ಮುಖ್ಯ ಸುದ್ದಿ
ಮಾರ್ಚ್ 01 ರಂದು ಯುವ ಸೌರಭ ಕಾರ್ಯಕ್ರಮ
CHITRADURGA NEWS | 29 FEBRUARY 2024
ಚಿತ್ರದುರ್ಗ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಯುವ ಸೌರಭ ಕಾರ್ಯಕ್ರಮವನ್ನು ಮಾರ್ಚ್ 01ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಾರ್ಯಕ್ರಮ ಉದ್ಘಾಟಿಸುವರು. ದಾವಣಗೆರೆ ವಿಶ್ವವಿದ್ಯಾನಿಲಯ ಉಪಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ದಾವಣಗೆರೆ ವಿವಿ ಕುಲಸಚಿವ ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲಸಚಿವ ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ದ್ಯಾಮನಗೌಡ್ರು ಮುದ್ದನಗೌಡ್ರು, ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್, ಕನ್ನಡ ಅಧ್ಯಯನ ವಿಭಾಗ ವಿಷಯ ಸಂಯೋಜಕ ಡಾ.ಹೆಚ್.ಜಿ.ವಿಜಯಕುಮಾರ್ ಭಾಗವಹಿಸುವರು.
ಇದನ್ನೂ ಓದಿ: ನಕಲಿ ಐಎಸ್‍ಐ ಮಾರ್ಕ್ ಬಳಕೆ| ರೋಲ್ ಪೈಪ್ ಉತ್ಪಾಧನಾ ಘಟಕದ ಮೇಲೆ ಬಿಐಎಸ್ ಅಧಿಕಾರಿಗಳ ದಾಳಿ| ಭಾರೀ ಪ್ರಮಾಣದ ಪೈಪ್ ವಶಕ್ಕೆ
ಯುವ ಸೌರಭ ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರದುರ್ಗ ಮೈಲಾರಿ ಮತ್ತು ತಂಡದವರಿಂದ ಜನಪದ ಗೀತೆಗಳು, ಹಿರಿಯೂರಿನ ನಾಗಶ್ರೀ ಭಟ್ ಅವರಿಂದ ಸಮೂಹ ನೃತ್ಯ, ಚಿತ್ರದುರ್ಗದ ಅಫ್ರೀನ್ ಕೌಸರ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ, ಚಿತ್ರಹಳ್ಳಿಯ ಎನ್.ಹನುಮಂತ ಮತ್ತು ತಂಡದಿಂದ ನಾಸಿಕ್ ಡೋಲು, ಎಂ.ಕೆ.ಹಟ್ಟಿಯ ಕೆ.ಮನು ಮತ್ತು ತಂಡದಿಂದ ಕಹಳೆ ವಾಹನ ಹಾಗೂ ಗೋನೂರಿನ ಆಕಾಶ್ ಮತ್ತು ತಂಡದಿಂದ ಕೋಟು ಹಾಸ್ಯ ನಾಟಕ ಪ್ರದರ್ಶನವಿದೆ.
ಅಂದು ಬೆಳಿಗ್ಗೆ 10ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯದ್ವಾರದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.