ಮುಖ್ಯ ಸುದ್ದಿ
ನಕಲಿ ಐಎಸ್‍ಐ ಮಾರ್ಕ್ ಬಳಕೆ | ರೋಲ್ ಪೈಪ್ ಉತ್ಪಾಧನಾ ಘಟಕದ ಮೇಲೆ ಬಿಐಎಸ್ ಅಧಿಕಾರಿಗಳ ದಾಳಿ | ಭಾರೀ ಪ್ರಮಾಣದ ಪೈಪ್ ವಶಕ್ಕೆ
CHITRADURGA NEWS | 29 FEBRUARY 2024
ಚಿತ್ರದುರ್ಗ: ನಕಲಿ ಐಎಸ್‍ಐ ಮಾರ್ಕ್ ಬಳಸಿ ಪ್ಲಾಸ್ಟಿಕ್ ರೋಲ್ ಪೈಪ್ ಉತ್ಪಾಧನೆ ಮಾಡುತ್ತಿದ್ದ ಬಿಐಎಸ್ ಅಧಿಕಾರಿಗಳ ತಂಡ ದಾಳಿ ನಡೆಸಿ 7500 ಮೀಟರ್ ಪೈಪ್ ವಶಪಡಿಸಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ಎಎಚ್‍ಕೆ ಪೈಪ್ ಇಂಡಸ್ಟ್ರೀಸ್ ಸಂಸ್ಥೆ ನಕಲಿ ಐಎಸ್‍ಐ ಮಾರ್ಕ್ ಬಳಕೆ ಮಾಡಿಕೊಂಡು ಎಚ್‍ಡಿಪಿಇ ಪೈಪ್ ಉತ್ಪಾಧನೆ ಮಾಡಲಾಗುತ್ತಿತ್ತು.
ಇದನ್ನೂ ಓದಿ: ಜಿಲ್ಲೆಯ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಭಾಗ್ಯ
ಹುಬ್ಬಳ್ಳಿಯ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ಫೆ.28 ರಂದು ಘಟಕದ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಪೈಪ್ ವಶಪಡಿಸಿಕೊಂಡಿದೆ.
ವಶಕ್ಕೆ ಪಡೆದುಕೊಂಡಿರುವ ಎಚ್‍ಡಿಪಿಇ ಪೈಪ್ ಮೇಲಿರುವುದು ನಕಲಿ ಐಎಸ್‍ಐ ಮಾರ್ಕ್ ಎನ್ನುವುದು ಗೊತ್ತಾಗಿದೆ. ಬಿಐಎಸ್ ಅನುಮತಿ ಪಡೆಯದೇ ಈ ಗುರುತು ಬಳಸಿ ಗ್ರಾಹಕರನ್ನು ವಂಚಿಸಲಾಗಿದೆ. ಇದು ಬಿಐಎಸ್ ಕಾಯ್ದೆ 2016ರ 17ನೇ ಕಲಂ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ | ನಿವೃತ್ತ ಡಿಸಿ ಎಂ.ಕೆ.ಶ್ರೀರಂಗಯ್ಯ ಬಿಜೆಪಿ ಟಿಕೇಟ್ ಆಕಾಂಕ್ಷಿ
ವಸ್ತುಗಳನ್ನು ಖರೀದಿ ಮಾಡುವ ಮುನ್ನ ಗ್ರಾಹಕರು ಬಿಐಎಸ್ ಪರವಾನಗಿ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಐಎಸ್‍ಐ ಗುರುತು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅನುಮಾನ ಇದ್ದರೆ ಬಿಐಎಸ್ ಹುಬ್ಬಳ್ಳಿಯ ಕಚೇರಿಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.