CHITRADURGA NEWS | 01 MARCH 2024
ಚಿತ್ರದುರ್ಗ: ಬಾಲ ನಟರು ಹಾಗೂ ಬಾಲ ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಛಿಸುವ ಸಿನಿಮಾ ಅಥವಾ ಧಾರವಾಹಿ ನಿರ್ದೇಶಕರು, ನಿರ್ಮಾಪಕರು, ಇಲ್ಲವೆ ಆಯೋಜಕರು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ ಪತ್ರ ಪಡೆಯುವುದು ಕಡ್ಡಾಯ.
ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1896ರ ಕರ್ನಾಟಕ ನಿಯಮಗಳು 2ಸಿ ರಲ್ಲಿ ಒಬ್ಬ ಕಲಾವಿದನಾಗಿ ಬಾಲ ನಟ, ನಟಿಯಾಗಿ ಕೆಲಸವನ್ನು ಒಂದು ದಿನದಲ್ಲಿ 5 ಗಂಟೆಗಳಿಗಿಂತ ಮತ್ತು ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ.
ಮಕ್ಕಳನ್ನು ಬಳಸಿ ಸಂಪೂರ್ಣ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ, ಶೋಷಣೆ ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶ ನೀಡಬಾರದು. ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸುವುದು.
ಇದನ್ನೂ ಓದಿ: ನಕಲಿ ಐಎಸ್ಐ ಮಾರ್ಕ್ ಬಳಕೆ | ರೋಲ್ ಪೈಪ್ ಉತ್ಪಾಧನಾ ಘಟಕಗಳ ಮೇಲೆ ಬಿಐಎಸ್ ಅಧಿಕಾರಿಗಳ ದಾಳಿ | ಭಾರೀ ಪ್ರಮಾಣದ ಪೈಪ್ ವಶಕ್ಕೆ
ಮಕ್ಕಳ ನಟನಾ ಕೆಲಸದ ಚಟುವಟಿಕೆ ನಟನೆಗೆ ಭಾಗವಹಿಸುವ ಮಕ್ಕಳ ಪೋಷಕರ, ಪಾಲಕರ ಒಪ್ಪಿಗೆ ಪತ್ರವನ್ನು ಪಡೆದು ಸಿನಿಮಾ ಅಥವಾ ಧಾರವಾಹಿ ನಿರ್ದೇಶಕರು, ನಿರ್ಮಾಪಕರು, ಇಲ್ಲವೆ ಆಯೋಜಕರು ಕಡ್ಡಾಯವಾಗಿ ಪ್ರದೇಶ ಕಾರ್ಯವ್ಯಾಪ್ತಿಯ ಜಿಲ್ಲಾ ದಂಡಾಧಿಕಾರಿಗಳ ಪೂರ್ವಾನುಮತಿಯೊಂದಿಗೆ ಮುಚ್ಚಳಿಕೆ ಪತ್ರವನ್ನು ಮತ್ತು ನಮೂನೆ ಸಿ ಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕಾರ್ಮಿಕ ಅಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸದಸ್ಯ ಕಾರ್ಯದರ್ಶಿ ಜಿ.ಇಬ್ರಾಹಿಂ ಸಾಬ್ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number