ಮುಖ್ಯ ಸುದ್ದಿ
Woman; ಮಹಿಳೆ ಸ್ವಾವಲಂಬಿಯಾದರೆ ಕುಟುಂಬ ಸದೃಢ | MLC ಕೆ.ಎಸ್. ನವೀನ್
CHITRADURGA NEWS | 06 OCTOBER 2024
ಚಿತ್ರದುರ್ಗ: ಮಹಿಳೆ(Woman) ಸ್ವಾವಲಂಬಿಯಾಗಿ ಆರ್ಥಿಕವಾಗಿ ಬಲಶಾಲಿಯಾದರೆ ಇಡೀ ಕುಟುಂಬವೇ ಸದೃಢವಾದಂತೆ ಎಂದು ವಿಧಾನಪರಿಷತ್ ಸದಸ್ಯ(MLC) ಕೆ.ಎಸ್.ನವೀನ್ ಹೇಳಿದರು.
ಕ್ಲಿಕ್ ಮಾಡಿ ಓದಿ: hi-tech school; ಬೊಮ್ಮೇನಹಳ್ಳಿಯಲ್ಲಿ ಹೈಟೆಕ್ ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದ ಮಹಿಳೆ ಈಗ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿರುವುದರಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ.
ವೀರವನಿತೆ ಒನಕೆ ಓಬವ್ವ, ಕಿತ್ತೂರುರಾಣಿಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಇವರುಗಳು ಸಂಕೋಲೆಯನ್ನು ತೊರೆದು ದೇಶ ಸೇವೆಗಾಗಿ ಹೋರಾಡಿದ ದಿಟ್ಟ ಮಹಿಳೆಯರು.
ಕ್ಲಿಕ್ ಮಾಡಿ ಓದಿ: ನಿಮ್ಮ ಖಾತೆಗೂ ಬಂತಾ PMKISAN 2 ಸಾವಿರ | ಇಲ್ಲಿದೆ ನೋಡಿ ಚೆಕ್ ಮಾಡುವ ವಿಧಾನ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ದೂರದೃಷ್ಟಿಯಿಂದ ಚಿಂತಿಸಿ ಮಹಿಳೆಯರ ಮೇಲೆ ನಂಬಿಕೆಯಿಟ್ಟು ಬ್ಯಾಂಕ್‍ಗಳಿಂದ ಸಾಲ ಸಿಗುವಂತ ವ್ಯವಸ್ಥೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರನ್ನು ಸ್ವಾವಲಂಭಿಯನ್ನಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಅಂಗವಿಕಲರಿಗೆ ಮಾಶಾಸನ, ವಿದ್ಯಾರ್ಥಿವೇತನ, ನಿರಾಶ್ರಿತರಿಗೆ ವಾತ್ಸಲ್ಯ ಮನೆ ಕಟ್ಟಿಸಿಕೊಡುವುದು, ವಯೋವೃದ್ದರಿಗೆ ವಾಟರ್‍ಬೆಡ್ ಇನ್ನಿತರೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: VV Sagara: ವಿವಿ ಸಾಗರಕ್ಕೆ ಭರ್ಜರಿ ಒಳಹರಿವು | ಮಳೆಯಿಂದ ಮೈದುಂಬಿದ ವೇದಾವತಿ
ಸ್ವಸಹಾಯ ಸಂಘಗಳ ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದುಪಯೋಗಪಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಂಡಿದ್ದಾರೆಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಒಕ್ಕೂಟದ ಪದಾಧಿಕಾರಿಗಳ ಸಂಘವನ್ನು ಬಲಪಡಿಸುವ ಉದ್ದೇಶವಿಟ್ಟುಕೊಂಡು ಸಮಾವೇಶಗಳನ್ನು ನಡೆಸಲಾಗುತ್ತಿದೆ. ಕಾರ್ಯಕರ್ತರ ಸಹಭಾಗಿತ್ವದಲ್ಲಿ ಯೋಜನೆಯ ವಿವಿಧ ಸೌಲಭ್ಯಗಳನ್ನು ಪಾಲುದಾರರಿಗೆ ತಲುಪಿಸುವುದು ಸುಲಭವಾಗುತ್ತದೆ.
ಜಿಲ್ಲೆಯಲ್ಲಿ 25 ಸಾವಿರ ಸಂಘಗಳಿದ್ದು, ತಾಲ್ಲೂಕಿನಲ್ಲಿ ಆರುವರೆ ಸಾವಿರ ಸಂಘಗಳಿದೆ. ಸಂಘಟನೆ ಗಟ್ಟಿಗೊಳ್ಳಲು ಒಕ್ಕೂಟದ ಪದಾಧಿಕಾರಿಗಳಲ್ಲಿರುವ ಪ್ರಾಮಾಣಿಕತೆ ಕಾರಣ ಎಂದರು.
ತಾಲ್ಲೂಕು ಯೋಜನಾಧಿಕಾರಿ ಬಿ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಲಿಕ್ ಮಾಡಿ ಓದಿ: Chitradurga: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆ | ಚಿತ್ರದುರ್ಗದ ಇಬ್ಬರು ಸಮಿತಿಗೆ ಆಯ್ಕೆ
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಚಿತ್ರದುರ್ಗ ಶಾಖೆಯ ಸಹಾಯಕ ಪ್ರಬಂಧಕರಾದ ಮಧುಶ್ರಿ, ಸುಬ್ಬಾರೆಡ್ಡಿ, ಸುರೇಂದ್ರ ಇದ್ದರು.