಕೆಯಿಂದ ಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮದ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಯಿತು.
ಇದನ್ನೂ ಓದಿ: ಒಂದು ವಾರದೊಳಗೆ ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್‍ಗೆ ಟೆಂಡರ್ | ಸಚಿವ ವಿ.ಸೋಮಣ್ಣ ಸೂಚನೆ
- ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಒಂದು ಕಿ.ಮೀ ಉದ್ದದ ಬೃಹತ್ ತಿರಂಗ ಹಿಡಿದ ವಿದ್ಯಾರ್ಥಿಗಳು, ಸಾರ್ವಜನಿಕರು ಭಾರತ ಮಾತೆಗೆ, ಭಾರತೀಯ ಸೇನೆಗೆ, ಪ್ರಧಾನಿ ನರೇಂದ್ರ ಮೋದಿಗೆ ಜಯಕಾರ ಹಾಕುತ್ತಾ ಸಾಗಿದರು.
- ಮೊಳಕಾಲ್ಮೂರಿನ ಹರೀಶ್ ಅವರ ತಂಡ 8 ಅಡಿ ಅಗಲ, 1 ಕಿ.ಮೀ ಉದ್ದದ ತಿರಂಗಾ ತಯಾರಿಸಿ ಟ್ರ್ಯಾಕ್ಟರ್ ಮೂಲಕ ತಂದಿತ್ತು.
ಇದನ್ನೂ ಓದಿ: ಭೀಕರ ಅಪಘಾತ | ಸ್ಥಳದಲ್ಲೇ ನಾಲ್ಕು ಜನ ಸಾವು | ಕಾರು ಟ್ರ್ಯಾಕ್ಟರ್ ನಡುವೆ ಡಿಕ್ಕಿ
- ಎಲ್ಲರ ಕೆನ್ನೆಯ ಮೇಲೆ ತಿರಂಗಾ ಚಿಹ್ನೆ, ಕೈಯಲ್ಲಿ ತ್ರಿವರ್ಣ ಧ್ವಗಳು ರಾರಾಜಸಿದವು. ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ಹಲವು ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿದ್ದವು. ಚಿತ್ರದುರ್ಗದ ಮುಖ್ಯ ರಸ್ತೆಯಲ್ಲಿ ಇಂದು ದೇಶಭಕ್ತಿಯ ಹೊಳೆಯೇ ಹರಿದಂತಾಯ್ತು.
ಯಾತ್ರೆ ನಂತರ ರೋಟರಿ ಕ್ಲಬ್ ಮುಂಭಾಗದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ನಡೆಯಿತು.
ಅವಕಾಶ ಕೊಟ್ಟರೆ ನಾನು ಬಂದೂಕು ಹಿಡಿದು ನಿಲ್ಲುತ್ತೇನೆ:
ಈ ವೇಳೆ ಲಾಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡುತ್ತಾ, ಭಾರತ ವಿಶ್ವದ ಆಧ್ಯಾತ್ಮದ ತಾಯಿ ಬೇರು. ಈ ದೇಶ ಎಂದೂ ಯಾರ ಮೇಲೆಯೂ ದೌರ್ಜನ್ಯ, ದಬ್ಬಾಳಿಕೆ ಮಾಡಿಲ್ಲ. ಶರಣರು, ಸಂತರು, ವೀರರು ಜನಿಸಿದ ನೆಲ. ಯಾವ ದೇಶಕ್ಕೂ ಕಿರುಕುಳ ಕೊಟ್ಟಿಲ್ಲ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: 1001 ಆಶ್ರಯ ಮನೆ ನಿರ್ಮಾಣ | ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) | ತ್ವರಿತ ನಿರ್ಮಾಣಕ್ಕೆ ತಾಕೀತು
ಭಾರತ ಶಾಂತಿಯ ದೇಶ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಬುದ್ಧ, ಬಸವಣ್ಣ, ವಿವೇಕಾನಂದರು ಹುಟ್ಟಿದ ನೆಲ. ಇಂತಹ ದೇಶದಲ್ಲೂ ಇಂದು ಜನರ ರಕ್ತ ಕುದಿಯುತ್ತಿದೆ. ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶ ಒಟ್ಟಾಗಿದೆ. ಧರ್ಮ, ದೇಶ ದ್ರೋಹಿಗಳು ಯಾರೇ ಇದ್ದರು ಅವರಿಗೆ ಶಿಕ್ಷೆ ಆಗುತ್ತದೆ. ಭಾರತವನ್ನು ಮುಟ್ಟಿದವರು ಸರ್ವನಾಶವಾಗುತ್ತಾರೆ. ಇಂದು ದೇಶ ಉಳಿದರೆ ನಾವು ಉಳಿಯುತ್ತೇವೆ ಎನ್ನುವುದು ಅರ್ಥವಾಗಿದೆ ಎಂದರು.
