ಮುಖ್ಯ ಸುದ್ದಿ
VaniVilasa: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ
CHITRADURGA NEWS | 02 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದಲ್ಲಿ ಈ ಕ್ಷಣಕ್ಕೆ 28.04 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಒಟ್ಟು 30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹವಾಗಿದ್ದು, ಭರ್ತಿಯಾಗಿ ಕೋಡಿ ಬೀಳಲು ಇನ್ನು 2 ಟಿಎಂಸಿ ಅಡಿ ಮಾತ್ರ ಬಾಕಿ ಇದೆ.
ಇದನ್ನೂ ಓದಿ: ಕೋಟೆ ನಾಡಿನಲ್ಲಿ ಕನ್ನಡದ ಕಂಪು | ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆ
ಡ್ಯಾಮಿನ ಎತ್ತರದ ಪ್ರಕಾರ, 130 ಅಡಿ ಎತ್ತರದ ಈ ಜಲಾಶಯದಲ್ಲಿ ನವೆಂಬರ್ 2 ರಂದು ಬೆಳಗ್ಗೆ ಮಾಪನ ಮಾಡಿದಾಗ 127.15 ಅಡಿವರೆಗೆ ನೀರು ಬಂದಿದೆ.
ಹಾರನಕಣಿವೆ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಕೋಡಿಗೆ ನೀರು ಬಂದು ಜಮಾವಣೆಯಾಗಿದೆ. ಕೋಡಿಗೆ ಅಡ್ಡ ಇರುವ ಕಟ್ಟೆಯನ್ನು ನೀರು ದಾಟಿ ಹೋಗಲು ಇನ್ನೂ 2.85 ಅಡಿ (ಹೆಚ್ಚು ಕಡಿಮೆ 3 ಅಡಿ) ನೀರು ಬರಬೇಕಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕನ್ನಡ ಭವನಕ್ಕೆ ಪ್ಲಾನ್ ತಯಾರಿಸಿ | ಆದ್ಯತೆಯ ಮೇಲೆ ಅನುದಾನ ಒದಗಿಸುವ ಭರವಸೆ
ಭದ್ರಾ ಜಲಾಶಯದಿಂದ ಪ್ರತಿ ದಿನ ಹರಿದು ಬರುತ್ತಿದ್ದ 700 ಕ್ಯೂಸೆಕ್ ನೀರನ್ನು ಮಳೆಯ ಕಾರಣಕ್ಕೆ ನಿಲ್ಲಿಸಲಾಗಿದೆ.
ಹಳ್ಳ, ಕೊಳ್ಳಗಳು, ವೇದಾವತಿ ನದಿಯ ಮೂಲಕ ಸಾಕಷ್ಟು ಮಳೆಯಾಗಿದ್ದ ಕಾರಣಕ್ಕೆ ಹರಿದು ಬರುತ್ತಿರುವ ಬಸಿ ನೀರಿನಿಂದಲೇ ಒಳಹರಿವು ಬರುತ್ತಿದೆ.
ಇದನ್ನೂ ಓದಿ: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!
ನವೆಂಬರ್ 2 ಶನಿವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 23.65 ಟಿಎಂಸಿ ನೀರು ಸಂಗ್ರಹವಾಗಿದ್ದು, 121.90 ಅಡಿವರೆಗೆ ನೀರಿನ ಮಟ್ಟ ಇತ್ತು.