ಮುಖ್ಯ ಸುದ್ದಿ
ಈ ವರ್ಷ ಯಾವ ಮಳೆ ಚೆನ್ನಾಗಿದೆ | ಯಾವ ಮಳೆ ಎಷ್ಟು ಸುರಿಯುತ್ತೆ | ಪಂಚಾಗದ ಪ್ರಕಾರ ಮಳೆ ಭವಿಷ್ಯ
CHITRADURGA NEWS | 12 MAY 2024
ಚಿತ್ರದುರ್ಗ: ಕಳೆದ ವರ್ಷ ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ. ಇಡೀ ರಾಜ್ಯಕ್ಕೆ ಭೀಕರ ಬರ ಬಂದೊದಗಿದೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯನ್ನು ಜನ, ಜಾನುವಾರುಗಳು ಎದುರಿಸುತ್ತಿವೆ.
ಬಹುತೇಕ ಕಡೆಗಳಲ್ಲಿ ಅಡಿಕೆ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ತೀರ್ಥಹಳ್ಳಿಯಲ್ಲಿ 55 ಸಾವಿರದ ಆಸುಪಾಸಿಗೆ ಅಡಿಕೆ ಬೆಲೆ
ಈ ನಡುವೆ ಕಳೆದೊಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ.
ಕಳೆದ ವರ್ಷ ಮಳೆ ಇಲ್ಲದೆ ತೊಂದರೆ ಅನುಭವಿಸಿದ ರೈತರಿಗೆ ಈ ವರ್ಷದ ಮಳೆಯ ಬಗ್ಗೆ ಹವಾಮಾನ ಇಲಾಖೆ ಒಂದಿಷ್ಟು ಭರವಸೆ ನೀಡಿದೆ.
ಇನ್ನೂ ಇದೇ ಮಳೆಯ ಲೆಕ್ಕಾಚಾರ ಪಂಚಾಗದ ಪ್ರಕಾರ ಹೇಗಿದೆ. ಈ ವರ್ಷ ಯಾವ ಮಳೆ ಉತ್ತಮವಾಗಿದೆ. ಯಾವ ಮಳೆ ಸಾಮಾನ್ಯವಾಗಿದೆ. ಯಾವಾಗ ಹೊಸ ಮಳೆಗಳು ಪ್ರಾರಂಭವಾಗುತ್ತವೆ ಇತ್ಯಾದಿ ವಿವರಗಳನ್ನು ಈ ವರದಿಯಲ್ಲಿ ನೋಡಿ..
ಮಳೆಯ ಹೆಸರು | ಮಳೆ ಪ್ರಾರಂಭದ ದಿನ | ಮಳೆ ಹೇಗಿರುತ್ತೆ |
---|---|---|
ಅಶ್ವಿನಿ | 13-04-2024 | ಸಾಮಾನ್ಯ ಮಳೆ |
ಭರಣಿ | 27-04-2024 | ಸಾಮಾನ್ಯ ಮಳೆ |
ಕೃತಿಕಾ | 11-05-2024 | ಉತ್ತಮ ಮಳೆ |
ರೋಹಿಣಿ, | 24-05-2024 | ಸಾಮಾನ್ಯ ಮಳೆ |
ಮೃಗಶಿರಾ | 07-06-2024 | ಸಾಮಾನ್ಯ ಮಳೆ |
ಆರಿದ್ರಾ | 21-06-2024 | ಸಾಮಾನ್ಯ ಮಳೆ |
ಪುನರ್ವಸು | 05-07-2024 | ಸಾಮಾನ್ಯ ಮಳೆ |
ಪುಷ್ಯ | 19-07-2024 | ಉತ್ತಮ ಮಳೆ |
ಆಶ್ಲೇಷ | 02-08-2024 | ಸಾಮಾನ್ಯ ಮಳೆ |
ಮಘೆ | 16-08-2024 | ಉತ್ತಮ ಮಳೆ |
ಹುಬ್ಬ | 30-08-2024 | ಸಾಮಾನ್ಯ ಮಳೆ |
ಉತ್ತರೆ | 13-09-2024 | ಸಾಮಾನ್ಯ ಮಳೆ |
ಹಸ್ತ | 26-09-2024 | ಉತ್ತಮ ಮಳೆ |
ಚಿತ್ತಾ | 10-10-2024 | ಉತ್ತಮ ಮಳೆ |
ಸ್ವಾತಿ | 23-10-2024 | ಸಾಮಾನ್ಯ ಮಳೆ |
ವಿಶಾಖ | 6-11-2024 | ಸಾಮಾನ್ಯ ಮಳೆ |