Connect with us

ಕೋಟೆನಾಡಲ್ಲಿ ‘ಯೋಗೋತ್ಸವ’ ವೈಭವ | ಆಯುಷ್‌ ಅಧಿಕಾರಿ ಡಾ.ಚಂದ್ರಕಾಂತ್‌ ನಾಗಸಮುದ್ರ

yoga day

ಮುಖ್ಯ ಸುದ್ದಿ

ಕೋಟೆನಾಡಲ್ಲಿ ‘ಯೋಗೋತ್ಸವ’ ವೈಭವ | ಆಯುಷ್‌ ಅಧಿಕಾರಿ ಡಾ.ಚಂದ್ರಕಾಂತ್‌ ನಾಗಸಮುದ್ರ

CHITRADURGA NEWS | 08 JUNE 2024
ಚಿತ್ರದುರ್ಗ:‌ ಜಿಲ್ಲೆಯಲ್ಲಿ ಜೂನ್‌ 10 ರಿಂದ 20 ರವರೆಗೆ ಯೋಗೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಚಂದ್ರಕಾಂತ್‌ ನಾಗಸಮುದ್ರ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ಖರ್ಚಿಲ್ಲದೆ ಪ್ರಕರಣ ಬಗೆಹರಿಸಿಕೊಳ್ಳಿ | ಜಿಲ್ಲಾ ನ್ಯಾಯಾಲಯದಿಂದ ಸುರ್ವಣಾವಕಾಶ

ಯೋಗೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳು , ನವೋದಯ ಶಾಲೆ, ಪೊಲೀಸ್ ಅಕಾಡೆಮಿ, ಸ್ಕೌಟ್ಸ್‌ ಮತ್ತು ಗೈಡ್‌ ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಯೋಗ ಕಾರ್ಯಕ್ರಮ ನಡೆಸಲಾಗುತ್ತದೆ. ಜೂ.15ರಂದು ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಮತ್ತು ಜೂ.16ರಂದು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಯೋಗೋತ್ಸವ ಕಾರ್ಯಕ್ರಮಕ್ಕೆ ಪ್ರತಿ ಸಂಸ್ಥೆಗೆ ಒಬ್ಬ ಆಯುಷ್ ವೈದ್ಯಾಧಿಕಾರಿ ಹಾಗೂ ಒಬ್ಬ ಸಂಘ ಸಂಸ್ಥೆಯ ಯೋಗ ತರಬೇತಿದಾರರನ್ನು ನಿಯೋಜನೆ ಮಾಡಲಾಗುವುದು. ಇವರು ಕಾರ್ಯಕ್ರಮಕ್ಕೆ ಹಾಜರಾಗಿ ಮಕ್ಕಳಿಗೆ ಯೋಗ ತರಬೇತಿ ಹಾಗೂ ಆಯುಷ್ ಪದ್ದತಿ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ:18 ವರ್ಷದ ಬಳಿಕ ಆಗ್ನೇಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ವಶಕ್ಕೆ

ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳು, ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬಾಪೂಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬ್ರಹ್ಮಕುಮಾರಿ ಸಮಾಜ, ಪತಾಂಜಲಿ ಯೋಗ ಸಂಸ್ಥೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಎಸ್‌ಪಿವೈ ಎಸ್‌ಎಸ್, ಪತಂಜಲಿ ಹಾಗೂ ಎಲ್ಲಾ ಯೋಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version