ಮಠಾಧೀಶರು, ಸ್ವಾಮೀಜಿಗಳು ಬರೀ ಪೂಜೆ ಮಾಡಿಕೊಂಡು ಕುಳಿತುಕೊಳ್ಳುವವರಲ್ಲ. ಅವಕಾಶ ಕೊಟ್ಟರೆ ನಾನು ಕೂಡಾ ಬಂದೂಕು ಹಿಡಿದು ಗಡಿಯಲ್ಲಿ ನಿಲ್ಲುತ್ತೇನೆ ಎಂದು ಶ್ರೀಗಳು ಘೋಷಿಸಿದರು.
ಇದನ್ನೂ ಓದಿ: ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೂಮಿ ಪೂಜೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಪ್ರತಿ ಮನೆಯಿಂದಲೂ ಒಬ್ಬ ಮಗ ದೇಶದ ಸೇನೆಗೆ ಸೇರುವಂತೆ ಸರ್ಕಾರ ಆದೇಶ ಮಾಡಬೇಕು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಚಿತ್ರದುರ್ಗದಲ್ಲಿ ಒಂದು ಕಿ.ಮೀ ಉದ್ದದ ತಿರಂಗಾ. ಡ್ರೋನ್ ಕ್ಯಾಮರಾ ದೃಶ್ಯ.
ಭಾರತ ಮಾತೆಯ ಸಿಂಧೂರ ಪಾಕ್ ಆಕ್ರಮಿತ ಕಾಶ್ಮೀರ:
ಆರೆಸ್ಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಪರ್ಕ ಪ್ರಮುಖ್ ಯಾದವ ಕೃಷ್ಣ ಮಾತನಾಡಿ, ಭಾರತ ಮಾತೆಯ ಸಿಂಧೂರ ಆಕ್ರಮಿತ ಕಾಶ್ಮೀರ. ಈ ಗುರಿ ನಿಗಧಿಯಾಗಿದೆ. ಅದನ್ನು ಪಡೆಯುತ್ತೇವೆ ಎಂದರು.
ಜಗತ್ತಿನಲ್ಲಿ ಹಲವು ಯುದ್ಧ ನಡೆಸಿದರೂ, ಆಪರೇಷನ್ ಸಿಂಧೂರಕ್ಕೆ ಸಮವಲ್ಲ. ಯಾವುದೂ ಗುರಿ ಮುಟ್ಟಿಲ್ಲ. ಆದರೆ, ನಾಲ್ಕು ದಿನದಲ್ಲಿ ಭಾರತ ಹೊಡೆಯಬೇಕಾದ ಜಾಗಕ್ಕೆ ಹೊಡೆದು ತಾರ್ಕಿಕ ಅಂತ್ಯ ಕೊಟ್ಟಿದೆ. ಭಾರತದ ಸೈನ್ಯ ದೊಡ್ಡ ಮಾದರಿಯನ್ನು ಹಾಕಿಕೊಟ್ಟಿದೆ ಎಂದರು.
ಇದನ್ನೂ ಓದಿ: ತುರುವನೂರು ರಸ್ತೆಯ ನೂತನ ಬೆಸ್ಕಾಂ ಕಚೇರಿ | ಸಚಿವ ಡಿ.ಸುಧಾಕರ್ ಉದ್ಘಾಟನೆ
ಕಾರ್ಗಿಲ್ ಯುದ್ಧ ನಡೆದಾಗ ಎಲ್ಓಸಿ ದಾಟದೆ ಯುದ್ದ ಗೆಲ್ಲಲಾಗಿತ್ತು. ಆದರೆ, ಪಠಾಣ್ ಕೋಟ್ ಉರಿ ದಾಳಿ ನಂತರ ಎಲ್ಓಸಿ ದಾಟಿ ಉಗ್ರರ ಮೇಲೆ ದಾಳಿ ನಡೆಸಲಾಗಿತ್ತು. ಪಾಕಿಸ್ಥಾನ ಜೀವಂತ ಇರುವುದೇ ಭಾರತ ದ್ವೇಷ ಮಾಡಲು, ಪಾಕಿಸ್ಥಾನದ ಸೇನಾಧಿಕಾರಿ ಜಗತ್ತಿನ ಮುಸ್ಲೀಮರು ಭಾರತದ ವಿರುದ್ಧ ಇರಬೇಕು ಎನ್ನುತ್ತಾರೆ, ಆದರೆ, ಭಾರತೀಯ ಮುಸಲ್ಮಾನರು ಭಾರತದ ಜೊತೆಗೆ ಇದ್ದೇವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ತಿಳಿಸಿದರು.
