ಮೊಳಕಾಳ್ಮೂರು
ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ
CHITRADURGA NEWS | 04 APRIL 2025
ಚಿತ್ರದುರ್ಗ: ಬೆಸ್ಕಾಂ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದ ಪ್ರಕರಣದಲ್ಲಿ ಮೊಳಕಾಲ್ಮೂರು ನ್ಯಾಯಾಲಯ ಬೆಸ್ಕಾಂ ಎಇಇ, ಮೆಕ್ಯಾನಿಕ್ ಹಾಗೂ ಮತ್ತೊಬ್ಬ ಸಿಬ್ಬಂದಿ ಸೇರಿ ಮೂರು ಜನರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಮೊಳಕಾಲ್ಮೂರು ಪಟ್ಟಣದ ಭೋವಿ ಕಾಲೋನಿಯ ಮೂರ್ತಿ ಎಂಬುವವರ 14 ವರ್ಷದ ಪುತ್ರ ಕಿರಣ್ ಆಟವಾಡುತ್ತಿದ್ದಾಗ ಪಂಪ್‌ಹೌಸ್ ಬಳಿ 2015 ಜೂನ್ 1 ರಂದು ಆಟವಾಡುತ್ತಿದ್ದಾಗ ಸಮೀಪದ ವಿದ್ಯುತ್ ಕಂಬದಲ್ಲಿದ್ದ ಸ್ವಚ್ ಬೋರ್ಡ್ ಹಳೆಯದಾಗಿದ್ದು, ಇದರ ವೈಯರ್ ತಾಗಿ ಬಾಲಕ ಮೃತಪಟ್ಟಿದ್ದ.
ಇದನ್ನೂ ಓದಿ:ಚಿತ್ರದುರ್ಗಕ್ಕೆ ವರ್ಷದ ಮೊದಲ ಮಳೆ | ಇಳೆ ತಂಪಾಗುವಂತೆ ಸುರಿದ ಮಳೆ
ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿಎಸ್‌ಐ ಲೋಕೇಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸದರಿ ಪ್ರಕರಣದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಗಮನಿಸಿ, ಎಇಇ ಸೇರಿದಂತೆ ಮೂರು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.
ಇದನ್ನೂ ಓದಿ: ಮಳೆ ವಿವರ | ಏ.3 ರಂದು ಸುರಿದ ಮಳೆಯ ಪೂರ್ಣ ವಿವರ
ಪ್ರಕರಣದ ವಿಚಾರಣೆ ನಡೆಸಿದ ಮೊಳಕಾಲ್ಮೂರು ಪ್ರಧಾನ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾಂಕ ಕೆ.ಟಿ. ಅವರು ಆರೋಪಿಗಳಾದ ಬೆಸ್ಕಾಂ ಎಇಇ, ಮೆಕ್ಯಾನಿಕ್ ಮತ್ತೊಬ್ಬರಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಶಂಶಿರ್ ಅಲಿ ವಾದ ಮಂಡಿಸಿದ್ದರು.