ಮುಖ್ಯ ಸುದ್ದಿ
ತರಳಬಾಳು ಹುಣ್ಣಿಮೆ ಆಚರಣೆ | ಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು
CHITRADURGA NEWS | 19 FEBRUARY 2024
ಚಿತ್ರದುರ್ಗ: ಸಿರಿಗೆರೆಯ ತರಳಬಾಳು ಮಠದಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ಸದ್ಧರ್ಮ ನ್ಯಾಯಪೀಠಕ್ಕೆ ಎರಡು ವಾರ ಬಿಡುವು ನೀಡಲಾಗಿದೆ.
ಬರದ ಹಿನ್ನಲೆಯಲ್ಲಿ ಈ ಬಾರಿ ತರಳಬಾಳು ಹುಣ್ಣಿಮೆ ಆಚರಣೆಯನ್ನು ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಆ ಕಾರಣಕ್ಕೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ನಡೆಯುವ ಸದ್ಧರ್ಮ ನ್ಯಾಯಪೀಠಕ್ಕೆ ಫೆಬ್ರುವರಿ 19 ಮತ್ತು ಫೆ. 26 ರಂದು ರಜೆ ನೀಡಲಾಗಿದೆ.
ಇದನ್ನೂ ಓದಿ: ಮಠಗಳಲ್ಲಿ ಹೋಮ – ಹವನ ನಾಚಿಕೆಗೇಡಿನ ಸಂಗತಿ| ಚಿಂತಕ ಎಸ್.ಜಿ.ಸಿದ್ದರಾಮಯ್ಯ
ಆ ದಿನಗಳಂದು ಯಾವುದೇ ಕಲಾಪಗಳು ನಡೆಯುವುದಿಲ್ಲ ಹಾಗೂ ಹೊಸ ಪ್ರಕರಣಗಳನ್ನು ದಾಖಲುಗೊಳಿಸುವುದಿಲ್ಲ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