ಭಾರತ ಯಾರಿಗೂ ಹೆದರಿ ಯುದ್ಧ ನಿಲ್ಲಿಸಿಲ್ಲ. ಪಾಕಿಸ್ಥಾನದ ಡಿಜಿಎಂಓ ಭಾರತದ ಡಿಜಿಎಂಓ ಜೊತೆ ಮಾತುಕತೆ ಮಾಡಿ ತಮ್ಮ ಪರಿಸ್ಥಿತಿ ಹೇಳಿಕೊಂಡ ನಂತರ ಪೈರಿಂಗ್ ನಿಂತಿದೆ. ಯಾರ ಒತ್ತಡಕ್ಕೂ ಅಲ್ಲ. ಅಮೇರಿಕಾದ ಅಧ್ಯಕ್ಷರು ಸುಮ್ಮನೆ ಪೋನ್ ಮಾಡಿ ಮನವಿ ಮಾಡಿಲ್ಲ, ಭಾರತದ ಸೇನೆಯ ಸಾಮರ್ಥ್ಯ ಹಾಗೂ ಯುದ್ಧದ ಹೊಸ ಮಾದರಿ ಹಾಕಿದ ಕಾರಣಕ್ಕೆ ಮಾತುಕತೆ ನಡೆಸಿದ್ದಾರೆ ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ಮೇ.16 | ಯಾವ ಅಡಿಕೆಗೆ ಎಷ್ಟು ರೇಟ್
ಭಾರತ ಸೇನೆಯ ಸಾಮರ್ಥ್ಯ ಈಗ ಜಗತ್ತಿನೆದುರು ಅನಾವರಣ ಆಗಿದೆ. ಆ ಸೇನೆಯ ಜೊತೆಗೆ ಇಡೀ ದೇಶ ಇದೆ ಎನ್ನುವುದನ್ನು ಪ್ರತಿಬಿಂಬಿಸುವ ಕಾರಣಕ್ಕೆ ಈ ತಿರಂಗಾ ಯಾತ್ರೆ. ಈಗ ದೇಶದ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.
ನಿವೃತ್ತ ಯೋಧ, ಹವಾಲ್ದಾರ್ ಸೂರಯ್ಯ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ನಾನು ಭಾಗಿಯಾಗಿ ಗೆಲುವಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಉಗ್ರರು ಪದೇ ಪದೇ ದಾಳಿ ನಡೆಸಿದಾಗ ಭಾರತ ತಿರುಗೇಟುಕೊಟ್ಟಿದೆ. ಎರಡು ಬಾರಿ ನಡೆದ ಯುದ್ಧ, ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ ದಾಳಿ ಪ್ರತಿಕಾರ, ಈಗ ನಡೆದ ಆಪರೇಷನ್ ಸಿಂಧೂರ ಯಶಸ್ಬಿಯಾಗಿ ನಡೆಸುವ ಮೂಲಕ ಭಾರತದ ಸೇನೆ ಶೌರ್ಯ ಪ್ರದರ್ಶಿಸಿದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಮತ್ತೊಂದು ರೈಲು ಮಾರ್ಗ | ಮಲೆನಾಡಿನಿಂದ ಅರೆ ಮಲೆನಾಡು ಸಂಪರ್ಕ | 1825 ಕೋಟಿ ವೆಚ್ಚ
ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮಣ್ ಮಾತನಾಡಿ, ಹಿಂದೂ ಸಂಸ್ಕೃತಿಯ ಪ್ರತೀಕ ಸಿಂಧೂರ. ಭಾರತೀಯ ಮಹಿಳೆಯರು ಇದಕ್ಕೆ ಮಹತ್ವ ಕೊಡುತ್ತಾರೆ. ಸಿಂಧೂರ ಅಳಿಸಿದವರಿಗೆ ಸರಿಯಾದ ಉತ್ತರ ಕೊಟ್ಟ ಭಾರತ ಕರ್ನಲ್ ಸೋಫಿಯಾ ಖುರೇಶಿ ಹಾಗೂ ಯೋಮಿಕಾ ಸಿಂಗ್ ಮೂಲಕ ಆಪರೇಷನ್ ಸಿಂಧೂರದ ಮಾಹಿತಿಯನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್. ಆರೆಸ್ಸೆಸ್ಸ್ ಜಿಲ್ಲಾ ಕಾರ್ಯವಾಹ ರಾಮ್‌ಕಿರಣ್, ಬಿಜೆಪಿ ಮುಖಂಡರಾದ ಹನುಮಂತೇಗೌಡ, ಕುಮಾರಸ್ವಾಮಿ, ಸಂಪತ್, ಸುರೇಶ್, ರಾಮದಾಸ್, ಜಿ.ಎಚ್.ಮೋಹನ್ ಮತ್ತಿತರರಿದ್ದರು.

