ಮೊಳಕಾಳ್ಮೂರು
ಮರದ ದಿಮ್ಮಿ ಕಳ್ಳತನ ಯತ್ನ | ಗಿಡ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿದ ನ್ಯಾಯಾಲಯ
CHITRADURGA NEWS | 05 APRIL 2025
ಮೊಳಕಾಲ್ಮೂರು: ಅರಣ್ಯ ಪ್ರದೇಶದೊಳಗೆ ಮರದ ದಿಮ್ಮಿಗಳನ್ನು ಕಳುವು ಮಾಡಲು ಯತ್ನಿಸಿ ಸಿಕ್ಕಿಬಿದ್ದವರಿಗೆ ಗಿಡ ನೆಟ್ಟು ಪೋಷಣೆ ಮಾಡುವ ಶಿಕ್ಷೆ ವಿಧಿಸಲಾಗಿದೆ.
ಜಿಲ್ಲೆಯ ಮೊಳಕಾಲ್ಮೂರು JMFC ನ್ಯಾಯಾಲಯ ಆರೋಪಿಗಳಿಗೆ ಈ ರೀತಿಯ ಶಿಕ್ಷೆ ನೀಡಿ ಆದೇಶಿಸಿದೆ.
ಇದನ್ನೂ ಓದಿ: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ
2016ರ ಏಪ್ರಿಲ್ 14ರಂದು ತಾಲ್ಲೂಕು ಮುತ್ತಿಗಾರಹಳ್ಳಿ ಕಾವಲು ಅರಣ್ಯ ಪ್ರದೇಶದಿಂದ 4 ಜನ ಮರದ ದಿಮ್ಮಿಯನ್ನು ಕದ್ದು ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದರು. ತಡೆದು ಪ್ರಶ್ನೆ ಮಾಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಎತ್ತಿನಗಾಡಿ ಹತ್ತಿಸುವ ಯತ್ನ ನಡೆಸಿ, ಗಾಡಿಯನ್ನು ನಿಲ್ಲಿಸದೆ ದಿಮ್ಮಿಯನ್ನು ಅಲ್ಲಿಯೇ ಎಸೆದು ಹೋಗಿದ್ದರು.
ಈ ಬಗ್ಗೆ ಅರಣ್ಯಾಧಿಕಾರಿ ಬಿ.ಎನ್. ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಮಳೆ ವಿವರ | ಏ.3 ರಂದು ಸುರಿದ ಮಳೆಯ ಪೂರ್ಣ ವಿವರ
ಪ್ರಕರಣ ಕುರಿತು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು, ಆರೋಪಿಗಳಿಗೆ ತಲಾ 4,500 ದಂಡ ವಿಧಿಸಲಾಗಿದೆ.
ದಂಡ ಕಟ್ಟದೆ ಇದ್ದಲ್ಲಿ 35 ದಿನಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ಜತೆಗೆ ಎಲ್ಲ ಆರೋಪಿಗಳು ತಲಾ 15 ಸಸಿಗಳನ್ನು ಅರಣ್ಯದಲ್ಲಿ ನೆಟ್ಟು ಒಂದು ವರ್ಷ ಕಾಲ ಅವುಗಳ ಪೋಷಣೆ ಮಾಡಬೇಕು. ತಪ್ಪಿದಲ್ಲಿ ಒಂದು ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು.
ಇದನ್ನೂ ಓದಿ: ರಾಜ್ಯ ಸರ್ಕಾರದ ಅಬಕಾರಿ ನೀತಿ ವಿರೋಧಿಸಿ ಮದ್ಯ ಮಾರಾಟಗಾರರ ಪ್ರತಿಭಟನೆ
ಸಸಿ ಪೋಷಣೆ ಮಾಡುವ ಬಗ್ಗೆ ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಮಹಮದ್ ಶಂಶೀರ್ ಆಲಿ ಅವರು ವಾದ ಮಂಡಿಸಿದರು.