ಮುಖ್ಯ ಸುದ್ದಿ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಮಹಿಳಾ ದಿನಾಚರಣೆ | ತಿಂಗಳ ವಿಶೇಷ ವ್ಯಕ್ತಿ ಪರಿಚಯ

CHITRADURGA NEWS | 18 MARCH 2024
ಚಿತ್ರದುರ್ಗ: ಚಿಮ್ಮಲಾದ್ರಿ ಸಾಹಿತ್ಯ ವೇದಿಕೆ, ಗಾನಯೋಗಿ ಸಂಗೀತ ಬಳಗದ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಗೀತ ಗಾಯನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: 24,228 ವಿದ್ಯಾರ್ಥಿಗಳಿಗೆ 78 ಪರೀಕ್ಷಾ ಕೇಂದ್ರ
ಚಿನ್ಮಲಾದ್ರಿ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ.ಕೆ. ರಹಮತ್ ವುಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ಅನೇಕ ಹಕ್ಕುಗಳಿವೆ ಅವುಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಕಾನೂನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
18 ಮತ್ತು 19 ನೇ ಶತಮಾನದಲ್ಲಿ ಹೆಣ್ಣಿಗೆ ಸ್ವಾತಂತ್ರವಿರಲಿಲ್ಲ, ಸತಿಸಹಗಮನ ಪದ್ಧತಿ ಇತ್ತು, ರಾಜಾರಾಮ್ ಮೋಹನ್ ರಾಯ್ ಈ ಪದ್ಧತಿಯನ್ನು ವಿರೋಧಿಸಿದರು, 2005ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕು ಜಾರಿಯಾಯಿತು, ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕೊಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ನೀತಿ ಸಂಹಿತೆ ಜಾರಿಯಾಗಿದೆ | ಚುನಾವಣಾ ಪ್ರಚಾರಕ್ಕೆ ಅನುಮತಿ ಕಡ್ಡಾಯ
ಚಿಮ್ಮಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಚ್. ಎಸ್.ಶಫೀವುಲ್ಲಾ ಮಾತನಾಡಿ, ಪ್ರತಿ ವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿಶೇಷ ವ್ಯಕ್ತಿಯನ್ನು ಪರಿಚಯಿಸಿಕೊಂಡು ಬರುತ್ತಿದ್ದೇವೆ, ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮ ಉದ್ದೇಶ, ಈ ಸಾರಿ ನಿವೃತ್ತ ಮುಖ್ಯ ಶಿಕ್ಷಕಿ ಮಂಜುಳಾ ಎಸ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಗುರುತಿಸಲಾಗಿದೆ ಎಂದರು.
ಸಮಾಜದಲ್ಲಿ ಸ್ವಾರ್ಥ ಜಾಸ್ತಿಯಾಗಿದೆ, ನಮ್ಮ ವೇದಿಕೆ ಕನ್ನಡ ನಾಡು ನುಡಿ ನೆಲ ಜಲದ ಉಳಿವಿಗಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ.
ಇದನ್ನೂ ಓದಿ: ಗಡಿಯಲ್ಲಿ ಪೊಲೀಸ್ ಸರ್ಪಗಾವಲು
ಕೊರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರು ಸಾಮಾಜಿಕ ಸ್ಥಾನಮಾನ ಸಿಕ್ಕಿದೆ ಹೊರತು ಕೌಟುಂಬಿಕವಾಗಿ ಭಾವನೆಗಳು ಇನ್ನೂ ಬದಲಾಗಿಲ್ಲ, ಮಹಿಳೆಯ ಮೇಲೆ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ ನಿಂತಿಲ್ಲ, ರಾಜಕೀಯದಲ್ಲಿ ನೀಡಲಾಗಿರುವ ಶೇ.33 ರಷ್ಟು ಮೀಸಲಾತಿ ಪ್ರಭಾವಿ ಮಹಿಳೆಯರಿಗೆ ಸಿಗುತ್ತದೆ ವಿನಹ ಸಾಮಾನ್ಯ ಕುಟುಂಬದ ಮಹಿಳೆಗೆ ಇನ್ನೂ ತಲುಪುತ್ತಿಲ್ಲ, ಹೆಣ್ಣು ಕೇವಲ ಅಡಿಗೆ ಮನೆಗೆ ಅಷ್ಟೇ ಸೀಮಿತವಾಗಿರದೆ ಸಾಹಿತ್ಯದ ಮೂಲಕ ತನ್ನ ಭಾವನೆಗಳನ್ನು ಹಂಚಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಶಿಕ್ಷಕಿ ಡಾ. ಶಬ್ರಿನಾ ಮಹಮದ್ ಅಲಿ, ಗಾನಯೋಗಿ ಸಂಗೀತ ಬಳಗದ ಉಪಸಮಿತಿ ಅಧ್ಯಕ್ಷೆ ಸುಮಾ ರಾಜಶೇಖರ್, ಶಾಂತಮ್ಮ, ಕೆ. ಟಿ. ಸೌಮ್ಯ ಪುತ್ರನ್ ಇದ್ದರು.
