ಮುಖ್ಯ ಸುದ್ದಿ
VaniVilasa Dam: ವಿವಿ ಸಾಗರಕ್ಕೆ ಒಳಹರಿವು ಬಂದ್ | ಎಷ್ಟು ಅಡಿವರೆಗೆ ಬಂತು ನೀರು
CHITRADURGA NEWS | 04 NOVEMBER 2024
ಚಿತ್ರದುರ್ಗ: ಕಳೆದ ಮೂರು ತಿಂಗಳಿಂದ ನಿರಂತರ ಒಳಹರಿವು ಹೊಂದಿದ್ದ ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ (VaniVilasa Dam) ಜಲಾಶಯಕ್ಕೆ ಒಳಹರಿವು ಪೂರ್ಣ ಪ್ರಮಾಣದಲ್ಲಿ ಬಂದ್ ಆಗಿದೆ.
ನವೆಂಬರ್ 3 ಭಾನುವಾರ 462 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಆದರೆ, ನವೆಂಬರ್ 4 ಸೋಮವಾರ ಒಳಹರಿವು ಸಂಪೂರ್ಣ ನಿಂತು ಹೋಗಿದೆ.
ಇದನ್ನೂ ಓದಿ: ಚಿತ್ರದುರ್ಗ-ಚಳ್ಳಕೆರೆ ನಗರಸಭೆ ಉಪಚುನಾವಣೆ | ತೆರವಾದ ಸ್ಥಾನಗಳಿಗೆ ಮೀಸಲಾತಿ ನಿಗಧಿ
ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಈ ಅಂಶ ಬೆಳೆಕಿಗೆ ಬಂದಿದ್ದು, ಇಷ್ಟು ದಿನ ಹರಿಯುತ್ತಿದ್ದ ಹಳ್ಳ, ಕೊಳ್ಳಗಳ ಬಸಿಯೂ ನಿಂತು ಹೋಗಿದೆ.
ಭದ್ರಾದಿಂದ ಬರುತ್ತಿದ್ದ 700 ಕ್ಯೂಸೆಕ್ ನೀರನ್ನೂ ನಿಲ್ಲಿಸಲಾಗಿದೆ. ಎತ್ತಿನ ಹೊಳೆ ನೀರು ವಿವಿ ಸಾಗರ ತಲುಪಿದ್ದು ಗೊತ್ತೇ ಆಗಲಿಲ್ಲ. ಈ ಮೂಲಕ ಈ ವರ್ಷ ಕೂಡಾ ವಿವಿ ಸಾಗರ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುವ ಕನಸು ಸದ್ಯಕ್ಕೆ ಅಲ್ಲಿಗೆ ನಿಂತಿದೆ.
ಇದನ್ನೂ ಓದಿ: ಸರ್ಕಾರಿ ವಕೀಲ ಜಗದೀಶ್ ಕಾರು ಭೀಕರ ಅಪಘಾತ | ಹಿಂಬದಿಯಿಂದ ಬಸ್ ಡಿಕ್ಕಿ
ನವೆಂಬರ್ 4 ಸೋಮವಾರಕ್ಕೆ ವಿವಿ ಸಾಗರಕ್ಕೆ 127.20 ಅಡಿ ನೀರು ಬಂದಿದೆ. ಜಲಾಶಯದಲ್ಲಿ ಸದ್ಯ 28.07 ಟಿಎಂಸಿ ನೀರು ಸಂಗ್ರಹವಾಗಿದೆ.
ಬಹುತೇಕ ಜಲಾಶಯ ಭರ್ತಿಯಾಗಿದ್ದು, ಕೋಡಿಯಲ್ಲಿ ನೀರು ಹರಿಯಲು ಇನ್ನೂ 3 ಅಡಿಯಷ್ಟು ಬಾಕಿ ಇದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಈ ದಿನಕ್ಕೆ 5 ಟಿಎಂಸಿ ನೀರು ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 5.35 ಅಡಿವರೆಗೆ ಹೆಚ್ಚು ನೀರು ಬಂದಿದೆ.